ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿಎ ವಾರ್ಷಿಕೋತ್ಸವಕ್ಕೆ ಬರ್ತೀನಿ: ಮಮತಾ (Mamata Banerjee | West Bengal | UPA II | Anniversary | Railway Minister)
Bookmark and Share Feedback Print
 
ಯುಪಿಎ-II ಒಕ್ಕೂಟದ ಪ್ರಥಮ ವಾರ್ಷಿಕೋತ್ಸವ ಸಮಾರಂಭಕ್ಕೆ ಹಾಜರಾಗುವುದಾಗಿ ತಿಳಿಸಿರುವ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಜನರು ಇಚ್ಛಿಸುವವರೆಗೂ ತಾನು ಯುಪಿಎಯಲ್ಲೇ ಉಳಿಯುವುದಾಗಿ ಹೇಳಿದ್ದಾರೆ.

ಚುನಾವಣಾ ರ‌್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದ ಅವರು, ಈ ಹಿಂದಿನಂತೆ ತಾನು ರೈಲ್ವೇ ಸಚಿವಾಲಯವನ್ನು ತೊರೆಯುವುದಿಲ್ಲ ಎಂದೂ ಹೇಳಿದ್ದಾರೆ. ಈ ಮೊದಲು ಅವರು, ತನ್ನ ಕಾರ್ಯಕ್ಷೇತ್ರ ಪಶ್ಚಿಮ ಬಂಗಾಳವೇ ಹೊರತು, ದೆಹಲಿಯೇನಲ್ಲ ಎಂದು ಹೇಳಿದ್ದರು.

ಪಶ್ಚಿಮ ಬಂಗಾಳದಲ್ಲಿ ಮೇ 30ರಂದು ನಡೆಯಲಿರುವ ಪೌರ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಳ್ಳದಿರುವುದಕ್ಕೆ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಬ್ಯಾನರ್ಜಿ, ಒಂದೋ ನಾವು ಉಳಿಯಬೇಕು ಇಲ್ಲವೇ ಸಿಪಿಎಂ ಉಳಿಯಬೇಕು. ಮಧ್ಯೆ ಯಾರೂ ಇರಬಾರದು ಎಂದು ಖಡಾಖಂಡಿತವಾಗಿ ನುಡಿದರು.

ತನ್ನ ಪಕ್ಷವು ಮೈತ್ರಿಗೆ ಬಯಸಿತ್ತು ಎಂದು ಹೇಳಿಕೊಂಡ ಯುಪಿಎ ಸದಸ್ಯೆಯಾಗಿರುವ ಮಮತಾ, ಸಿಪಿಎಂಗೆ ಲಾಭವಾಗಿಸುವ ನಿಟ್ಟಿನಲ್ಲಿ ಮತಗಳು ವಿಭಜನೆಯಾಗಲು ಆ ಪಕ್ಷವು ಬಯಸಿದೆ ಎಂದು ಕಾಂಗ್ರೆಸನ್ನು ಉಲ್ಲೇಖಿಸದೆಯೇ ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ