ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದುರಂತ: ಮಂಗಳೂರಿನ ಹರ್ಷಿಣಿಯ ಕೊನೆಯ ಟ್ವೀಟ್ (Harishini | netizentwo | Twitter | Mangalore Air Crash | Poonja)
Bookmark and Share Feedback Print
 
PR
ಮಂಗಳೂರಿನಲ್ಲಿ ಶನಿವಾರ ನಡೆದ ವಿಮಾನ ದುರಂತದಲ್ಲಿ ಮಡಿದವರಲ್ಲಿ ಟ್ವಿಟ್ಟರ್‌ನಲ್ಲಿ netizentwo ಎಂಬ ಖಾತೆ ಹೊಂದಿರುವ ಹರ್ಷಿಣಿ, ಆಕೆಯ ತಾಯಿ ಗಲ್ಫ್ ನ್ಯೂಸ್ ಪತ್ರಿಕೆಯ ಸಿಬ್ಬಂದಿ ಮಣಿರೇಖಾ ಪೂಂಜಾ ಮತ್ತು ತಂದೆ ಶಶಿಕಾಂತ್ ಪೂಂಜಾ ಕೂಡ ಮೃತಪಟ್ಟಿದ್ದಾರೆ.

ಗಲ್ಫ್ ನ್ಯೂಸ್ ಪತ್ರಿಕೆಯ ಹಣಕಾಸು ವಿಭಾಗದಲ್ಲಿ ಉದ್ಯೋಗಿಯಾಗಿದ್ದ ಮಣಿರೇಖಾ, ತಮ್ಮ ಸೋದರ ಸಂಬಂಧಿಯ ಮದುವೆಗೆಂದು ಮಂಗಳೂರಿಗೆ ಹೊರಟಿದ್ದರು. ಮಣಿರೇಖಾ-ಶಶಿಕಾಂತ್ ಇತ್ತೀಚೆಗಷ್ಟೇ ತಮ್ಮ ವೈವಾಹಿಕ ಜೀವನದ ಬೆಳ್ಳಿ ಹಬ್ಬ ಆಚರಿಸಿಕೊಂಡಿದ್ದರು.

ಹರ್ಷಿಣಿ ಮಾಧ್ಯಮ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ನೆಟಿಜನ್‌ಟು ಹೆಸರಿನ ಟ್ವಿಟ್ಟರ್ ಖಾತೆ ಹೊಂದಿದ್ದರು. ಟ್ವಿಟ್ಟರಿನಲ್ಲಿ ಅವರು ರಾತ್ರಿ 12.30ಕ್ಕೆ ತಮ್ಮ ಮೊಬೈಲ್ ಮೂಲಕ ಮಾಡಿದ ಕೊನೆಯ ಟ್ವೀಟ್ 'ಅಟ್ ದ ಏರ್‌ಪೋರ್ಟ್ ಎಂಡ್ ಬ್ಲಾ=_= ಓನ್ಲಿ ಥಿಂಗ್ ಟು ಲುಕ್ ಫಾರ್ವರ್ಡ್ ಟು ಇಸ್ ದಿ ರೈನ್' ಎಂದಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ