ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೂರು ದಶಕದಲ್ಲಿ ಕ್ಷಮಾದಾನ ಸಿಕ್ಕಿದ್ದು 10 ಮಂದಿಗೆ ಮಾತ್ರ! (Mercy petitions | President | life imprisonment | India)
Bookmark and Share Feedback Print
 
ಕಳೆದ 30 ವರ್ಷಗಳ ಅವಧಿಯಲ್ಲಿ ರಾಷ್ಟ್ರಪತಿಗಳಿಂದ 77 ಕ್ಷಮಾದಾನ ಅರ್ಜಿಗಳು ವಿಲೇವಾರಿಯಾಗಿದ್ದು, ಅವುಗಳಲ್ಲಿ 10 ಮಂದಿ ಮಾತ್ರ ತಮ್ಮ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿಕೊಳ್ಳಲು ಸಫಲರಾಗಿದ್ದಾರೆ.

ಇತ್ತೀಚಿನ ಮಾಹಿತಿಗಳ ಪ್ರಕಾರ 29 ಕುಖ್ಯಾತ ಕೈದಿಗಳ ಕ್ಷಮಾದಾನ ಅರ್ಜಿಗಳು ರಾಷ್ಟ್ರಪತಿಯವರ ಮುಂದಿದೆ. ಅದರಲ್ಲಿ 24 ಅರ್ಜಿಗಳು ಇನ್ನೂ ರಾಷ್ಟ್ರಪತಿಯವರ ಕಾರ್ಯಾಲಯದಲ್ಲಿ ಪರಿಗಣನೆಗಾಗಿ ಕಾಯುತ್ತಿದ್ದರೆ, ಮೂರು ಅರ್ಜಿಗಳು ಗೃಹ ಸಚಿವಾಲಯ ಹಾಗೂ ಎರಡು ಅರ್ಜಿಗಳು ರಾಜ್ಯ ಸರಕಾರಗಳ ಅಭಿಪ್ರಾಯಕ್ಕಾಗಿ ಸರದಿಯಲ್ಲಿವೆ.

ಜೂನ್ ಎರಡರಂದು ರಾಷ್ಟ್ರಪತಿಯರ ಕಾರ್ಯಾಲಯದಿಂದ ಪಡೆದುಕೊಳ್ಳಲಾಗಿರುವ ಮಾಹಿತಿ ಹಕ್ಕು ಕಾಯ್ದೆಯ ಉತ್ತರದಲ್ಲಿ ಈ ವಿವರಣೆಗಳು ಲಭ್ಯವಾಗಿವೆ.

ರಾಷ್ಟ್ರಪತಿ ಕಾರ್ಯಾಲಯದಲ್ಲಿ ಬಿದ್ದಿರುವ ಕ್ಷಮಾದಾನ ಮನವಿಗಳಲ್ಲಿ ಅತೀ ಹಳೆಯ ಅರ್ಜಿಗಳೆಂದರೆ ಶ್ಯಾಮ್ ಮನೋಹರ್, ಶಿಯೋ ರಾಮ್, ಪ್ರಕಾಶ್ ಸುರೇಶ್, ರವೀಂದ್ರ ಮತ್ತು ಹರೀಶ್ ಅವರದ್ದು. ಉತ್ತರ ಪ್ರದೇಶದವರಾಗಿರುವ ಇವರು ತಮ್ಮ ಸಹೋದರನ ಹತ್ಯೆಗೆ ಪ್ರತೀಕಾರವಾಗಿ ಕುಟುಂಬವೊಂದರ ಐವರನ್ನು ಕೊಂದಿದ್ದರು.

ಕ್ಷಮಾದಾನ ಅರ್ಜಿಯನ್ನು 1998ರಲ್ಲಿ ರಾಜ್ಯ ಸರಕಾರ (ಉತ್ತರ ಪ್ರದೇಶ) ಹಸ್ತಾಂತರಿಸಿದ ನಂತರ 1999ರ ಜನವರಿ ಒಂದರಿಂದ ರಾಷ್ಟ್ರಪತಿಯವರ ಕಾರ್ಯಾಲಯದಲ್ಲಿ ಧೂಳು ತಿನ್ನುತ್ತಿದೆ. ಇದನ್ನು 2005ರ ಜುಲೈ ಮತ್ತು 2010ರ ಫೆಬ್ರವರಿಯಲ್ಲಿ ಮರು ಸಲ್ಲಿಸಲಾಗಿದೆ.

ಸಂವಿಧಾನದ 72ನೇ ವಿಧಿಯಂತೆ ಎಲ್ಲಾ ಕ್ಷಮಾದಾನ ಅರ್ಜಿಗಳ ಕುರಿತು ಸಂಬಂಧಪಟ್ಟ ರಾಜ್ಯ ಸರಕಾರಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರ ಜತೆ ಕೇಂದ್ರ ಗೃಹ ಸಚಿವಾಲಯವು ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಈ ಉತ್ತರದಲ್ಲಿ ತಿಳಿಸಲಾಗಿದೆ.

ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ದೋಷಿ ಎಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿ ಮರಣ ದಂಡನೆ ವಿಧಿಸಿದ ನಂತರ ಕ್ಷಮಾದಾನ ಅರ್ಜಿಗಳ ಕುರಿತು ಸಾರ್ವಜನಿಕ ವಲಯದಲ್ಲಿ ಕುತೂಹಲ ಹೆಚ್ಚಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ