ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಕ್ಕಳ ದಿನದಿಂದ ನೆಹರೂ ದಯಾಳು ಎನಿಸಿಕೊಂಡರು: ಮೋದಿ (Narendra Modi | BJP | Children's Day | Jawaharlal Nehru)
Bookmark and Share Feedback Print
 
ಮಕ್ಕಳ ದಿನದಿಂದ ಜವಾಹರಲಾಲ್ ನೆಹರೂ ಅವರು ಮಕ್ಕಳಿಂದ 'ನೆಹರೂ ಚಾಚಾ' ಎಂದು ಕರೆಸಿಕೊಂಡು ದಯಾಳು ಎಂಬಂತೆ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದರು. ಆದರೆ ಇದರಿಂದ ಮಕ್ಕಳಿಗೆ ಏನು ಲಾಭವಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದ ಉತ್ತಾನ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಜವಾಹರಲಾಲ್ ನೆಹರೂ ಅವರು ಮಕ್ಕಳ ಮೇಲೆ ಅತೀವ ಮಮತೆ, ಅಕ್ಕರೆಯನ್ನು ಹೊಂದಿದ್ದರೆಂಬ ಕಾರಣಕ್ಕೆ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನ ಎಂದು ನಾಮಕರಣ ಮಾಡಲಾಯಿತು. ಮಕ್ಕಳು ಅವರನ್ನು ನೆಹರೂ ಚಾಚಾ ಎಂದೇ ಕರೆದರು. ಇದರಿಂದಾಗಿ ನೆಹರೂ ದಯಾಳುವೆಂಬುದು ನಮ್ಮ ಮನಸ್ಸಿನಲ್ಲಿ ಗಟ್ಟಿಯಾಯಿತು. ಆದರೆ ಇದರಿಂದ ಮಕ್ಕಳಿಗೆ ಏನು ಸಿಕ್ಕಿದೆ ಎಂದು ಪ್ರಶ್ನಿಸಿದರು.

ದಾರಿದ್ರ್ಯದ ಮಡಿಲಲ್ಲಿರುವ ಮಕ್ಕಳ ಬಾಳಿಗೆ ಮರು ಜೀವ ನೀಡಲು, ಕಳೆದುಹೋಗುತ್ತಿರುವ ಬಾಲ್ಯದ ಅಮೂಲ್ಯ ವರ್ಷಗಳನ್ನು ಸರಿಪಡಿಸಲು ಮಕ್ಕಳ ದಿನದಿಂದ ಸಾಧ್ಯವಾಗಿದೆಯೇ? ಮಕ್ಕಳ ದಿನದ ಸಂಭ್ರಮವನ್ನಾಚರಿಸುತ್ತಿರುವ ಸಂದರ್ಭದಲ್ಲಿ ದಿನಕ್ಕೊಂದು ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಮಗುವಿನ ಬಗ್ಗೆ ಯಾರಾದರೂ ಕಣ್ಣೀರು ಹಾಕಿದ್ದಾರೆಯೇ ಎಂದೂ ಅವರು ಪರೋಕ್ಷವಾಗಿ ಮಕ್ಕಳ ದಿನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಆದರೆ ಲಾಲ್ ಬಹದ್ದೂರ್ ಶಾಸ್ತ್ರಿಯವರದ್ದು ಭಿನ್ನ ವ್ಯಕ್ತಿತ್ವ. ಅವರು 'ಜೈ ಜವಾನ್ ಜೈ ಕಿಸಾನ್' ಎಂಬ ಘೋಷ ವಾಕ್ಯಕ್ಕೆ ಮೊರೆ ಹೋಗುವ ಮೂಲಕ ರೈತರು ಮತ್ತು ಕಾರ್ಮಿಕರಿಗೆ ಬೆಂಬಲವಾಗಿ ನಿಂತವರು. ಶಾಸ್ತ್ರಿಯವರು ನೆಹರೂ ಅವರಂತೆ ಮೋಹಕ ನಾಯಕರಾಗಿರಲಿಲ್ಲ. ಆದರೂ ಅವರ ಆಡಳಿತಾವಧಿಯಲ್ಲಿ ದೇಶವು ದಾಖಲೆ ಪ್ರಮಾಣದ ಆಹಾರವನ್ನು ಉತ್ಪಾದಿಸಿತ್ತು ಎಂದು ಮೋದಿ ಹೇಳಿದರು.

ದಕ್ಷ ಆಡಳಿತದ ಕುರಿತಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಪಾಲ್ಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಗುಜರಾತ್ ಮುಖ್ಯಮಂತ್ರಿ ಮೋದಿಯವರು ಅನುಸರಿಸಿದ ವಿಧಾನಗಳನ್ನು ಪಾಲಿಸುವಂತೆ ಈ ಸಂದರ್ಭದಲ್ಲಿ ಕರೆ ನೀಡಲಾಗಿದೆ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ