ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಎಂ, ಪಿಎಂ ನನ್ನ ಕಾಲ ಬುಡದಲ್ಲಿದ್ದಾರೆ: ರಾಮ್‌ದೇವ್ (Yoga guru Baba Ramdev | Bharat Swabhiman | Prime Minister | Chief Minister)
Bookmark and Share Feedback Print
 
ಪ್ರಧಾನ ಮಂತ್ರಿಯಾಗಿರಬಹುದು, ಮುಖ್ಯಮಂತ್ರಿಯಾಗಿರಬಹುದು ಅಥವಾ ರಾಷ್ಟ್ರಪತಿಯಾಗಿರಬಹುದು, ಅವರೆಲ್ಲರೂ ನನ್ನ ಕಾಲಬುಡದಲ್ಲಿ ಬಿದ್ದಿದ್ದಾರೆ. ಹಾಗಾಗಿ ನನಗೆ ಕುರ್ಚಿಯ ಬಗ್ಗೆ ಮೋಹವಿಲ್ಲ ಎಂದು ಯೋಗ ಗುರು ಬಾಬಾ ರಾಮದೇವ್ ತಿಳಿಸಿದ್ದಾರೆ.

ಪಾಟ್ನಾದಿಂದ 225 ಕಿಲೋ ಮೀಟರ್ ದೂರದಲ್ಲಿರುವ ಬಿಹಾರದ ಪಶ್ಚಿಮ ಚಂಪಾರನ್ ಜಿಲ್ಲೆಯ ಬೈತ್ತೈಯ್ ಎಂಬಲ್ಲಿ ಮಾತನಾಡುತ್ತಿದ್ದ ರಾಮ್‌ದೇವ್, ಅದು ಮುಖ್ಯಮಂತ್ರಿಯಿರಬಹುದು, ಪ್ರಧಾನ ಮಂತ್ರಿಯಿರಬಹುದು ಅಥವಾ ರಾಷ್ಟ್ರಪತಿಯೇ ಆಗಿರಬಹುದು; ಅವರೆಲ್ಲ ನನ್ನ ಕಾಲ ಬುಡದಲ್ಲೇ ಕುಳಿತಿದ್ದಾರೆ. ನನ್ನ ಕಾಲ ಬುಡದಲ್ಲಿ ಬಿದ್ದಿರುವ ಗದ್ದುಗೆಯ ಮೇಲೆ ನಾನು ಹೇಗೆ ಆಸೀನನಾಗಲಿ ಎಂದು ನೆರೆದಿದ್ದ ಸಾವಿರಾರು ಮಂದಿಯನ್ನು ಪ್ರಶ್ನಿಸಿದರು.
PTI

ನಾಲ್ಕು ದಿನಗಳ ಯೋಗ ಶಿಬಿರವನ್ನು ಉದ್ಘಾಟಿಸಲೆಂದು ಇಲ್ಲಿಗೆ ಬಂದಿದ್ದ ಅವರು ತನ್ನ ರಾಜಕೀಯ ಪ್ರವೇಶದ ಕುರಿತು ಅಲ್ಲಲ್ಲಿ ಹೇಳುತ್ತಿರುವಂತೆ ಇಲ್ಲೂ ತನ್ನ ಎಂದಿನ ಮಾತಿನ ಧಾಟಿಯನ್ನು ಮುಂದುವರಿಸುತ್ತಾ, 'ಯಾವ ರಾಜಕೀಯ ನಾಯಕ ನನ್ನ ಹಿಂಬಾಲಕನಲ್ಲ ಎಂದು ಹೇಳಿ?' ಎಂದು ಮತ್ತೊಂದು ಪ್ರಶ್ನೆ ಎಸೆದರು.

'ಭಾರತ್ ಸ್ವಾಭಿಮಾನ್' ಎಂಬ ಪಕ್ಷವನ್ನು ಅಸ್ತಿತ್ವಕ್ಕೆ ತಂದಿರುವ ಅವರು ಮುಂಬರುವ ಮಹಾ ಚುನಾವಣೆಯಲ್ಲಿ ದೇಶದಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇನೆ; ಆದರೆ ತಾನು ಚುನಾವಣೆಗೆ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಅದೇ ಹೊತ್ತಿಗೆ ಮಾವೋವಾದಿಗಳ ಸುಧಾರಣೆಗೆ ಯತ್ನಿಸಬೇಕು ಎಂದಿರುವ ರಾಮ್‌ದೇವ್, ಅವರು ಮುಖ್ಯವಾಹಿನಿಗೆ ಬರಲು ನಿರಾಕರಿಸಿದಲ್ಲಿ ಕಾನೂನು ತನ್ನದೇ ಹಾದಿಯನ್ನು ಹಿಡಿಯುತ್ತದೆ ಎಂದಿದ್ದಾರೆ.

ಕೆಲವು ಪ್ರದೇಶಗಳ ನಿರ್ಲಕ್ಷ್ಯವೇ ಮಾವೋವಾದಿ ಸಮಸ್ಯೆಗೆ ಕಾರಣ. ಹೆಚ್ಚಾಗಿ ಈ ಸಮಸ್ಯೆ ಕಾಣಿಸಿಕೊಂಡಿರುವುದು ಖನಿಜ ಶ್ರೀಮಂತವಾಗಿರುವ ಪ್ರದೇಶಗಳಲ್ಲಿ. ಹಾಗಾಗಿ ಈ ಪ್ರದೇಶಗಳಿಂದ ಸರಕಾರ ಗಳಿಸುವ ಹಣದಲ್ಲಿ ಕನಿಷ್ಠ ಅರ್ಧದಷ್ಟಾದರೂ ಅಲ್ಲಿನ ಅಭಿವೃದ್ಧಿಗೆ ವಿನಿಯೋಗಿಸುವ ಮೂಲಕ ಸ್ಥಳೀಯರ ಒಲವು ಗಿಟ್ಟಿಸಬೇಕು ಎಂದು ಸಲಹೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ