ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಧುವಿನ ವೇಷದಲ್ಲಿ ಮದುವೆ ಮಂಟಪಕ್ಕೆ ಬಂದದ್ದು ಗಂಡು..! (Uttar Pradesh | groom | disguise of a bride | Gangaram Tewari)
Bookmark and Share Feedback Print
 
ಆತ ಮದುವೆಯಾಗಲೆಂದು ನೋಡಿದ್ದು ಸುಂದರ ಹುಡುಗಿಯನ್ನು. ಆದರೆ ಮದುವೆ ಮಂಟಪಕ್ಕೆ ಬಂದದ್ದು ಹುಡುಗಿಯಂತೆ ವೇಷ ಹಾಕಿದ ಹದಿಹರೆಯದ ಯುವಕ. ಹತ್ತು ಹಲವು ಮೋಸದ ಪ್ರಕಾರಗಳನ್ನು ಕಂಡು-ಕೇಳಿರುವವರಿಗೆ ಇದು ನೂತನ. ಆದರೆ ಮುಂದೆ ನಿಮ್ಮ ಪಕ್ಕದ ಮನೆಯಾತ ಅಥವಾ ಸ್ನೇಹಿತ ಇದೇ ರೀತಿ ಮೋಸ ಹೋದರೂ ಅಚ್ಚರಿಪಡಬೇಕಿಲ್ಲ.

ಇದು ನಡೆದಿರುವುದು ಉತ್ತರ ಪ್ರದೇಶದ ಲಕ್ನೋ ಸಮೀಪದ ಬಹ್ರೈಚ್ ಎಂಬ ಪುಟ್ಟ ಗ್ರಾಮದಲ್ಲಿ. 30ರ ಹರೆಯದ ಎಲೆಕ್ಟ್ರಿಷಿಯನ್ ಗಂಗಾರಾಮ್ ತಿವಾರಿ ಮದುವೆಯಾಗುವ ತೀರ್ಮಾನಕ್ಕೆ ಬಂದು ಕೊನೆಯ ಕ್ಷಣದಲ್ಲಿ ಮೋಸದ ಅರಿವಾಗಿ ಪೆಚ್ಚು ಮೋರೆ ಹಾಕಿಕೊಂಡಿದ್ದಾನೆ.
WD

ಇದರ ಹಿಂದೆ ಗ್ಯಾಂಗೇ ಇದೆ...
ತಿವಾರಿ ತನಗೆ ಮದುವೆಯಾಗಲು ಹೆಣ್ಣೊಂದು ಬೇಕೆಂದು ಇಲ್ಲಿನ ವಧು-ವರಾನ್ವೇಷಣೆ ಮಾಡುವ ದಂಪತಿಯೊಂದಿಗೆ ಕೇಳಿಕೊಂಡಿದ್ದ. ಅದಕ್ಕಾಗಿಯೇ ಕಾದು ಕುಳಿತಿದ್ದ ದಂಪತಿ 'ಸರಿ' ಎಂದು ಮೋಸದ ಬಲೆಯನ್ನು ಹೆಣೆಯಲು ಆರಂಭಿಸಿದ್ದರು.

ವಧು ಅನ್ವೇಷಣೆಗೆ 30,000 ರೂಪಾಯಿ ನೀಡಬೇಕೆಂಬ ದಂಪತಿಯ ಬೇಡಿಕೆಗೂ ತಿವಾರಿ ಓಕೆ ಅಂದಿದ್ದ. ಕೊನೆಗೆ ಲಕ್ನೋ ಸಮೀಪದ ಬಾರಬಂಕಿ ಜಿಲ್ಲೆಯ ಗ್ರಾಮವೊಂದರ ಸುನೀತಾ ಎಂಬ ಹುಡುಗಿಯನ್ನು ನೋಡಿ ತಿವಾರಿ ಆಯ್ಕೆಯೂ ಮಾಡಿದ್ದ. ಆದರೆ ಮದುವೆ ಮಂಟಪಕ್ಕೆ ಬಂದದ್ದು ಸುನೀತಾಳ ಬದಲಿಗೆ ಹುಡುಗ. ಆತನಿಗೆ ಸೀರೆ ಉಡಿಸಿ ಕರೆ ತರಲಾಗಿತ್ತು.

ಇಲ್ಲಿ ಮತ್ತೊಂದು ಅಚ್ಚರಿಯ ವಿಚಾರವೆಂದರೆ ಸ್ತ್ರೀ ವೇಷದ ಈ ಯುವಕ ಈ ಹಿಂದೆ ಇದೇ ರೀತಿಯಲ್ಲಿ ದಂಪತಿಯ ಸಹಕಾರದೊಂದಿಗೆ 18 ಮದುವೆಯಾಗಿದ್ದ ಎಂಬುದು. ವಿಚಾರಣೆ ನಡೆಸಿದಾಗ ದಂಪತಿಯ ಹಿಂದೆ ಒಂದು ದೊಡ್ಡ ಗ್ಯಾಂಗೇ ಇರುವುದು ಪತ್ತೆಯಾಗಿದೆ.

ಪ್ರಸಂಗ ಬಯಲಿಗೆ ಬರುತ್ತಿದ್ದಂತೆ ಸ್ತ್ರೀ ವೇಷದ ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿ ವಿರುದ್ಧ ತಿವಾರಿ ಎಫ್ಐಆರ್ ದಾಖಲಿಸಿದ್ದಾನೆ.

ಇದೀಗ ಗ್ಯಾಂಗಿನ ಇತರ ಸದಸ್ಯರನ್ನು ಸೆರೆ ಹಿಡಿಯಲು ಪೊಲೀಸರು ಹುಡುಕಾಟ ಆರಂಭಿಸಿದ್ದು, ಇಂತಹ ಘಟನೆ ಇದುವರೆಗೂ ನಡೆದಿರುವುದನ್ನು ನಾನು ಕೇಳಿಲ್ಲ ಎಂದು ಘಟನೆ ಬಗ್ಗೆ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಚ್ಚರಿ ಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ