ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರದಲ್ಲಿ ಯಾರ ಜತೆ ಬೇಕಾದರೂ ಮಾತಿಗೆ ಸಿದ್ಧ: ಸಿಂಗ್ (Kashmir | India | Manmohan Singh | Terrorism)
Bookmark and Share Feedback Print
 
ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಒಪ್ಪಿಕೊಳ್ಳದ ಜಮ್ಮು-ಕಾಶ್ಮೀರದ ಯಾರ ಜತೆ ಬೇಕಾದರೂ ಮಾತುಕತೆ ನಡೆಸಲು ತನ್ನ ಸರಕಾರ ಸಿದ್ಧವಿದೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.

ಮಾತುಕತೆ ಪ್ರಕ್ರಿಯೆಗಳು ಇನ್ನೊಂದು ಮಜಲನ್ನು ತಲುಪಬೇಕು ಎಂದು ನಾವು ಬಯಸುತ್ತಿದ್ದೇವೆ. ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ವಿರೋಧಿಸುವ ಎಲ್ಲಾ ಗುಂಪುಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲು ನಾವು ಸಿದ್ಧ ಎಂದರು.

ಶ್ರೀನಗರದ ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಸೋಮವಾರ ಪಾಲ್ಗೊಂಡಿದ್ದ ಸಿಂಗ್ ಸರಕಾರದ ನಿಲುವನ್ನು ಈ ರೀತಿಯಾಗಿ ಪ್ರಕಟಿಸಿದರು.

ಸುಲಲಿತವಾಗಿ ಉರ್ದು ಭಾಷೆಯಲ್ಲೇ ಮಾತನಾಡುತ್ತಿದ್ದ ಅವರು, ಭಯೋತ್ಪಾದನಾ ಪೀಡಿತ ರಾಜ್ಯದ ಆರ್ಥಿಕ ಪ್ರಗತಿಗಾಗಿ ಕೇಂದ್ರ ಸರಕಾರವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಆದರೆ ಇನ್ನೂ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುವ ಅಗತ್ಯವಿದೆ ಎಂದರು.

2006 ಮತ್ತು 2007ರಲ್ಲಿ ಮೂರು ಸುತ್ತಿನ ಮಾತುಕತೆಯ ನಂತರ ತನ್ನಿಂದ ರಚನೆಯಾಗಿದ್ದ ಐದು ಕಾರ್ಯನಿರತ ಗುಂಪುಗಳ ಶಿಫಾರಸುಗಳನ್ನು ಜಾರಿಗೆ ತರಲು ತನ್ನ ಸರಕಾರ ಬದ್ಧವಾಗಿದೆ ಎಂದೂ ಪ್ರಧಾನಿ ಇಲ್ಲಿ ಸ್ಪಷ್ಟಪಡಿಸಿದರು.

ರೌಂಡ್ ಟೇಬಲ್ ಕಾನ್ಫರೆನ್ಸ್‌ಗಳಿಂದ ನಾವು ಹಲವು ದೃಷ್ಟಿಕೋನಗಳನ್ನು ಅರಿಯುವಲ್ಲಿ ಸಫಲರಾಗಿದ್ದು, ಸಮಿತಿ ಮಾಡಿರುವ ಶಿಫಾರಸುಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತೇವೆ ಎಂದು ಶೇರ್-ಇ ಕಾಶ್ಮೀರ್ ಕೃಷಿ ಮತ್ತು ತಾಂತ್ರಿಕ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕರಾಡತನದ ಸ್ವಾಗತದ ನಡುವೆಯೇ ತಿಳಿಸಿದರು.

ಪ್ರತ್ಯೇಕವಾದಿಗಳು ಬಂದ್‌ಗೆ ಕರೆ ನೀಡಿರುವ ಹೊರತಾಗಿಯೂ ಶ್ರೀನಗರಕ್ಕೆ ಆಗಮಿಸಿರುವ ಪ್ರಧಾನ ಮಂತ್ರಿಯವರು ಎರಡು ದಿನಗಳ ಕಾಶ್ಮೀರ ಪ್ರವಾಸ ಮಾಡುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ