ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚರ್ಚ್‌ ಶಾಲೆಯಲ್ಲಿ ಬಾಲಕಿಗೆ ಪ್ರಿನ್ಸಿಪಾಲ್ ಲೈಂಗಿಕ ಕಿರುಕುಳ (M L Brite | Kodaikanal Public School | Bhutan | Christian School)
Bookmark and Share Feedback Print
 
ದಿಂಡಿಗಲ್ ಜಿಲ್ಲೆಯ ಪ್ರವಾಸಿತಾಣವೆಂದೇ ಪ್ರಸಿದ್ಧಿ ಪಡೆದಿರುವ ಕೊಡೈಕೆನಾಲ್‌ನಲ್ಲಿನ ಚರ್ಚ್ ಶಾಲೆಯೊಂದರ 73ರ ಹರೆಯದ ಪ್ರಿನ್ಸಿಪಾಲ್ 14ರ ಹರೆಯದ ಭೂತಾನ್ ಮೂಲದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಇದೀಗ ತಲೆ ಮರೆಸಿಕೊಂಡಿದ್ದಾನೆ.

ಕೊಡೈಕೆನಾಲ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಒಂಬತ್ತನೇ ತರಗತಿಯ ಭೂತಾನ್ ಬಾಲಕಿಯೇ ಈ ಆರೋಪ ಮಾಡಿರುವುದು. ಕಿರುಕುಳ ನೀಡಿರುವ ಕ್ರಿಶ್ಚಿಯನ್ ಶಾಲೆಯ ಪ್ರಿನ್ಸಿಪಾಲ್ ಎಂ.ಎಲ್. ಬ್ರೈಟ್ ಭೂಗತನಾಗಿದ್ದಾನೆ ಎಂದು ವರದಿಗಳು ಹೇಳಿವೆ.

ತಿಂಗಳ ಹಿಂದಷ್ಟೇ ಈ ಶಾಲೆಗೆ ವಿದ್ಯಾರ್ಥಿನಿ ಸೇರ್ಪಡೆಗೊಂಡಿದ್ದಳು. ಆಕೆ ಇತರ 17 ವಿದ್ಯಾರ್ಥಿನಿಯರ ಜತೆ ಹಾಸ್ಟೆಲ್ ಆಗಿ ಪರಿವರ್ತಿಸಲಾದ ಬ್ರೈಟ್ ಮನೆಯಲ್ಲಿ ತಂಗುತ್ತಿದ್ದರು.

ಘಟನೆ ನಂತರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಪೋಷಕರು ಇಲ್ಲಿನ ಉಪ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನೈಟಿಯಲ್ಲಿ ಬರುವಂತೆ ಹೇಳಿದ್ದ ಕಾಮುಕ...
ಜೂನ್ 1ರಂದು ರಾತ್ರಿ ಮತ್ತೊಬ್ಬ ಹುಡುಗಿಯೊಂದಿಗೆ ಭೂತಾನ್ ಬಾಲಕಿಯನ್ನು ಪ್ರಿನ್ಸಿಪಾಲ್ ತನ್ನ ಕೊಠಡಿಗೆ ನೈಟಿ ಹಾಕಿಕೊಂಡು ಬರುವಂತೆ ಸೂಚಿಸಿದ್ದ. ಆದರೆ ಮತ್ತೊಬ್ಬ ಹುಡುಗಿ ಪ್ರಿನ್ಸಿಪಾಲ್ ಕರೆಯನ್ನು ಧಿಕ್ಕರಿಸಿದ್ದಳು. ಆದರೆ ಭೂತಾನ್ ಬಾಲಕಿ ಹೋಗಿದ್ದಳು.

ಆತನ ಕೊಠಡಿಗೆ ಹೋದ ನಂತರ ಕಾಫಿ ತಂದು ಕೊಡುವಂತೆ ಆದೇಶ ನೀಡಿದ. ಬಳಿಕ ಆಕೆಯ ಜತೆ ಅಸಭ್ಯವಾಗಿ ವರ್ತಿಸಲಾರಂಭಿಸಿದ. ಆತನ ಬೇಡಿಕೆಗಳನ್ನು ಪೂರೈಸಲು ಭೂತಾನ್ ಬಾಲಕಿ ನಿರಾಕರಿಸಿದ ನಂತರ ಕೆಟ್ಟದಾಗಿ ಬೈಯಲಾರಂಭಿಸಿದ ಎಂದು ಆರೋಪಿಸಲಾಗಿದೆ.

ಪ್ರಿನ್ಸಿಪಾಲ್ ದುರ್ನಡತೆಯಿಂದ ಬೆದರಿದ್ದ ಬಾಲಕಿ ಜ್ವರದಿಂದಾಗಿ ಆಸ್ಪತ್ರೆ ಸೇರಿದ್ದಳು. ಅಲ್ಲಿಗೂ ಹೋಗಿದ್ದ ಪ್ರಿನ್ಸಿಪಾಲ್ ಮತ್ತೊಂದು ಸುತ್ತು ಅಶ್ಲೀಲ ವರ್ತನೆ ತೋರಿಸಿದ್ದ. ಈ ಹೊತ್ತಿನಲ್ಲಿ ಆಕೆ ತನ್ನ ಪೋಷಕರನ್ನು ಕರೆಸಿದ್ದಳು. ನಂತರ ದೂರು ನೀಡಲಾಯಿತು.

ಕಳೆದ 27 ವರ್ಷಗಳಿಂದ ಆತ ಇಲ್ಲಿ ಶಾಲೆಯನ್ನು ನಡೆಸುತ್ತಿದ್ದು, ಈ ಹಿಂದೆ ಕೂಡ ಮಹಿಳೆಯರಿಗೆ ಅದರಲ್ಲೂ ಶಿಕ್ಷಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣಗಳಿವೆ. ಅಲ್ಲದೆ ಮದರ್ ಥೆರೇಸಾ ಯುನಿವರ್ಸಿಟಿಯಲ್ಲಿ ಈತ ವಿಸಿಟಿಂಗ್ ಲೆಕ್ಚರರ್ ಆಗಿದ್ದಾಗಲೂ ಇಂತಹ ಪ್ರಕರಣಗಳು ನಡೆದಿವೆ. ಆದರೆ ದೂರು ನೀಡುತ್ತಿರುವುದು ಇದೇ ಮೊದಲು ಎಂದು ಇಲ್ಲಿನ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ