ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿ-ಶ್ರೀನಗರ ವಿಮಾನದ ಚಕ್ರ ಸ್ಫೋಟ; ಅಪಾಯವಿಲ್ಲ (IndiGo plane | tyres burst | New Delhi | Srinagar)
Bookmark and Share Feedback Print
 
ಮಂಗಳೂರು ವಿಮಾನ ದುರಂತದ ನಂತರ ಭಾರತದಲ್ಲಿ ಹತ್ತು ಹಲವು ಪ್ರಯಾಣಿಕ ವಿಮಾನಗಳು ಅಪಾಯಕಾರಿ ಸ್ಥಿತಿಗೆ ತಳ್ಳಲ್ಪಡುತ್ತಿರುವ ಸುದ್ದಿಯನ್ನು ಕೇಳುತ್ತಿದ್ದೇವೆ. ಆ ಸರದಿಗೆ ಇಂದಿನ ಶ್ರೀನಗರ ವಿಮಾನ ನಿಲ್ದಾಣದಲ್ಲಿನ ಘಟನೆಯೂ ಸೇರ್ಪಡೆ.

ದೆಹಲಿಯಿಂದ ಹೊರಟಿದ್ದ ಇಂಡಿಗೋ ಖಾಸಗಿ ವಿಮಾನವು ಶ್ರೀನಗರದ ಶೇಖ್ ಉಲ್ ಆಲಂ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಸಂದರ್ಭದಲ್ಲಿ ಚಕ್ರಗಳು ಸ್ಫೋಟಗೊಂಡು ಕೆಲಕಾಲ ಆತಂಕದ ಪರಿಸ್ಥಿತಿ ನೆಲೆಸಿತ್ತು. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಗಳು ಹೇಳಿವೆ.

ಈ ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸೇರಿದಂತೆ ಒಟ್ಟು 180 ಜನರಿದ್ದರು. ಸೋಮವಾರ ಅಪರಾಹ್ನ ಈ ಘಟನೆ ನಡೆದಿದೆ. ವಿಮಾನ ಇಳಿಯುವ ಹೊತ್ತಿನಲ್ಲಿ ವೇಗ ನಿಯಂತ್ರಿಸುವಾಗ ಚಕ್ರಗಳ ಮೇಲೆ ಒತ್ತಡ ಬಿದ್ದುದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

160 ಪ್ರಯಾಣಿಕರನ್ನು ಹೊತ್ತಿದ್ದ ನಂ.6ಇ, 551 ಇಂಡಿಗೋ ವಿಮಾನವು ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ವೇಳೆ ರನ್‌ವೇಯಲ್ಲಿ ಅದರ ಒಂದು ಟೈರು ಸ್ಫೋಟಗೊಂಡಿದೆ. ಆದರೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪೈಲಟ್‌ಗಳು ಸಫಲರಾಗಿದ್ದಾರೆ. ಆ ಮೂಲಕ ಭಾರೀ ದುರಂತ ತಪ್ಪಿದೆ. ಘಟನೆ ನಡೆದಿರುವುದು ಮಧ್ಯಾಹ್ನ ಒಂದು ಗಂಟೆಗೆ ಎಂದು ವಿಮಾನ ನಿಲ್ದಾಣದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 10ರಂದು ದೆಹಲಿ-ಜಮ್ಮು ಇಂಡಿಗೋ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಕರೆ ಬಂದಿತ್ತು. ಗುರ್ಗಾಂವ್‌ನಲ್ಲಿ ಇಂಡಿಗೋ ಕಾಲ್‌ಸೆಂಟರ್‌ನಿಂದ ಈ ಕರೆ ಬಂದಿತ್ತು ಎಂದು ಪೊಲೀಸರು ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ