ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 34ನೇ ವರ್ಷಕ್ಕೆ ಕಾಲಿಟ್ಟ ಪ.ಬಂಗಾಳದ ಎಡರಂಗ ಸರಕಾರ (West Bengal | Jyoti Basu | Left Front | Buddhadeb Bhattacharjee)
Bookmark and Share Feedback Print
 
ಪಶ್ಚಿಮ ಬಂಗಾಳದ ಎಡರಂಗ ಸರಕಾರ ಸೋಮವಾರ 34ನೇ ವರ್ಷಕ್ಕೆ ಕಾಲಿಟ್ಟಿದೆ. ಇದರೊಂದಿಗೆ ವಿಶ್ವದಲ್ಲಿಯೇ ಅತೀ ಹೆಚ್ಚು ಕಾಲ ನಿರಂತರ ಆಡಳಿತ ನಡೆಸಿದ ಪಕ್ಷ ಎಂದೆನಿಸಿಕೊಂಡಿದೆ.

33 ವರ್ಷಗಳಿಂದ ನಿರಂತರವಾಗಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ನಡೆಸುತ್ತಿರುವ ಎಡಪಂಥೀಯ ಲೋಕಸಭೆ ಚುನಾವಣೆ ಸಹಿತ ನಗರಪಾಲಿಕೆ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿರುವುದರಿಂದ ಪಕ್ಷದ ಭವಿಷ್ಯದ ಬಗ್ಗೆ ಭೀತಿ ಹುಟ್ಟಿಸಿವೆ.

1977 ಜೂನ್ 21ರಂದು ಜ್ಯೋತಿ ಬಸು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ತನ್ನದೇ ಆದ ರೀತಿಯಲ್ಲಿ ಮುಂದುವರಿದ ಅವರು ಬಂಗಾಳದಲ್ಲಿ ಜನಪ್ರಿಯ ರಾಜಕೀಯ ಪ್ರತಿನಿಧಿ ಎನಿಸಿಕೊಂಡಿದ್ದರು.

2000 ನವೆಂಬರ್ ತಿಂಗಳಲ್ಲಿ ಬಸು ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿದ ನಂತರ ಬುದ್ದದೇವ್ ಭಟ್ಟಾಚಾರ್ಜಿ ಉತ್ತರಾಧಿಕಾರಿಯಾಗಿದ್ದರು.

ಟಾಟಾ ನ್ಯಾನೋ ವಿವಾದದ ನಂತರ ಪಶ್ಚಿಮ ಬಂಗಾಳ ಸರಕಾರವು ನಿಧಾನವಾಗಿ ತನ್ನ ಹಿಡಿತವನ್ನು ಕಳೆದುಕೊಂಡಿದೆ. ಆದರೆ ಜನರ ವಿಶ್ವಾಸವನ್ನು ಮರಳಿ ಪಡೆಯುವಲ್ಲಿ ಭಾರತೀಯ ಕಮ್ಯೂನಿಸ್ಟ್ ಪಾರ್ಟಿ ಅವಿರತ ಪ್ರಯತ್ನ ಮುಂದುವರಿಸಿದೆ.

ಒಟ್ಟಿನಲ್ಲಿ ಭವಿಷ್ಯದಲ್ಲಿ ಎಡಪಂಥೀಯ ಸರಕಾರವು ಬಂಗಾಳ ಜನರ ವಿಶ್ವಾಸ ಗೆಲ್ಲುವಲ್ಲಿ ಸಫಲರಾಗಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ