ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಣಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಕರ್ನಾಟಕಕ್ಕೆ ಕೇಂದ್ರ (Karnataka | mining firms | Jairam Ramesh | B S Yeddyurappa)
Bookmark and Share Feedback Print
 
ಅರಣ್ಯ ಕಾಯ್ದೆಗಳನ್ನು ಉಲ್ಲಂಘಿಸಿರುವ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿನ ಮೂರು ಗಣಿಗಾರಿಕಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರವು ಕರ್ನಾಟಕಕ್ಕೆ ಸೂಚಿಸಿದೆ.

ಎಸ್.ಬಿ. ಮಿನರಲ್ಸ್, ಟ್ರಿಡೆಂಟ್ ಮಿನರಲ್ಸ್ ಮತ್ತು ವೀಯಮ್ ಪ್ರೈವೆಟ್ ಲಿಮಿಟೆಡ್ ಎಂಬ ಮೂರು ಗಣಿ ಕಂಪನಿಗಳು ಅರಣ್ಯ ಇಲಾಖೆ ನೀಡಿದ್ದ ಷರತ್ತುಬದ್ಧ ಅನುಮತಿಯಂತೆ ನಡೆದುಕೊಳ್ಳದೆ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿವೆ ಎಂದಿರುವ ಕೇಂದ್ರ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್, ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಇತ್ತೀಚೆಗಷ್ಟೇ ಪತ್ರ ಬರೆದಿದ್ದಾರೆ.

ಗಡಿ ಗುರುತು ಕಲ್ಲು ನಿರ್ಮಾಣ ಮತ್ತು ಮಳೆಗಾಲದಲ್ಲಿ ಸುರಕ್ಷಿತ ವಲಯದಲ್ಲಿ ಸಸಿಗಳನ್ನು ನೆಡುವುದು ಸೇರಿದಂತೆ ನಿಯಮಾವಳಿಗಳನ್ನು ಜಾರಿಗೆ ತರುವ ತನಕ ಆ ಮೂರು ಕಂಪನಿಗಳಿಗೆ ನೀಡಲಾಗಿರುವ ಅರಣ್ಯ ಅನುಮತಿಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ರಾಜ್ಯ ಸರಕಾರಕ್ಕೆ ಸಚಿವಾಲಯ ಸೂಚನೆ ನೀಡಿದೆ.

ಈ ಸಂದರ್ಭದಲ್ಲಿ ಕಂಪನಿಗಳು ಖನಿಜಗಳನ್ನು ಸಾಗಿಸುತ್ತಿಲ್ಲ ಎಂಬುದನ್ನು ರಾಜ್ಯ ಅರಣ್ಯ ಇಲಾಖೆಯು ಖಚಿತಪಡಿಸಿಕೊಳ್ಳಬೇಕು ಎಂದಿರುವ ರಮೇಶ್, ಜುಲೈ 10ರೊಳಗೆ ಕೈಗೊಂಡಿರುವ ಕ್ರಮದ ಕುರಿತು ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

ಸಂಡೂರು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಗಣಿಗಾರಿಕಾ ಪ್ರದೇಶದ ಗಡಿಯನ್ನು ಗುರುತಿಸಲು ತಕ್ಷಣವೇ ಸರ್ವೇ ನಡೆಸುವಂತೆ ರಾಜ್ಯ ಸರಕಾರಕ್ಕೆ ಈ ಹಿಂದೆ ಸಲಹೆ ನೀಡಿರುವುದನ್ನೂ ರಮೇಶ್ ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ. ಅರಣ್ಯ ಉಲ್ಲಂಘನೆಗಳನ್ನು ಪರಿಶೀಲಿಸುವ ತನ್ನ ಸಚಿವಾಲಯದ ಅಡಿಯಲ್ಲಿ ಬರುವ ಅರಣ್ಯ ಸಲಹಾ ಸಮಿತಿಯು ಈ ಸಲಹೆ ನೀಡಿತ್ತು.

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಅದರಲ್ಲೂ ನಿರ್ದಿಷ್ಟವಾಗಿ ಕಬ್ಬಿಣದ ಅದಿರಿನ ಕುರಿತು ಸಿಬಿಐ ತನಿಖೆ ನಡೆಸಬೇಕೆಂಬ ಕೇಂದ್ರ ಸರಕಾರದ ಸಲಹೆಯನ್ನು ರಾಜ್ಯವು ನಿರ್ಲಕ್ಷಿಸುತ್ತಿರುವ ಹೊತ್ತಿನಲ್ಲೇ ಸಚಿವಾಲಯವು ಈ ಸಲಹೆ ನೀಡಿದ್ದು, ಬಳ್ಳಾರಿ ಗಣಿಗಾರಿಕೆಯ (ರೆಡ್ಡಿಗಳು) ಸಮೀಪದ ಗಣಿಗಳ ಕುರಿತು ರಮೇಶ್ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ