ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್ ಬಾಧಿತ ಪ್ರದೇಶಗಳಿಗೆ ಮಿಲಿಟರಿ ಅನಗತ್ಯ: ಕೇಂದ್ರ (Maoist | G K Pillai | CRPF | Military)
Bookmark and Share Feedback Print
 
ನಕ್ಸಲರ ವಿರುದ್ಧ ತಕ್ಷಣ ಮಿಲಿಟರಿ ಕಾರ್ಯಾಚರಣೆ ಅಗತ್ಯವಿಲ್ಲ ಎಂದಿರುವ ಕೇಂದ್ರ ಸರಕಾರ, ಮಾವೋವಾದಿಗಳ ಆಟೋಪಗಳ ನಿರ್ಮೂಲನಕ್ಕೆ ಸರಿಸುಮಾರು ಏಳು ವರ್ಷಗಳು ಬೇಕಾಗಬಹುದು ಎಂದು ಹೇಳಿದೆ.

ಛತ್ತೀಸ್‌ಗಢ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲು ಇಲ್ಲಿಗೆ ಬಂದಿರುವ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ, ನಕ್ಸಲ್ ಬಾಧಿತ ಪ್ರದೇಶಗಳಿಗೆ ಪ್ರಸಕ್ತ ಸ್ಥಿತಿಯಲ್ಲಿ ಸೇನೆ ನಿಯೋಜನೆ ಅಗತ್ಯವಿಲ್ಲ ಎಂದರೂ ಹೆಚ್ಚಿನ ವಿವರಣೆ ನೀಡಿಲ್ಲ.

ದೇಶದಲ್ಲಿನ ನಕ್ಸಲ್ ಸಮಸ್ಯೆಯನ್ನು ನಿರ್ಮೂಲನಗೊಳಿಸಲು ಮೂರರಿಂದ ಏಳು ವರ್ಷಗಳು ಬೇಕಾಗಬಹುದು. ಇದು ಒಮ್ಮಿಂದೊಮ್ಮೆಲೇ ನಡೆಯುವ ಕಾರ್ಯವಲ್ಲ ಎಂದು ಜಿಲ್ಲಾ ಕೇಂದ್ರ ಕಂಕೇರ್‌ನಲ್ಲಿ ಮಾತನಾಡುತ್ತಾ ಪಿಳ್ಳೈ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅರೆ ಸೇನಾಪಡೆಗಳ ಸಿಬ್ಬಂದಿಗಳು ನಕ್ಸಲರಿಗೆ ಬಲಿಯಾಗುತ್ತಿರುವುದನ್ನೂ ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು. ಮಾವೋವಾದಿಗಳ ಪ್ರಾಬಲ್ಯವಿರುವ ಅರಣ್ಯ ಪ್ರದೇಶಗಳಿಗೆ ಜವಾನರು ನುಗ್ಗುವ ಸಂದರ್ಭದಲ್ಲಿ ಪರಿಸ್ಥಿತಿಯ ಲಾಭವನ್ನು ನಕ್ಸಲರು ಪಡೆಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಅದೇ ಹೊತ್ತಿಗೆ ರಾಜ್ಯ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳನ್ನು ಅವರು ತಳ್ಳಿ ಹಾಕಿದ್ದಾರೆ. ಎರಡೂ ವಿಭಾಗದ ಪೊಲೀಸರು ಪರಸ್ಪರ ಸಹಕಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪಿಳ್ಳೈ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ