ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನ ಬಂಧಿಸಿದ್ರೆ ಕೋಮು ದಳ್ಳುರಿ ನಡೆಯುತ್ತೆ: ಮದನಿ ಎಚ್ಚರಿಕೆ (Kerala | PDP | Abdul Nasser Madani | Bangalore serial blasts)
Bookmark and Share Feedback Print
 
'ನನ್ನ ಬಂಧನದಿಂದ ರಾಜ್ಯದ ಶಾಂತಿ ಕೆಡಬಾರದು, ಅಲ್ಲದೇ ಬಂಧನ ಕೋಮುದಳ್ಳುರಿಗೂ ಕಾರಣವಾಗಬಾರದು. ಹಾಗಾಗಿ ತಾನು ಕೋರ್ಟ್ ಮುಂದೆ ಹಾಜರಾಗುತ್ತೇನೆಯೇ ವಿನಃ ಪೊಲೀಸರ ಮುಂದೆ ಶರಣಾಗುವುದಿಲ್ಲ' ಎಂದು ಬೆಂಗಳೂರು ಸರಣಿ ಸ್ಫೋಟದ ಆರೋಪಿ, ಪಿಡಿಪಿ ಮುಖಂಡ ಅಬ್ದುಲ್ ನಾಸಿರ್ ಮದನಿ ಭಾನುವಾರ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿರುವ ಪರಿ ಇದು.

ಒಂದೆಡೆ ಕರ್ನಾಟಕದ ಪೊಲೀಸರು ಮದನಿ ಬಂಧನಕ್ಕೆ ಕೇರಳದಲ್ಲಿ ಠಿಕಾಣಿ ಹೂಡಿದ್ದರೆ, ಮತ್ತೊಂದೆಡೆ ಕೊಲ್ಲಂ ಜಿಲ್ಲೆಯ ಅನ್ವಶ್ಶೇರಿಯಲ್ಲಿ ಮದನಿ ಭಾನುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಪೊಲೀಸರ ಮುಂದೆ ಶರಣಾಗುವುದಿಲ್ಲ ಎಂದು ಘೋಷಿಸಿದ್ದಾನೆ. ಬೆಂಗಳೂರು ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ನನ್ನ ಮನೆಯ ಸಂಪೂರ್ಣ ಶೋಧಕ್ಕೆ ಸಮ್ಮತಿಸುವೆ. ಆದರೆ ನನ್ನ ಮನೆಯಲ್ಲಿ ಕಾನೂನು ಬಾಹಿರವಾದ ಯಾವುದೇ ವಸ್ತು ಅಲ್ಲಿ ಸಿಗಲ್ಲ ಎಂದು ತಿಳಿಸಿದ್ದಾನೆ.

ನನ್ನ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಅನಾವಶ್ಯಕವಾಗಿ ನನ್ನ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ ಮದನಿ, ನೀವು ನನ್ನ ಬಂಧಿಸಿದರೆ ರಾಜ್ಯದಲ್ಲಿ ಕೋಮುದಳ್ಳುರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಈ ಸಂದರ್ಭದಲ್ಲಿ ಎಚ್ಚರಿಕೆಯನ್ನು ನೀಡಿದ್ದಾನೆ.

ತಾನು ಯಾವುದೇ ಕಾರಣಕ್ಕೂ ಪೊಲೀಸರ ಮುಂದೆ ಶರಣಾಗುವುದಿಲ್ಲ ಎಂದಿರುವ ಮದನಿ ಅದಕ್ಕಾಗಿ ಆರೋಗ್ಯದ ನೆಪವೊಡ್ಡಿದ್ದಾನೆ. ಬೇಕಾದರೆ ಪೊಲೀಸರೆ ತನ್ನ ಬಂಧಿಸಲಿ ಎಂದು ಸವಾಲು ಹಾಕಿದ್ದಾನೆ.

ಬೆಂಗಳೂರು ಸ್ಫೋಟ ಪ್ರಕರಣ ಕುರಿತಂತೆ ಭಾನುವಾರ ಬೆಳಿಗ್ಗೆ ಕೇರಳ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಕರ್ನಾಟಕದ ಪೊಲೀಸರ ಬಳಿ ಬಂಧನದ ವಾರಂಟ್ ಇದೆ. ಆ ನಿಟ್ಟಿನಲ್ಲಿ ಅವರು ಮದನಿಯನ್ನು ಯಾವಾಗ ಬೇಕಾದರೂ ಬಂಧಿಸಬಹುದು. ಈ ವಿಚಾರದಲ್ಲಿ ಕೇರಳ ಪೊಲೀಸರು ಏನೂ ಮಾಡುವಂತಿಲ್ಲ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕೇರಳ ಪೊಲೀಸರು ನೆರವು ಕೇಳಿದ್ದರು. ಅಲ್ಲದೆ, ಕೇರಳ ಪೊಲೀಸರು ಮದನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆತನೊಂದಿಗೆ ಇರುವ ಬೆಂಬಲಿಗರನ್ನು ಸ್ಥಳಬಿಟ್ಟು ಕಳುಹಿಸುವಂತೆ ಆದೇಶ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಅಷ್ಟೇ ಅಲ್ಲ ಮದನಿ ಅವರನ್ನು ಬಂಧಿಸುತ್ತಾರೆಂಬ ಸುದ್ದಿ ಬಹಿರಂಗಗೊಂಡ ದಿನದಿಂದ ಅನ್ವಶ್ಶೇರಿಯಲ್ಲಿ ಉದ್ವಿಗ್ನ ವಾತಾವರಣ ತಲೆದೋರಿತ್ತು. ಅಲ್ಲದೇ ಮದನಿಗೆ ಸುಮಾರು ನಾಲ್ಕು ಸಾವಿರದಷ್ಟು ಆತನ ಬೆಂಬಲಿಗರು ಸರ್ಪಗಾವಲು ಹಾಕಿ ರಕ್ಷಣೆ ನೀಡುತ್ತಿದ್ದರು. ಅಲ್ಲಿನ ಕಾನೂನು ಸುವ್ಯವಸ್ಥೆ ಹದಗೆಡದಂತೆ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿತ್ತು.

ಇಂದು ಬಂಧನ ಸಾಧ್ಯತೆ?: ಅಬ್ದುಲ್ ನಾಸಿರ್ ಮದನಿ ಬಂಧನಕ್ಕೆ ಸಂಬಂಧಿಸಿದಂತೆ ಮಂಗಳವಾರ ನಗರದ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ನೇತೃತ್ವದ ತಂಡ ಕೊಲ್ಲಂಗೆ ತೆರಳಿದೆ. ಅಲ್ಲದೇ ಕೊಲ್ಲಂ ಪೊಲೀಸ್ ವರಿಷ್ಠಾಧಿಕಾರಿ ಹರ್ಷಿತ್ ಅಕಲೂರು ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಸಮಯ ನೋಡಿ ಮದನಿಯನ್ನು ಬಂಧಿಸಿ ಶೀಘ್ರವೇ ಬೆಂಗಳೂರಿಗೆ ಕರೆತರಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ