ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್‌ವಾದಿ ಮಮತಾರನ್ನು ಸಮರ್ಥಿಸಿಕೊಂಡಿದೆ ಕೇಂದ್ರ (Lalgarh | Railway Minister | Mamata Banerjee | UPA govt)
Bookmark and Share Feedback Print
 
ಮಾವೋವಾದಿಗಳು ಪ್ರಬಲವಾಗಿರುವ ಲಾಲ್‌ಗಢದಲ್ಲಿ ಭಾಷಣ ಮಾಡಿ ರಾಜಕೀಯ ಪಕ್ಷಗಳಿಂದ ತೀವ್ರ ಟೀಕೆಗೊಳಗಾಗಿದ್ದ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿಯವರನ್ನು ಯುಪಿಎ ಸರಕಾರ ಸಮರ್ಥಿಸಿಕೊಂಡಿದೆ. ಆಕೆ ಕೇಂದ್ರದ ನೀತಿಗಳಿಗೆ ವಿರುದ್ಧ ಮಾತನಾಡಿಲ್ಲ ಎಂದು ಸರಕಾರ ತಿಳಿಸಿದೆ.

ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿಯವರು ಆಗಸ್ಟ್ 9ರಂದು ಲಾಲ್‌ಗಢದ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ಏನು ಹೇಳಿದ್ದರೋ, ಅದು ಯುಪಿಎ ಸರಕಾರದ ನೀತಿಗಳಿಗೆ ವಿರುದ್ಧವಾದುದಲ್ಲ ಎಂದು ರಾಜ್ಯಸಭೆಗೆ ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಭನ್ಸಾಲ್ ತಿಳಿಸಿದರು.

ಆಕೆ ಹಿಂಸಾಚಾರದ ವಿರುದ್ಧ ಮಾತನಾಡಿದ್ದಾರೆ ಹೊರತು ಸರಕಾರದ ನೀತಿಗಳ ವಿರುದ್ಧವಲ್ಲ ಎನ್ನುವುದು ಸ್ಪಷ್ಟ. ಹಾಗಾಗಿ ಇಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಮುಂಗಾರು ಅಧಿವೇಶನ ಮುಕ್ತಾಯದ ದಿನ ಸಮರ್ಥಿಸಿಕೊಂಡರು.

ಮಾವೋವಾದಿ ನಾಯಕ ಆಜಾದ್ ಹತ್ಯೆಯ ಕುರಿತು ಮಮತಾ ನೀಡಿದ್ದ ಹೇಳಿಕೆಯನ್ನು ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಸಮರ್ಥಿಸಿಕೊಂಡಿದ್ದಕ್ಕೆ ಪ್ರತಿಪಕ್ಷಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದವು. ಬಳಿಕ ನೇರವಾಗಿ ಸರಕಾರ ಕೂಡ ಮಮತಾ ಅವರನ್ನು ರಕ್ಷಿಸಲು ಮುಂದಾಗಿದೆ.

ಸರಕಾರವು ಮೊಲದೊಂದಿಗೆ ಬೇಟೆ ನಾಯಿಯಿಂದ ಓಡಿಸುತ್ತಿರುವುದಕ್ಕೆ ವಿತ್ತ ಸಚಿವರ ಹೇಳಿಕೆ ಸಮಾನವಾಗಿದೆ ಎಂದು ಸಿಪಿಐಎಂನ ಸೀತಾರಾಮ್ ಯೆಚೂರಿ ಇದೇ ಸಂದರ್ಭದಲ್ಲಿ ಸರಕಾರವನ್ನು ಲೇವಡಿ ಮಾಡಿದರು.

ನಕ್ಸಲ್ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಬೇಕು ಎಂದು ಮಮತಾ ಯೋಚಿಸಿದ್ದಕ್ಕೆ ಆಕೆ ಮಾವೋವಾದಿಗಳ ಜತೆ ಸಂಬಂಧ ಹೊಂದಿದ್ದಾರೆ ಎಂಬ ಕುರಿತು ಶಂಕೆ ವ್ಯಕ್ತಪಡಿಸಲು ಕಾರಣಗಳೇ ಇಲ್ಲ ಎಂದು ಭಾನುವಾರ ಕೊಲ್ಕತ್ತಾದಲ್ಲಿ ಪ್ರಣಬ್ ಮುಖರ್ಜಿ ಸಮರ್ಥಿಸಿಕೊಂಡಿದ್ದರು.

ನಕ್ಸಲ್ ನಾಯಕ ಆಜಾದ್ ಮಾತುಕತೆಯ ಪ್ರಕ್ರಿಯೆಯಲ್ಲಿ ತೊಡಗಿರುವಾಗ ಆತನನ್ನು ಕೊಂದು ಹಾಕಲಾಗಿತ್ತು. ನಡೆದಿರುವುದು ಎನ್‌ಕೌಂಟರ್ ಅಲ್ಲ, ಅದೊಂದು ಹತ್ಯೆ ಎಂದು ಮಮತಾ ಆಂಧ್ರ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿ ವಿವಾದದ ಕೇಂದ್ರ ಬಿಂದುವಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ