ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿವೃತ್ತಿ ಸದ್ಯಕ್ಕಿಲ್ಲ, ಶೀಘ್ರವೇ ಸಂಪುಟ ಪುನಾರಚನೆ: ಪ್ರಧಾನಿ (Congress | Manmohan Singh | India | Rahul Gandhi)
Bookmark and Share Feedback Print
 
ರಾಜಕೀಯ ನಿವೃತ್ತಿ ಬಗ್ಗೆ ಯೋಚಿಸಿಲ್ಲ ಎಂದು ಹೇಳಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಮುಂದಿನ ಸಂಸತ್ ಅಧಿವೇಶನಕ್ಕೂ ಮೊದಲು ಸಚಿವ ಸಂಪುಟ ಪುನಾರಚನೆ ಮಾಡುವ ಬಗ್ಗೆ ಚಿಂತಿಸುತ್ತಿರುವುದಾಗಿ ತಿಳಿಸಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ ಏಳರಂದು ಆರಂಭವಾಗಲಿದ್ದು, ಅದಕ್ಕೂ ಮೊದಲು ಸಂಪುಟ ಪುನಾರಚನೆ ಮಾಡುವ ಆಯ್ಕೆಗಳ ಕುರಿತು ಗಮನ ಹರಿಸುವುದಾಗಿ ಪ್ರಧಾನಿ ಹೇಳಿದ್ದಾರೆ.

ನನ್ನ ಸಂಪುಟದ ಸರಾಸರಿ ವಯಸ್ಸನ್ನು ಇಳಿಕೆಗೊಳಿಸಲು ನಾನು ಬಯಸುತ್ತಿದ್ದೇನೆ ಎಂದು ಹಾಸ್ಯಭರಿತ ಧಾಟಿಯಲ್ಲಿ ಮುನ್ಸೂಚನೆ ನೀಡಿದರು.

ಅದೇ ಹೊತ್ತಿಗೆ ಕಾಂಗ್ರೆಸ್ ಮತ್ತು ಸರಕಾರದ ನಡುವಿನ ಸಂಬಂಧ ಸರಿಯಾಗಿಲ್ಲ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಸಿಂಗ್, ಪ್ರಜಾಪ್ರಭುತ್ವ ಹೊಂದಿರುವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಇರಬೇಕು ಎಂದು ಅಭಿಪ್ರಾಯಪಟ್ಟರು.

ಪಕ್ಷದ ನಾಯಕರು ಮತ್ತು ಸಚಿವರುಗಳು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದರಲ್ಲಿ ಯಾವುದೇ ತಪ್ಪು ಇದೆ ಎಂದು ನನಗೆ ಅನ್ನಿಸುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಭಿನ್ನ ಅಭಿಪ್ರಾಯಗಳೊಂದಿಗೆ ಚಳವಳಿ ರೂಪಿಸಿದ ಪಕ್ಷ ಕಾಂಗ್ರೆಸ್. ಚಿಂತನೆಯಲ್ಲಿನ ವ್ಯತ್ಯಾಸಗಳು ಪ್ರಜಾಪ್ರಭುತ್ವಕ್ಕೆ ಪೂರಕ ಎಂದು ಪ್ರಧಾನಿ ವಿವರಣೆ ನೀಡಿದರು.

ಆದರೂ ಸಂಪುಟ ಮತ್ತು ಸರಕಾರವು ನಿಜಕ್ಕೂ ಗರಿಷ್ಠ ಮಟ್ಟದಲ್ಲಿ ಹೊಂದಾಣಿಕೆಯೊಂದಿಗೆ ಕಾರ್ಯಾಚರಿಸಬೇಕಾದ ಅಗತ್ವಿದೆ ಮತ್ತು ತನ್ನ ಸಂಪುಟವು ಜವಾಹರಲಾಲ್ ನೆಹರೂ ನೇತೃತ್ವದ ಮೊತ್ತ ಮೊದಲ ಸಂಪುಟದಕ್ಕಿಂತ ಹೆಚ್ಚಿನ ಹೊಂದಾಣಿಕೆಯಿಂದ ಇದೆ ಎಂದು ಸಂಪಾದಕರ ಸಮೂಹದೊಂದಿಗೆ ಮಾತನಾಡುತ್ತಿದ್ದ ಸಿಂಗ್ ತಿಳಿಸಿದರು.

ಇದಕ್ಕೆ ಕೆಲವು ಉದಾಹರಣೆಗಳನ್ನೂ ಅವರು ನೀಡಿದ್ದಾರೆ. ನೆಹರೂ ಮತ್ತು ಅವರ ಡೆಪ್ಯುಟಿ ಸರ್ದಾರ್ ಪಟೇಲ್ ಅವರ ನಡುವೆ ಪ್ರತಿದಿನ ಪತ್ರ ವ್ಯವಹಾರಗಳು ನಡೆಯುತ್ತಿದ್ದುದು, ಇಂದಿರಾ ಗಾಂಧಿ ಮತ್ತು ಅವರ ಡೆಪ್ಯುಟಿ ಮೊರಾರ್ಜಿ ದೇಸಾಯಿಯವರ ನಡುವೆ ಭಿನ್ನಾಭಿಪ್ರಾಯಗಳಿದ್ದುದನ್ನು ಉಲ್ಲೇಖಿಸಿದರು.
ಸಂಬಂಧಿತ ಮಾಹಿತಿ ಹುಡುಕಿ