ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಚಿವೆ ಮಮತಾ ಸಹಾಯಕಿಯೆಂಬ ಶ್ರೀಮತಿ 420ಯೀಕೆ! (Bhopal | Prabha Sharma | Mamata Banerjee | Railways Minister)
Bookmark and Share Feedback Print
 
ತಾನು ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿಯವರ ಆಪ್ತ ಸಹಾಯಕಿ ಎಂದು ಹೇಳಿಕೊಂಡ ಮಹಿಳೆಯೊಬ್ಬಳು ನೌಕರಿಯ ಭರವಸೆ ನೀಡಿ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದ ಪ್ರಸಂಗ ವರದಿಯಾಗಿದೆ.

ಪ್ರಭಾ ಶರ್ಮಾ ಎಂದು ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದ್ದ ಮಹಿಳೆ, ಮಧ್ಯಪ್ರದೇಶದ ಭೋಪಾಲ್ ಮುಂತಾದ ನಗರಗಳಲ್ಲಿ ಸುತ್ತಾಡಿ ಹಣಕ್ಕಾಗಿ ಪೀಡಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ತಾನು ಮಮತಾ ಅವರ ಆಪ್ತ ಕಾರ್ಯದರ್ಶಿ. ನಿಮಗೆ ರೈಲ್ವೇ ಇಲಾಖೆಯಲ್ಲಿ ಆಕರ್ಷಕ ಉದ್ಯೋಗ ಕೊಡಿಸುತ್ತೇನೆ. ಎರಡು ಲಕ್ಷ ರೂಪಾಯಿ ಕೊಟ್ಟರೆ ಸಾಕು ಎಂದು ಹೇಳುತ್ತಾ ಈಗಾಗಲೇ ಹತ್ತಕ್ಕೂ ಹೆಚ್ಚು ಮಂದಿಯಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾಳೆ.

ಇಲ್ಲಿನ ಬೂಟಿನಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿರುವ ಪದವೀಧರ ರಾಧೇಶ್ಯಾಮ್ ಯಾದವ್ ಎಂಬಾತ ಈಗಾಗಲೇ ಮೊದಲ ಕಂತೆಂದು 20,000 ರೂಪಾಯಿ ನೀಡಿದ್ದಾನೆ. ಆದರೆ ಹಣವನ್ನು ಸ್ವೀಕರಿಸಿದ ಬಳಿಕ ಯಾದವನ ಕಾಲೇಜು ಪ್ರಮಾಣ ಪತ್ರಗಳು ಅಥವಾ ಬಯೋಡೇಟಾವನ್ನು ಪಡೆಯಲು ಶರ್ಮಾ ಆಸಕ್ತಿ ತೋರಿಸಿರಲಿಲ್ಲ.

ಕೆಲ ದಿನದ ನಂತರ ಆಕೆ ಕಣ್ಮರೆಯಾದ ಕಾರಣ ಭೀತಿಗೊಳಗಾದ ಯಾದವ್ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಆಕೆಗೆ ಹಣ ನೀಡಲೆಂದು ನನ್ನ ಪತ್ನಿಯ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದೆ. ಏನಾದರೂ ಮಾಡಿ ನನ್ನ ಹಣ ವಾಪಸ್ ಬರುವಂತೆ ಮಾಡಿ ಎಂದು ಗೋಗರೆಯುತ್ತಿದ್ದಾನೆ.

ಭೋಪಾಲ್‌ನ ಮಹಾರಾಣಾ ಪ್ರತಾಪ್ ನಗರ ಪ್ರದೇಶದಲ್ಲಿನ ಜನಪ್ರಿಯ ಹೊಟೋಲೊಂದರಲ್ಲಿ ತಂಗಿದ್ದ 45ರ ಹರೆಯ ಶರ್ಮಾಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಬಂಧಿಸಿದ್ದಾರೆ. ಆಕೆಗೆ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿಯವರ ಜತೆ ಯಾವ ರೀತಿಯ ಸಂಬಂಧವೂ ಇಲ್ಲ ಎಂಬುದು ವಿಚಾರಣೆ ಸಂದರ್ಭದಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚಕಿ ಶರ್ಮಾಳ ಹಿಂದೆ ದೊಡ್ಡ ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತಿರಬಹುದು ಎಂದು ಅವರು ಶಂಕಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ