ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರ ವಿಧಾನಸಭಾ ಚುನಾವಣೆ; ಎನ್‌ಡಿಎ ಸೀಟು ಹಂಚಿಕೆ (BJP | JDU | Bihar assembly polls | Nitish Kumar)
Bookmark and Share Feedback Print
 
ಬಿಹಾರ ವಿಧಾನಸಭಾ ಚುನಾವಣೆಗಾಗಿ ಎನ್‌ಡಿಎ ಪಾಲುದಾರ ಪಕ್ಷಗಳಾಗಿರುವ ಬಿಜೆಪಿ ಮತ್ತು ಜೆಡಿಯುಗಳು ಸೀಟು ಹಂಚಿಕೆ ಮಾಡಿಕೊಂಡಿವೆ. ಜೆಡಿಯು 141 ಹಾಗೂ ಬಿಜೆಪಿ 102 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ ಎಂದು ಮೂಲಗಳು ಹೇಳಿವೆ.

ಈ ಸೀಟು ಹಂಚಿಕಾ ಒಪ್ಪಂದಕ್ಕೆ ರಾಷ್ಟ್ರೀಯ ಜನತಾದಳ ಅಧ್ಯಕ್ಷ ಶರದ್ ಪವಾರ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಒಪ್ಪಿಕೊಂಡಿದ್ದಾರೆ.

ಆದರೂ ಕೆಲ ಕ್ಷೇತ್ರಗಳು ಮರು ವಿಂಗಡನೆಗೊಂಡಿರುವುದರಿಂದ ಕೆಲವೊಂದು ಸಮಸ್ಯೆಗಳು ಎದುರಾಗಿವೆ. ಅವುಗಳನ್ನು ಎನ್‌ಡಿಎ ಮೈತ್ರಿಕೂಟವು ಕುಳಿತು ಮಾತುಕತೆ ನಡೆಸಿ ಪರಿಹಾರ ಮಾಡಿಕೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಅದೇ ಹೊತ್ತಿಗೆ 10ಕ್ಕೂ ಹೆಚ್ಚು ಬಿಜೆಪಿ ಮತ್ತು ಜೆಡಿಯು ಶಾಸಕರು ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಲಿದ್ದಾರೆ ಎಂದು ಹೇಳಲಾಗಿದೆ.

ಜೆಡಿಯು ಖಾಸಗಿ ಕಂಪನಿ: ಬಂಡಾಯ ಸಂಸದ
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಡಳಿತ ಪಕ್ಷ ಜೆಡಿಯು ಬಂಡಾಯದ ಬಿಸಿ ಅನುಭವಿಸತೊಡಗಿದೆ. ಅದರ ಮೊದಲನೇ ಅಂಗವಾಗಿ ಇದೀಗ ಸಂಸದರೊಬ್ಬರು ತನ್ನ ಮಾತೃಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗರ್ ಕ್ಷೇತ್ರದ ಜೆಡಿಯು ಸಂಸದ ರಾಜೀವ್ ರಂಜನ್ ಸಿಂಗ್ ಆಲಿಯಾಸ್ ಲಲನ್ ಸಿಂಗ್ ಎಂಬುವವರೇ ರಾಷ್ಟ್ರೀಯ ಜನತಾದಳದಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ ಎಂದು ಕ್ಯಾತೆ ತೆಗೆದಿರುವವರು.

ಶರದ್ ಯಾದವ್ ಅಧ್ಯಕ್ಷರಾಗಿರುವ ಜೆಡಿಯು ಒಂದು ರೀತಿಯಲ್ಲಿ ಖಾಸಗಿ ಕಂಪನಿಯಾಗಿದೆ. ಅದರ ವ್ಯವಸ್ಥಾಪಕ ನಿರ್ದೇಶಕ ಮುಖ್ಯಮಂತ್ರಿ ನಿತೀಶ್ ಕುಮಾರ್. ಈ ಪಕ್ಷದಲ್ಲಿ ಪ್ರಜಾಪ್ರಭುತ್ವವೇ ಇಲ್ಲ. ಎಲ್ಲಾ ನಿರ್ಧಾರಗಳನ್ನು ತಮಗೆ ಬೇಕಾದಂತೆ ತೆಗೆದುಕೊಳ್ಳುತ್ತಾರೆ ಎಂದು ಅವರು ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ