ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈ ಕಳ್ಳನ ತಿಂಗಳ ಆದಾಯ ಕೇವಲ 3.6 ಲಕ್ಷ ರೂಪಾಯಿ! (Thief | Irfan Shaikh | Hubli | Gujarat)
Bookmark and Share Feedback Print
 
ಬಲೆಗೆ ಬಿದ್ದ ಕಳ್ಳನ ಕಥೆ ಕೇಳುತ್ತಿದ್ದ ಪೊಲೀಸರು ಆಘಾತಕ್ಕೊಳಗಾಗಿದ್ದರು. ಯಾಕೆಂದರೆ ಆತನ ತಿಂಗಳ ಸಂಪಾದನೆ ಅಲ್ಲಿದ್ದ ಕೆಲವು ಪೊಲೀಸರ ವರ್ಷದ ಸಂಪಾದನೆಯನ್ನೂ ಮೀರಿದ್ದುದು. ಹೌದು, ಆತನ ಮಾಸಿಕ ಸಂಪಾದನೆಯೇ 3.6 ಲಕ್ಷ ರೂಪಾಯಿಗಳು.

ಗುಜರಾತ್ ನಿವಾಸಿಯಾಗಿರುವ (ಮೂಲತಃ ಕರ್ನಾಟಕದ ಹುಬ್ಬಳ್ಳಿಯವನು) ಆತನ ಹೆಸರು ಇರ್ಫಾನ್ ಶೇಖ್. ವಯಸ್ಸು 35. ಕಳೆದ ಏಳು ತಿಂಗಳುಗಳ ಅವಧಿಯಲ್ಲಿ 25 ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತದ ವಸ್ತುಗಳನ್ನು ವಿವಿಧೆಡೆಯಿಂದ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಗೆ ನೀಡಿದ್ದಾನೆ. ಅಂದರೆ ಸರಾಸರಿ ಆತನ ತಿಂಗಳ ಆದಾಯ 3.57 ಲಕ್ಷ ರೂಪಾಯಿ. ಇಷ್ಟು ವೇತನವನ್ನು ಪೊಲೀಸರು ಬಿಡಿ, ಕೆಲವು ಕಂಪನಿಗಳ ಸಿಇಒಗಳು ಕೂಡ ಪಡೆಯುವುದಿಲ್ಲ.

ಅಷ್ಟಕ್ಕೂ ಇಂತಹ ಬುದ್ಧಿವಂತನನ್ನು ಸೆರೆ ಹಿಡಿದಿರುವುದು ಪೊಲೀಸರಲ್ಲ. ಅಹಮಬಾದಿನ ವಲ್ಲಭ್ ಫ್ಲ್ಯಾಟ್‌ ನಿವಾಸಿ ಡಾ. ಅಜಿತ್ ಶಾ ಎಂಬವರ ಮನೆಗೆ ಕಳ್ಳತನ ಮಾಡಲೆಂದು ಶೇಖ್ ನುಗ್ಗಿದ್ದ. ಕೆಲ ಹೊತ್ತಿನಲ್ಲೇ ಮನೆಗೆ ವಾಪಸ್ ಬಂದಿದ್ದ ಅಜಿತ್, ಬೀಗ ಒಡೆದಿರುವುದನ್ನು ಗಮನಿಸಿ ಹೊರಗಿನಿಂದ ಲಾಕ್ ಮಾಡಿ ಅಕ್ಕಪಕ್ಕದವರನ್ನು ಕರೆದಿದ್ದರು. ಇದು ತಿಳಿಯುತ್ತಿದ್ದಂತೆ ಸೀರೆಯೊಂದನ್ನು ಕೆಳಗೆ ಇಳಿಬಿಟ್ಟು ಪರಾರಿಯಾಗಲು ಯತ್ನಿಸಿದ್ದನಾದರೂ, ನಿವಾಸಿಗಳು ಬೆನ್ನತ್ತಿ ಹಿಡಿದಿದ್ದಾರೆ.

ಈತ ಮಧ್ಯಾಹ್ನ 12ರಿಂದ ಸಂಜೆ 4.30ರ ನಡುವೆ ಬೀದಿಗಳಲ್ಲಿ ತನ್ನ ಸ್ಕೂಟರಿನಲ್ಲಿ ತಿರುಗಾಡುತ್ತಾ, ಯಾವ ಮನೆಗೆ ಬೀಗ ಹಾಕಲಾಗಿದೆ ಎಂಬುದನ್ನು ಗಮನಿಸುತ್ತಿದ್ದ. ನಂತರ ಸ್ಕ್ರೂಡ್ರೈವರ್ ಬಳಸಿ ಬೀಗವನ್ನು ತೆಗೆದು ಒಳನುಗ್ಗಿ ಹಣ, ಒಡವೆ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ.

ಅದರಲ್ಲೂ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಮನೆಯಲ್ಲಿ ಹೆಚ್ಚು ಸಂಪತ್ತು ಇರುತ್ತದೆ ಮತ್ತು ಈ ಹೊತ್ತಿನಲ್ಲಿ ಮನೆಯವರು ಹೊರಗಡೆ ಸುತ್ತಾಡುವುದು ಹೆಚ್ಚಿರುತ್ತದೆ ಎಂಬುದೂ ಶೇಖ್‌ನಿಗೆ ಚೆನ್ನಾಗಿ ತಿಳಿದಿತ್ತು. ರಂಜಾನ್, ಈತ್, ಮೊಹರಂ, ಚೌತಿ, ಗಣೇಶ ವಿಸರ್ಜನೆಯಂದು, ರಥಯಾತ್ರೆ ಹೀಗೆ ಇಂತಹ ವಿಶೇಷ ದಿನಗಳನ್ನು ತನ್ನ ಕಾರ್ಯಾಚರಣೆಗೆ ಬಳಸುತ್ತಿದ್ದ.

ಗಳಿಸಿದ ಹಣವನ್ನು ಏನು ಮಾಡಿದ್ದಿ ಎಂದು ಪ್ರಶ್ನಿಸಿದಾಗ ಪೊಲೀಸರಿಗೆ ಮತ್ತೊಂದು ಆಘಾತ ಕಾದಿತ್ತು. ತಾನೊಬ್ಬ ಜೂಜುಕೋರ ಮತ್ತು ಹೆಣ್ಣುಬಾಕ ಎಂದು ತಲೆ ತಗ್ಗಿಸಿಕೊಂಡೇ ಬಾಯ್ಬಿಟ್ಟಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಳ್ಳ, ಅಹಮದಾಬಾದ್, ಗುಜರಾತ್