ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವರದಕ್ಷಿಣೆ ಭೂತ: ಹಸುಳೆ ಕೊಂದು ನೇಣಿಗೆ ಶರಣಾದ ತಾಯಿ (Dowry demand | hanged | Mohanlalganj police | Saloni,)
Bookmark and Share Feedback Print
 
ವರದಕ್ಷಿಣೆ ಕಿರುಕುಳದಿಂದ ನೊಂದ ಮಹಿಳೆ ತನ್ನ ಮೂರು ವರ್ಷದ ಹಸುಳೆಯನ್ನು ನೇಣಿಗೇರಿಸಿದ ನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿಗೆ ಶರಣಾದ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿನ ಮೋಹಾಲಿಗಂಜ್ ಪೊಲೀಸ್ ಠಾಣಾ ಪ್ರದೇಶದಲ್ಲಿನ ಟಿಕ್ರಾ ಸಾನಿ ಗ್ರಾಮದ ನಿವಾಸಿಯಾದ ಸೋನಿ ಎಂಬಾಕೆ ಮೊದಲು ತನ್ನ ಮೂರು ವರ್ಷದ ಸಾಲೋನಿಯನ್ನು ನೇಣಿಗೆ ಏರಿಸಿದ ನಂತರ ತಾನು ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.

ಮೋಹಾಲಿ ಗಂಜ್ ಠಾಣಾ ವ್ಯಾಪ್ತಿಯ ಉತ್ತರ್ ಗಾವೋನ್ ಗ್ರಾಮದ ಸೋನಿಯ ತಾಯಿ ಘಟನೆ ಕುರಿತಂತೆ ದೂರು ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪತಿ ಸುಭಾಶ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಚಿನ್ನ ಮತ್ತು ಮೋಟಾರ್ ಸೈಕಲ್‌ಗಾಗಿ ಆತ ಪತ್ನಿಗೆ ಚಿತ್ರಹಿಂಸೆ ನೀಡುತ್ತಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.

ವರದಕ್ಷಿಣೆ ಕಿರುಕುಳದಿಂದ ಮಾನಸಿಕವಾಗಿ ನೊಂದು ಹೋದ ಸೋನಿ ಶನಿವಾರ ಬೆಳಿಗ್ಗೆ ಮೊದಲು ತನ್ನ ಪುಟ್ಟ ಕಂದಮ್ಮನನ್ನು ಕೊಂದು, ನಂತರ ತಾನು ಕೋಣೆಯಲ್ಲಿನ ಸಿಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಪ್ರಕರಣದಲ್ಲಿ ಸೋನಿಯ ಗಂಡ ಸುಭಾಶ್, ಮಾನ ಬಾಬುಲಾಲ್, ಅತ್ತೆ, ನಾದಿನಿ ಹಾಗೂ ಸಂಬಂಧಿ ಶಿವ ನರೈನ್ ಅವರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ