ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಡತನ ವಿಚಾರದಲ್ಲಿ ಭಾರತಕ್ಕಿಂತ ಚೀನಾ, ಪಾಕ್ ಮೇಲು (India | China | global hunger index | Pakistan)
Bookmark and Share Feedback Print
 
ಅಂತಾರಾಷ್ಟ್ರೀಯ ಆಹಾರ ನೀತಿ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ನೂತನ ಜಾಗತಿಕ ಬಡತನ ಸೂಚ್ಯಂಕದಲ್ಲಿ ಬಂದಿರುವ ಫಲಿತಾಂಶವಿದು. ಅದರ ಪ್ರಕಾರ ಭಾರತವು ಚೀನಾ ಮತ್ತು ಪಾಕಿಸ್ತಾನಗಳಿಗಿಂತ ಹೆಚ್ಚು ಬಡತನ ಹೊಂದಿದೆ.

ಸೋಮವಾರ ಬಿಡುಗಡೆಯಾಗಿರುವ ಈ ಸೂಚ್ಯಂಕದಲ್ಲಿ 84 ದೇಶಗಳು ಸ್ಥಾನ ಪಡೆದಿವೆ. ಅದರಲ್ಲಿ ಭಾರತದ ಸ್ಥಾನ 67ನೇಯದ್ದು. ಮಕ್ಕಳ ಅಪೌಷ್ಠಿಕತೆ, ಶಿಶು ಮರಣದ ಪ್ರಮಾಣ ಮತ್ತು ಕ್ಯಾಲೊರಿ ಕೊರತೆಯೆದುರಿಸುತ್ತಿರುವ ಜನತೆಯನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ತಯಾರಿಸಲಾಗಿದೆ.

ಕಡಿಮೆ ತೂಕ ಹೊಂದಿರುವ ಮಕ್ಕಳ ವಿಚಾರಕ್ಕೆ ಬಂದಾಗ ವಿಶ್ವದ ಶೇ.42ರಷ್ಟು ಮಕ್ಕಳು ಭಾರತದಲ್ಲೇ ಇದ್ದಾರೆ. ಇದರ ಪ್ರಮಾಣ ಪಾಕಿಸ್ತಾನದಲ್ಲಿರುವುದು ಶೇ.5 ಮಾತ್ರ. ಇದೇ ಕಾರಣದಿಂದ ಭಾರತವು ಸೂಚ್ಯಂಕದಲ್ಲಿ ಕೆಳಗಿನ ಸ್ಥಾನ ಪಡೆದಿದೆ.

ವಿಶ್ವದ ಅರ್ಧದಷ್ಟು ಕಡಿಮೆ ತೂಕದ ಮಕ್ಕಳು ಭಾರತದಲ್ಲೇ ಇರಲು ಕಾರಣ ದೇಶದಲ್ಲಿನ ಮಹಿಳೆಯರ ಸಾಮಾಜಿಕ ಸ್ಥಾನಮಾನ ಮತ್ತು ಪೌಷ್ಠಿಕಾಂಶಗಳ ಕೊರತೆ.

ನಮ್ಮ ಪಕ್ಕದ ರಾಷ್ಟ್ರಗಳನ್ನು ಗಣನೆಗೆ ತೆಗೆದುಕೊಂಡರೆ ಪಾಕಿಸ್ತಾನವೂ (52) ನಮಗಿಂತ ಉತ್ತಮ ಎಂಬುದು ಸೂಚ್ಯಂಕದಲ್ಲಿ ದಾಖಲಾಗಿದೆ. ಮಯನ್ಮಾರ್ (50), ಶ್ರೀಲಂಕಾ (39), ಇಂಡೋನೇಷಿಯಾ (36) ಮತ್ತು ನೇಪಾಳಗಳು (56) ಕೂಡ ಬಡತನ ವಿಚಾರದಲ್ಲಿ ಭಾರತವನ್ನು ಮೀರಿ ನಿಂತಿವೆ.

ಜಗತ್ತಿನಲ್ಲೇ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಕಮ್ಯೂನಿಸ್ಟ್ ಆಡಳಿತವಿರುವ ಚೀನಾ (9) ಈ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಸಾಧಿಸಿರುವುದು ಪಟ್ಟಿಯಲ್ಲಿ ಕಂಡು ಬರುತ್ತದೆ. ಭಾರತಕ್ಕಿಂತ 58 ಸ್ಥಾನಗಳ ಮುನ್ನಡೆಯನ್ನು ಚೀನಾ ಪಡೆದುಕೊಂಡಿದೆ.

ಅತೀ ಹೆಚ್ಚು ಬಡತನ ಹೊಂದಿರುವ ದೇಶ ಕಾಂಗೋ ಕೊನೆಯ ಅಂದರೆ 84ನೇ ಸ್ಥಾನ ಪಡೆದಿದ್ದರೆ, ಕಡಿಮೆ ಬಡತನವಿರುವ ದೇಶ ಸಿರಿಯಾ. ಟ್ರಿನಿಡ್ಯಾಡ್-ಟೊಬ್ಯಾಗೋ, ಸುರಿನೇಮ್, ಕೊಲೊಂಬಿಯಾ, ಜಾರ್ಜಿಯಾ, ಮೊರೊಕ್ಕೊ, ಸಾಲ್ವಡಾರ್, ಪೆರಾಗ್ವೆ, ಚೀನಾ ಮತ್ತು ವೆನಿಜೆವೆಲಾಗಳು ಮೊದಲ 10 ಸ್ಥಾನ ಪಡೆದ ಇತರ ದೇಶಗಳು.
ಸಂಬಂಧಿತ ಮಾಹಿತಿ ಹುಡುಕಿ