ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇವಳ ಪ್ರವೇಶ ಹೋರಾಟಗಾರ್ತಿ ದಲಿತೆಯ ಅತ್ಯಾಚಾರ (Dalit womanm raped | discrimination | Madhya Pradesh | Jait)
Bookmark and Share Feedback Print
 
ದೇವಸ್ಥಾನವೊಂದಕ್ಕೆ ಪ್ರವೇಶ ನಿರಾಕರಿಸಿದ್ದುದಕ್ಕೆ ದೂರು ನೀಡಿದ್ದ ಮಹಿಳೆಯೊಬ್ಬಳನ್ನು ಮೇಲ್ಜಾತಿಯವರ ವಿರುದ್ಧ ಮಾತನಾಡಿದ ಕಾರಣವನ್ನು ಮುಂದೊಡ್ಡಿ ಇಬ್ಬರು ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಇದು ನಡೆದಿರುವುದು ಮಧ್ಯಪ್ರದೇಶದಲ್ಲಿ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಗ್ರಾಮವಾಗಿರುವ ಜೈಟ್‌ನಲ್ಲಿ ಕಳೆದ ಮೂರು ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಲಾಗಿತ್ತು.

ಆ ಸಂದರ್ಭದಲ್ಲಿ ಗ್ರಾಮದ ಮೇಲ್ಜಾತಿಗಳು ನಡೆಸಿಕೊಂಡು ಬರುತ್ತಿರುವ ತಾರತಮ್ಯ ನೀತಿಯನ್ನು, ಪಕ್ಷಪಾತವನ್ನು ಈ ಮಹಿಳೆ ತೀವ್ರವಾಗಿ ವಿರೋಧಿಸಿದ್ದರು. ಈ ಸಂಬಂಧ ಆಕೆ ದೂರನ್ನು ಕೂಡ ನೀಡಿದ್ದಳು. ಮುಖ್ಯಮಂತ್ರಿಯವರ ಊರಾಗಿದ್ದುದರಿಂದ, ಇದು ತೀವ್ರ ವಿವಾದಕ್ಕೂ ತುತ್ತಾಗಿತ್ತು.

ಪ್ರಕರಣದ ತನಿಖೆ ನಡೆಸುವಂತೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವೂ ಆದೇಶ ನೀಡಿತ್ತು. ಎಚ್ಚೆತ್ತುಕೊಂಡಿದ್ದ ಮುಖ್ಯಮಂತ್ರಿ ಚೌಹಾನ್, ಸ್ವತಃ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲದೆ ದಲಿತರನ್ನು ಸಮಾನವಾಗಿ ಕಾಣಬೇಕು ಎಂದು ಸೂಚನೆ ನೀಡಿದ್ದರು.

ಆ ಸಮಸ್ಯೆ ಪರಿಹಾರ ಕಂಡು ಮೂರು ತಿಂಗಳ ನಂತರ ಅದೇ ಮಹಿಳೆಯನ್ನು ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮೇಲ್ಜಾತಿಯವರ ವಿರುದ್ಧ ದೂರು ನೀಡಿದ್ದುದರಿಂದ ಅತ್ಯಾಚಾರ ನಡೆಸಿ, ಗ್ರಾಮದಲ್ಲಿ ಬಹಿಷ್ಕಾರ ಹಾಕಲಾಗಿದೆ ಎಂದು ವರದಿಗಳು ಹೇಳಿವೆ.

ಲೀಲಾಧರ್ ಮತ್ತು ಬಿಮಲೇಶ್ ಎಂಬವರು ನನ್ನ ಮನೆಗೆ ನುಗ್ಗಿ, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಅತ್ಯಾಚಾರ ನಡೆಸಿದರು. ನಂತರ ಗ್ರಾಮದಿಂದ ನನ್ನ ಹೊರಗೆ ಹಾಕಲಾಗಿದೆ. ಈ ಸಂಬಂಧ ನಾನು ದೂರು ನೀಡಿದರೆ ಯಾರು ಕೂಡ ಸ್ವೀಕರಿಸುತ್ತಿಲ್ಲ. ನಾನು ಎಲ್ಲಿಗೂ ಹೋಗುವಂತಿಲ್ಲ ಎಂದು ಮಹಿಳೆ ದೂರಿಕೊಂಡಿದ್ದಾರೆ.

ಮುಖ್ಯಮಂತ್ರಿಯ ವಿರುದ್ಧ ಸಿಕ್ಕಿರುವ ಮಹತ್ವದ ಅಸ್ತ್ರ ಎಂದು ಪರಿಗಣಿಸಿರುವ ಕಾಂಗ್ರೆಸ್, ಬಲಿಪಶು ಮಹಿಳೆಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ಕರೆದೊಯ್ದಿದೆ. ಈಗ ಮತ್ತೆ ತನಿಖೆಗೆ ಆದೇಶ ನೀಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ