ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆಸರಿಗೆ ಉದ್ಯಮಿ, ಉದ್ಯೋಗ ಕಳ್ಳತನ, ಆಸ್ತಿ ಮೂರು ಕೋಟಿ! (Tamil Nadu | woman | Panchavarnam | autorickshaw)
Bookmark and Share Feedback Print
 
ಆಕೆ ಭಾರೀ ಪರಿಶ್ರಮವಹಿಸಿ ಶ್ರೀಮಂತಳಾಗಿದ್ದಳು ಎಂದೇ ಅಕ್ಕ-ಪಕ್ಕದ ಮನೆಯವರು ಭಾವಿಸಿದ್ದರು. ಆದರೆ ಆಕೆಯ ನಿಜವಾದ ಬಣ್ಣ ಇದೀಗ ಬಯಲಾಗಿದೆ. ದೇವಸ್ಥಾನಗಳಿಗೆ ತೆರಳುವ ಈಕೆ ಜಾತ್ರೆಗಳ ಸಂದರ್ಭದಲ್ಲಿ ಭಕ್ತರಿಂದ ಚಿನ್ನಾಭರಣ ಲಪಟಾಯಿಸಿ ಉದ್ಯಮಿಯಂತೆ ಪೋಸ್ ಕೊಡುತ್ತಿದ್ದಳು ಎನ್ನುವುದು ಎಲ್ಲರಲ್ಲೂ ಅಚ್ಚರಿ ತಂದಿದೆ.

ಪಂಚವರ್ಣಂ ಎಂಬಾಕೆಯೇ ಈ ಆರೋಪಿ. 48ರ ಹರೆಯದ ಈಕೆ ಸ್ಥಳೀಯವಾಗಿ ಉದ್ಯಮಿಯೆಂದೇ ಗುರುತಿಸಿಕೊಂಡಿದ್ದಳು. ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿನ ದೇವಳಗಳ ಜಾತ್ರೆ ಸಂದರ್ಭದಲ್ಲಿ ಭಕ್ತರಿಂದ ಚಿನ್ನಾಭರಣ ಲೂಟಿ ಮಾಡಿ ಲಕ್ಷಗಟ್ಟಲೆ ಸಂಪಾದಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಎರಡು ದಶಕಗಳ ಅವಧಿಯಲ್ಲಿ ಪಂಚವರ್ಣಂ ಮತ್ತು ಆಕೆಯ ಎಂಟು ಸಹಚರರು ಸರಿಸುಮಾರು ಮೂರು ಕೋಟಿ ರೂಪಾಯಿಗಳಿಗೂ ಹೆಚ್ಚು ಸಂಪಾದನೆ ಮಾಡಿದ್ದಾರೆ. ಆಕೆಯಲ್ಲಿ ನಾಲ್ಕು ಮನೆ, ಒಂದು ಜಮೀನು, ಹಲವಾರು ಕಾರುಗಳು, ಅಟೋರಿಕ್ಷಾಗಳು, 100ಕ್ಕೂ ಹೆಚ್ಚು ಕುರಿಗಳು ಹಾಗೂ 50ಕ್ಕೂ ಹೆಚ್ಚು ಹಂದಿಗಳಿವೆ.

ಮಂಗಳವಾರ ಪಂಚವರ್ಣಂ, ಆಕೆಯ ಪುತ್ರ 30ರ ಹರೆಯದ ಪಾಂಡಿ ಮುತ್ತಯ್ಯ, 40ರ ಹರೆಯದ ಸಂಬಂಧಿ ಶೇಖರ್ ಎಂಬವರು ಕಾರಿನಲ್ಲಿ ಶಂಕಾಸ್ಪದವಾಗಿ ಕಾಣಿಸಿಕೊಂಡಿದ್ದಾಗ ಪೊಲೀಸರು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಅವರಲ್ಲಿ ದಾಖಲೆ ಪತ್ರಗಳಿಲ್ಲದ 24 ಪವನ್ ಚಿನ್ನ ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಇವರ ಗ್ಯಾಂಗ್ ನಡೆಸಿರುವ ಕರ್ಮಕಾಂಡ ಬಯಲಾಗಿತ್ತು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 379ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಥೇಣಿಯಲ್ಲಿನ ಶಿವಾಜಿ ನಗರದಲ್ಲಿ ಪಂಚವರ್ಣ, ಆಕೆಯ ಗಂಡ ಮತ್ತು ಪಾಂಡಿಯವರು ಐಷಾರಾಮದ ಜೀವನ ನಡೆಸುತ್ತಿದ್ದರು. ಆದರೂ ಇವರ ಆದಾಯದ ಮೂಲ ಯಾವುದು ಎಂದು ಸ್ವತಃ ಪರಿಚಿತರಿಗೇ ತಿಳಿದಿರಲಿಲ್ಲ. ಇದೀಗ ಅವರು ಕಳ್ಳಿಯರು ಎಂದು ಪೊಲೀಸರು ಪತ್ತೆ ಹಚ್ಚಿರುವುದರಿಂದ ಎಲ್ಲರೂ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ