ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇನ್ಮುಂದೆ ಲೈಂಗಿಕ ಕಿರುಕುಳ ನೀಡಿದ್ರೆ ಹುಷಾರ್! (sexual harassment Bill | Union Cabinet | Parliament | Krishna Tirath,)
Bookmark and Share Feedback Print
 
ಸರಕಾರಿ ಕಚೇರಿ, ಖಾಸಗಿ ಕಚೇರಿ ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಚುಡಾಯಿಸುವುದಾಗಿಲಿ, ಲೈಂಗಿಕ ಕಿರುಕುಳ ನೀಡಿದರೆ ಹುಷಾರ್! ಯಾಕೆ ಗೊತ್ತಾ ಮಹಿಳೆಯರು ಉದ್ಯೋಗ ಮಾಡುವ ಸ್ಥಳದಲ್ಲಿ ನಿಶ್ಚಿಂತೆಯಿಂದ ಇರುವಂತೆ, ರಕ್ಷಣೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ 'ಲೈಂಗಿಕ ಕಿರುಕುಳ ವಿರೋಧಿ' ಮಸೂದೆಗೆ ಗುರುವಾರ ಗ್ರೀನ್ ಸಿಗ್ನಲ್ ನೀಡಿದೆ.

ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಮುಂದಿನ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಉದ್ಯೋಗ ಮಾಡುವ ಸ್ಥಳದಲ್ಲಿ ಲೈಂಗಿಕ ಕಿರುಕುಳದಿಂದ ಮಹಿಳೆಯರನ್ನು ರಕ್ಷಿಸುವ ಮಸೂದೆ 2010 ಮಂಡಿಸುವುದಕ್ಕೆ ಒಪ್ಪಿಗೆ ಸೂಚಿಸಿದೆ. ಆ ನೆಲೆಯಲ್ಲಿ ಈ ಮಸೂದೆ ಅಂಗೀಕಾರವಾಗಿ ಕಾನೂನು ರೂಪಗೊಂಡ ನಂತರ ಕಾಯ್ದೆಯನ್ನು ಉಲ್ಲಂಘಿಸಿ ಲೈಂಗಿಕ ಕಿರುಕುಳ ನೀಡುವ ಕಾಮುಕರಿಗೆ 50 ಸಾವಿರ ರೂಪಾಯಿ ತನಕ ದಂಡ ವಿಧಿಸಬಹುದಾಗಿದೆ.

ಸುಪ್ರೀಂಕೋರ್ಟ್‌ನಲ್ಲಿ ವಿಶಾಖ ಮತ್ತು ರಾಜಸ್ಥಾನಗಳ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುತ್ತ, ಇಂತಹ ಮಸೂದೆ ಜಾರಿಗೆ ತರುವ ಅಗತ್ಯದ ಬಗ್ಗೆ ಪೀಠ ಅಭಿಪ್ರಾಯವ್ಯಕ್ತಪಡಿಸಿತ್ತು. ಈ ಆಧಾರದ ಮೇಲೆ ಮಸೂದೆ ರಚಿಸಲಾಗಿದೆ. ಇದರಂತೆ ದೈಹಿಕ ಸಂಪರ್ಕ, ಲೈಂಗಿಕ ಸಹಕಾರಕ್ಕಾಗಿ ಬೇಡಿಕೆ, ಲೈಂಗಿಕತೆ ಸೂಚಿಸುವ ಪದ ಪ್ರಯೋಗ, ಮೌಖಿಕ, ಆಂಗಿಕ ಹಿತಾಸಕ್ತಿಯನ್ನು ತೋರಿಸದೇ ಇರುವುದು ಸೇರಿದೆ.

ಇದರಲ್ಲಿ ಕೆಲಸ ಮಾಡುವ ಮಹಿಳೆಯರು ಸೇರಿದಂತೆ ಕಾಲೇಜು ವಿದ್ಯಾರ್ಥಿನಿಯರು, ಮಹಿಳಾ ರೋಗಿಗಳು ಸೇರಿದ್ದಾರೆ. ಅದೇ ರೀತಿ ಸ್ಥಳಕ್ಕೆ ಬರುವ ಗ್ರಾಹಕರು, ಕಕ್ಷಿದಾರರು, ದಿನಗೂಲಿ ಕಾರ್ಮಿಕರು ಸೇರಿದ್ದಾರೆ.

ಆದರೆ ಈ ಮಸೂದೆಯಲ್ಲಿ ಮನೆಗೆಲಸ ಮಾಡುವ ಮಹಿಳೆಯರ ಪ್ರಸ್ತಾಪವೇ ಇಲ್ಲ, ಇವರನ್ನು ಮಸೂದೆಯಲ್ಲಿ ಸೇರಿಸಿಯೇ ಇಲ್ಲ. ಕೇವಲ ಉದ್ಯೋಗದಲ್ಲಿರುವ ಮಹಿಳೆ ಎಂದು ಮಸೂದೆಯಲ್ಲಿ ಸೇರಿಸಿರುವುದರಿಂದ ಮನೆಗೆಲಸದ ಮಹಿಳೆ ಆ ಹಕ್ಕಿನಿಂದ ವಂಚಿತಳಾಗುತ್ತಾಳೆ ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ