ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನ ಪದಚ್ಯುತಿಗೆ ಕಾಂಗ್ರೆಸ್ಸಿಗರೇ ಕಾರಣ: ಅಶೋಕ್ ಚೌಹಾನ್ (Adarsh scam | Ashok Chavan | Maharashtra | Congress)
Bookmark and Share Feedback Print
 
ಆದರ್ಶ ವಸತಿ ಸಂಕೀರ್ಣ ಹಗರಣದಲ್ಲಿ ಸಿಕ್ಕಿ ಬಿದ್ದು ಇತ್ತೀಚೆಗಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದ ಅಶೋಕ್ ಚೌಹಾನ್, ತನ್ನ ಈ ಗತಿಗೆ ಕಾಂಗ್ರೆಸ್‌ನೊಳಗಿನವರೇ ಕಾರಣ ಎಂದು ಆಪಾದಿಸಿದ್ದಾರೆ.

ನಾಂದೇ‌ಡ್‌ನಲ್ಲಿ ರ‌್ಯಾಲಿಯೊಂದರಲ್ಲಿ ಮಾತನಾಡುತ್ತಾ ಯಾರನ್ನೂ ಹೆಸರಿಸದೆ ವಾಗ್ದಾಳಿ ನಡೆಸಿದ ಚೌಹಾನ್, ನನ್ನ ಪದಚ್ಯುತಿಯಲ್ಲಿ ಕಾಂಗ್ರೆಸ್‌ನೊಳಗಿನ ಎದುರಾಳಿಗಳು ಕೆಲಸ ಮಾಡಿದ್ದಾರೆ ಎಂದರು.

ಕೆಲವು ಮಂದಿ ನನ್ನ ಹೆಸರು ಕೆಡಿಸಲು 'ಸುಪಾರಿ' ನೀಡಿದ್ದರು. ಆದರ್ಶ ಹಗರಣದಲ್ಲಿ ನಾನು ಅಮಾಯಕ. ಇದು ತನಿಖೆಯಲ್ಲಿ ರುಜುವಾತಾಗಲಿದೆ. ಎರಡು ಬಾರಿ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ ಸೋನಿಯಾ ಗಾಂಧಿಗೆ ನಾನು ಕೃತಜ್ಞ ಎಂದು ಹೇಳಿದರು.

ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಿದ ನಂತರ ಅವರು ಮೊತ್ತ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾನುವಾರ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಮೇಲೂ ಅವರು ಹರಿಹಾಯ್ದರು. ಇಂದಿನ ದಿನಗಳಲ್ಲಿ ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮದ ಒಂದು ವಿಭಾಗವು ನೇರವಾಗಿ ವಿಚಾರಣೆ ನಡೆಸಿ ಶಿಕ್ಷಿಸುವ ರೀತಿಯಲ್ಲಿ ವರ್ತಿಸುತ್ತಿದೆ. ಅವರು ತಪ್ಪಿತಸ್ಥ ಎಂದು ಸಾಕ್ಷ್ಯಗಳಿಲ್ಲದೆ ತೀರ್ಪು ನೀಡುತ್ತಿದೆ. ಇದು ನಿಲ್ಲಬೇಕು ಎಂದು ಆಗ್ರಹಿಸಿದರು.

ಯಾರನ್ನೂ ಹೆಸರಿಸದೆ ತನ್ನ ಆರೋಪಗಳನ್ನು ಮುಂದವರಿಸಿದ ಚೌಹಾನ್, ನಾನು ಮುಖ್ಯಮಂತ್ರಿ ಪದವಿಯನ್ನು ತೊರೆದ ನಂತ ಚುಲ್ಬುಲ್ ಪಾಂಡೆಯವರು ಸಂತೋಷದಿಂದಿದ್ದಾರೆ. ಆದರೆ ಈ ಸಂತೋಷ ಅಲ್ಪಾವಧಿಯದ್ದು. ಒಬ್ಬ ಚೌಹಾನ್ ಬದಲಿಗೆ ಮತ್ತೊಬ್ಬರು ಬಂದಿದ್ದಾರೆ ಎಂದರು.

ಆದರ್ಶ ವಸತಿ ಹಗರಣದಲ್ಲಿ ಅಶೋಕ್ ಚೌಹಾನ್ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಪದಚ್ಯುತಗೊಳಿಸಿ, ಕೇಂದ್ರ ಸಚಿವರಾಗಿದ್ದ ಪೃಥ್ವಿರಾಜ್ ಚೌಹಾನ್ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮಾಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ