ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಮುದ್ರಕ್ಕೆ ಬಿದ್ದ ಅಗ್ನಿ-II ಪ್ಲಸ್ ಕ್ಷಿಪಣಿ; ಭಾರತಕ್ಕೆ ನಿರಾಸೆ (Agni-II Plus | missile | Orissa | India)
Bookmark and Share Feedback Print
 
ಅಗ್ನಿ-II ಸುಧಾರಿತ ಕ್ಷಿಪಣಿಯ ಪರೀಕ್ಷೆ ವಿಫಲವಾಗಿದೆ. ಒರಿಸ್ಸಾ ಕರಾವಳಿಯ ಪರೀಕ್ಷಾ ಕೇಂದ್ರದಿಂದ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಅದು ಬಂಗಾಳ ಕೊಲ್ಲಿಯ ಸಾಗರದಲ್ಲಿ ಪತನಗೊಂಡಿದ್ದು, ಭಾರತಕ್ಕೆ ತೀವ್ರ ನಿರಾಸೆಯಾಗಿದೆ.

2,500ದಿಂದ 3,000 ಕಿಲೋ ಮೀಟರ್ ದೂರ ಭೂಮಿಯಿಂದ ಭೂಮಿಗೆ ಚಿಮ್ಮುವ, ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಅಗ್ನಿ-II ಪ್ಲಸ್ ಎಂದು ಹೆಸರಿಸಲಾಗಿದ್ದ ಅಗ್ನಿ-II ಕ್ಷಿಪಣಿಯ ಸುಧಾರಿತ ಕ್ಷಿಪಣಿಯು ವೀಲರ್ ಐಸ್ಲೆಂಡ್‌ನಿಂದ ಬೆಳಿಗ್ಗೆ 10 ಗಂಟೆಗೆ ಚಿಮ್ಮಿದ ಕೆಲವೇ ಹೊತ್ತಿನಲ್ಲಿ ಸಮುದ್ರ ಪಾಲಾಗಿದೆ.

ಅಗ್ನಿ-II ಮತ್ತು ಅಗ್ನಿ-III ಕ್ಷಿಪಣಿಗಳ ಮಧ್ಯಂತರ ಆವೃತ್ತಿಯಾಗಿರುವ ಈ ಕ್ಷಿಪಣಿಯನ್ನು ಇದೇ ಮೊದಲ ಬಾರಿಗೆ ಪರೀಕ್ಷೆಗೊಳಪಡಿಸಲಾಗಿತ್ತು. ಘನ ನೋದಕಗಳಿಂದ ಶಕ್ತಿ ಪಡೆದುಕೊಂಡು ಎರಡು ಹಂತದಲ್ಲಿ ಚಿಮ್ಮುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿತ್ತು.

ಸುಧಾರಿತ ಕ್ಷಿಪಣಿ ಪರೀಕ್ಷೆ ವಿಫಲಗೊಂಡಿರುವುದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಖಚಿತಪಡಿಸಿದೆ. ಕ್ಷಿಪಣಿ ಉಡಾವಣೆ ಪರೀಕ್ಷೆ ವಿಫಲವಾಗಿದೆ. ಆದರೆ ಅದಕ್ಕೆ ಏನು ಕಾರಣ ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ ಎಂದು ಮೂಲಗಳು ಹೇಳಿವೆ.

ಇದೇ ವರ್ಷದ ಸೆಪ್ಟೆಂಬರ್ 24ರಂದು ಪೃಥ್ವಿ-II ಕ್ಷಿಪಣಿ ಇದೇ ರೀತಿ ವಿಫಲವಾಗಿತ್ತು. ಅದರ ನಂತರ ಭಾರತಕ್ಕೆ ಎದುರಾಗುತ್ತಿರುವ ಮತ್ತೊಂದು ವೈಫಲ್ಯವಿದು. ಆದರೆ ಈ ನಡುವೆ ಹಲವು ಯಶಸ್ವಿ ಕ್ಷಿಪಣಿ ಪರೀಕ್ಷೆಗಳನ್ನು ಭಾರತ ನಡೆಸಿದೆ. ಕೆಲವೇ ದಿನಗಳ ಹಿಂದೆ, ನವೆಂಬರ್ 25ರಂದು ಅಗ್ನಿ-I ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿತ್ತು.

ಭಾರತದ ಪರಮಾಣು ಸಾಮರ್ಥ್ಯಕ್ಕೆ ಇಂದಿನ ಕ್ಷಿಪಣಿ ಪರೀಕ್ಷೆ ಮತ್ತೊಂದು ಮೈಲುಗಲ್ಲಾಗಲಿದೆ ಎಂದು ಡಿಆರ್‌ಡಿಒ ಭರವಸೆಯನ್ನಿಟ್ಟಿತ್ತು. ಅಗ್ನಿ-II ಕ್ಷಿಪಣಿಗಿಂತ ಹೆಚ್ಚು ದೂರ ಸಾಗುವ ಸಾಮರ್ಥ್ಯ, ಹೆಚ್ಚಿನ ನಿರ್ವಹಣೆ ಮತ್ತು ತೂಕವನ್ನು ಹೊಂದಿದ್ದ ಈ ಕ್ಷಿಪಣಿಯನ್ನು ಹೈದರಾಬಾದ್‌ನ ಡಿಆರ್‌ಡಿಒ ಸುಧಾರಿತ ವ್ಯವಸ್ಥೆಯ ಪ್ರಯೋಗಾಲಯದಲ್ಲಿ ತಯಾರಿಸಲಾಗಿತ್ತು.

ಸ್ವದೇಶಿ ತಂತ್ರಜ್ಞಾನವನ್ನೊಳಗೊಂಡ ಅಗ್ನಿ ಸರಣಿಯ ಹಲವು ಕ್ಷಿಪಣಿಗಳು ಈಗಾಗಲೇ ಭಾರತೀಯ ಸೇನೆಯಲ್ಲಿ ಸೇವೆಯಲ್ಲಿವೆ.
ಸಂಬಂಧಿತ ಮಾಹಿತಿ ಹುಡುಕಿ