ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಿರುಬೋಟ್ ತಪಾಸಣೆಗೆ ಕಸಬ್ ವಕೀಲರಿಗೆ ಕೋರ್ಟ್ ಸೂಚನೆ (26/11 | Bombay High Court | Kasab | terrorist)
Bookmark and Share Feedback Print
 
ಮುಂಬೈ ದಾಳಿಗಾಗಿ ಕಡಲ ತೀರಕ್ಕೆ ಬರಲು ಪಾಕಿಸ್ತಾನಿ ಭಯೋತ್ಪಾದಕರು ಬಳಸಿಕೊಂಡಿದ್ದ, ಕಿರು ಬೋಟನ್ನು ಪರಿಶೀಲಿಸುವಂತೆ, ಪಾತಕಿ ಕಸಬ್‌ನ ವಕೀಲರಿಗೆ ಬಾಂಬೆ ಹೈಕೋರ್ಟ್ ಗುರುವಾರ ಸೂಚಿಸಿದೆ.

ಒಂದು ಕಿರುಬೋಟ್‌ನಲ್ಲಿ ಸರಂಜಾಮುಗಳೊಂದಿಗೆ ಹತ್ತು ಜನ ಬರಲು ಅಸಾಧ್ಯ ಎಂದು ಕಸಬ್ ಪರ ವಕೀಲರಾದ ಅಮೀನ್ ಸೋಲ್ಕಾರ್, ಫರ್ಹಾನಾ ಷಾ, ಸಂತೋಷ್ ದೇಶಪಾಂಡೆ ಮತ್ತು ಹುಸೇನ್ ಶೇಖ್ ವಾದಿಸಿದ್ದರು. ಈ ನಿಮಿತ್ತ ಕೋರ್ಟ್ ಆದೇಶ ಹೊರಡಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಂದು ಉಗ್ರರು ಬಳಸಿಕೊಂಡಿದ್ದ ಕಿರುಬೋಟ್‌ ಪ್ರಸ್ತುತ ವಿಚಾರಣಾ ನ್ಯಾಯಾಲಯದಲ್ಲಿದೆ. ಅದನ್ನು ಅರ್ಥರ್ ರೋಡ್ ಸೆಂಟ್ರಲ್ ಜೈಲ್‌ನಲ್ಲಿ ಬಿಗಿಭದ್ರತೆಯಲ್ಲಿ ಇರಿಸಲಾಗಿದೆ. ಅದನ್ನು ಪರಿಶೀಲಿಸಿ ಈ ವಕೀಲರು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.

ನಗರ ನ್ಯಾಯಾಧಿಶರ ಮುಂದೆ ಪಾತಕಿ ಕಸಬ್ ಕೊಟ್ಟಿರುವ ಹೇಳಿಕೆಯಂತೆ, ಆತ ಹಾಗೂ ಇತರ ಭಯೋತ್ಪಾದಕರು ಕಿರುಬೋಟ್‌ ಅನ್ನು ಪಾಕಿಸ್ತಾನದಿಂದಲೇ ಅಲ್ ಹುಸೈನ್ ಎಂಬ ದೊಡ್ಡ ಬೋಟ್‌ನಲ್ಲಿ ತಂದಿದ್ದರು. ಸಮುದ್ರ ಮಧ್ಯೆ ಭಾರತೀಯ ಮೀನುಗಾರರ ಬೋಟ್ 'ಕುಬೇರ್'ನ್ನು ಅಪಹರಿಸಿ ಮುಂಬೈ ಸಮುದ್ರಕ್ಕೆ ಬಂದರು. ಅಲ್ಲಿಂದ ಕಡಲತೀರಕ್ಕೆ ಬರಲು ಇವರು ತಂದಿದ್ದ ಈ ಕಿರುಬೋಟನ್ನು ಬಳಸಿಕೊಳ್ಳಲಾಯಿತು ಎಂದಿದ್ದ.
ಸಂಬಂಧಿತ ಮಾಹಿತಿ ಹುಡುಕಿ