ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚೀನಾ ಪ್ರಶಸ್ತಿ ತಿರಸ್ಕರಿಸಿದ ಕಾಂಗ್ರೆಸ್ಸಿಗ ಕರಣ್ ಸಿಂಗ್! (China-India Friendship Award | Karan Singh | Sitaram Yechury | Rajya Sabha)
Bookmark and Share Feedback Print
 
ಭಾರತ-ಚೀನಾ ಸ್ನೇಹ ಅಭಿವೃದ್ಧಿ ಸಂಕೇತವಾಗಿ ಚೀನಾ ಪ್ರಧಾನಿ ವೆನ್ ಜಿಯಬಾವೊ ಅವರು ಚೀನಾ-ಇಂಡಿಯಾ ಫ್ರೆಂಡ್‌ಶಿಪ್ ಅವಾರ್ಡ್ ಪ್ರದಾನ ಮಾಡಿದ್ದು, ಈ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಮಾಜಿ ರಾಜ, ಹಿರಿಯ ಕಾಂಗ್ರೆಸ್ ಮುಖಂಡ ಕರಣ್ ಸಿಂಗ್ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

ಚೀನಾ ಪ್ರಧಾನಿ ವೆನ್ ಅವರು ಗುರುವಾರ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ಕರಣ್ ಸಿಂಗ್ ಸೇರಿದಂತೆ ನಾನಾ ಕ್ಷೇತ್ರಗಳ ಒಂಬತ್ತು ಮಂದಿಗೆ ಚೀನಾ ಇಂಡಿಯಾ ಫ್ರೆಂಡ್‌ಶಿಪ್ ಅವಾರ್ಡ್ ಪ್ರದಾನ ಮಾಡುವ ಸಂದರ್ಭದಲ್ಲಿ, ಸಿಂಗ್ ಚೀನಾ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದರು.

ಸಂಸದೀಯ ಪಟುವಾಗಿರುವವರು ಇಂತಹ ಪ್ರಶಸ್ತಿಗಳನ್ನು ಸ್ವೀಕರಿಸಿದರೆ ಒಂದು ನಿರ್ದಿಷ್ಟ ರಾಷ್ಟ್ರದ ಪರವಾಗಿದ್ದೇವೆ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಕರಣ್ ಸಿಂಗ್ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಚೀನಾ ಕಾಶ್ಮೀರಿಗಳಿಗೆ ಪ್ರತ್ಯೇಕ ಹಾಳೆಯಲ್ಲಿ ವೀಸಾ ನೀಡುತ್ತಿದೆ. ಈ ಕ್ರಮವು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನೇ ಚೀನಾ ಪ್ರಶ್ನಿಸುವಂತಿದೆ. ಇಂತಹ ಸ್ಥಿತಿಯಲ್ಲಿ ಕಾಶ್ಮೀರದವನಾಗಿ ನಾನು ಈ ಪ್ರಶಸ್ತಿ ಸ್ವೀಕರಿಸಲಾರೆ ಎಂದು ಖಡಕ್ ಆಗಿ ತಿಳಿಸಿದ್ದಾರೆ.

ಈ ಪ್ರಶಸ್ತಿಗೆ ಪ್ರೊ.ತಾನ್ ಚುಂಗ್, ಜಿ.ವಿಶ್ವನಾಥನ್, ಜಿ.ಬ್ಯಾನರ್ಜಿ, ಎಂ.ಮೊಹಂತಿ, ಎಸ್.ಚಕ್ರವರ್ತಿ, ಭಾಸ್ಕರನ್, ಶೆರ್ಡಿಲ್ ಹಾಗೂ ಪಲ್ಲವಿ ಅಯ್ಯರ್, ಸೀತಾರಾಂ ಯೆಚೂರಿ ಆಯ್ಕೆಯಾದ ಇತರ ಭಾರತೀಯರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ