ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಷ್ಕರ್‌ಗಿಂತ್ಲೂ ಭಾರತಕ್ಕೆ ಹಿಂದೂ ಉಗ್ರವಾದ ಅಪಾಯ: ರಾಹುಲ್ (Rahul Gandhi | Hindu Terror | Lashkar | Bigger Threat | WikiLeaks | Tim Roemer)
Bookmark and Share Feedback Print
 
PTI
ಲಷ್ಕರ್ ಇ ತೋಯಿಬಾ, ಇಂಡಿಯನ್ ಮುಜಾಹಿದೀನ್ ಮೊದಲಾದ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಗಳಿಗಿಂತಲೂ ಹಿಂದೂ ಉಗ್ರಗಾಮಿಗಳೇ ಭಾರತಕ್ಕೆ ಅತಿದೊಡ್ಡ ಬೆದರಿಕೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಭವಿಷ್ಯದ ಕಾಂಗ್ರೆಸ್ ಪ್ರಧಾನಿ ಎಂದೇ ಬಿಂಬಿತವಾಗಿರುವ ರಾಹುಲ್ ಗಾಂಧಿ ಹೇಳಿದ್ದಾರೆ.

ಇತ್ತೀಚೆಗೆ ಔತಣಕೂಟವೊಂದರಲ್ಲಿ ಭಾರತದಲ್ಲಿರುವ ಅಮೆರಿಕ ರಾಯಭಾರಿ ಟಿಮೊತಿ ರೋಮರ್ ಅವರೊಂದಿಗೆ ರಾಹುಲ್ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.

ಲಷ್ಕರ್‌ಗೆ ಭಾರತೀಯ ಮುಸ್ಲಿಮರ ಬೆಂಬಲವಂತೆ...
ಭಾರತದೊಳಗಿರುವ ಮುಸ್ಲಿಂ ಸಮುದಾಯದಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಲಷ್ಕರ್ ಕುರಿತು ಒಂದಿಷ್ಟು ಬೆಂಬಲ ಇರುವುದು ನಿಜವಾದರೂ, ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸುವ ಮತ್ತು ಮುಸ್ಲಿಂ ಸಮುದಾಯದೊಂದಿಗೆ ರಾಜಕೀಯ ವೈರ ಕಟ್ಟಿಕೊಂಡಿರುವ ಹಿಂದೂ ತೀವ್ರವಾದಿ ಬಣಗಳ ಬೆಳವಣಿಗೆಯು ಅತಿದೊಡ್ಡ ಬೆದರಿಕೆ ಎಂದು ಟಿಮೊತಿ ರೋಮರ್‌ಗೆ ರಾಹುಲ್ ಎಚ್ಚರಿಸಿದ್ದಾರೆ ಎಂದು ವಿಕಿಲೀಕ್ಸ್ ಬಹಿರಂಗಪಡಿಸಿರುವ ದಾಖಲೆಗಳನ್ನು ಉಲ್ಲೇಖಿಸಿ, 'ದಿ ಗಾರ್ಡಿಯನ್' ವರದಿ ಮಾಡಿದೆ.

ಲಷ್ಕರ್ ಚಟುವಟಿಕೆ ಮತ್ತು ಅದರಿಂದ ಭಾರತಕ್ಕಿರುವ ಬೆದರಿಕೆ ಕುರಿತು ರೋಮರ್ ವಿಚಾರಿಸಿದಾಗ ಉತ್ತರಿಸುತ್ತಿದ್ದ ರಾಹುಲ್ ಈ ಅಭಿಪ್ರಾಯಗಳನ್ನು ಹೊರಗೆಡಹಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿದಿನ ಹಿಂಸಾಚಾರ ನಡೆಸುತ್ತಾ, ನರಮೇಧ ನಡೆಸುತ್ತಿರುವ ಪಾಕಿಸ್ತಾನಿ ಮೂಲದ ಲಷ್ಕರ್ ಇ ತೋಯಿಬಾ, ದೇಶದ ವಿವಿಧೆಡೆ ಬಾಂಬ್ ಸ್ಫೋಟಗಳನ್ನು ನಡೆಸುತ್ತಾ ಮುಗ್ಧರ ಮಾರಣ ಹೋಮ ನಡೆಸುತ್ತಿದೆ. ಹೀಗಾಗಿ ಅಂತಹಾ ಲಷ್ಕರ್‌ಗಿಂತಲೂ ಹಿಂದೂ ತೀವ್ರವಾದವು ಹೆಚ್ಚು ಅಪಾಯಕಾರಿ ಎಂದು ರಾಹುಲ್ ಹೇಳಿರುವುದು ಪ್ರತಿಪಕ್ಷಗಳಲ್ಲಿ, ವಿಶೇಷವಾಗಿ ಬಿಜೆಪಿಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರ ಬಿಡುಗಡೆ ಮಾಡಲಾಗಿರುವ ಸುಮಾರು 20ರಷ್ಟು ಹೊಸ ವಿಕಿಲೀಕ್ಸ್ ದಾಖಲೆಗಳಲ್ಲಿ, ಅಮೆರಿಕ ರಾಯಭಾರಿಗಳು ಭಾರತದ ಬಗ್ಗೆ ಚರ್ಚಿಸುತ್ತಿರುವ ಉಲ್ಲೇಖಗಳಿವೆ. ಅದರಲ್ಲಿ, ಕಾಶ್ಮೀರದಲ್ಲಿ ಖೈದಿಗಳನ್ನು ನಿರ್ದಯವಾಗಿ ದಂಡಿಸಲಾಗುತ್ತಿದೆ ಎಂದು 2005ರ ಏಪ್ರಿಲ್ ತಿಂಗಳಲ್ಲಿ ರೆಡ್ ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಯೊಂದು ಕಳವಳ ವ್ಯಕ್ತಪಡಿಸಿರುವುದರ ಉಲ್ಲೇಖವೂ ಇದೆ. ಉದ್ವಿಗ್ನತೆ, ಹಿಂಸಾಚಾರದಿಂದ ಹೈರಾಣಾಗಿರುವ ಕಾಶ್ಮೀರಕ್ಕೊಂದು ಪರಿಹಾರ ಕಂಡು ಹುಡುಕುವ ನಿಟ್ಟಿನಲ್ಲಿ ಕೇಂದ್ರವು ತೀವ್ರ ಪ್ರಯತ್ನಿಸುತ್ತಿರುವ ಸಂದರ್ಭ, ಈ ರೀತಿಯ ವರದಿಗಳು ಬಹಿರಂಗಗೊಂಡಿರುವುದು ಕಳವಳಕ್ಕೂ ಕಾರಣವಾಗಿದೆ.

ಪಕ್ಷದ ಬಗ್ಗೆ...
ಪಕ್ಷಕ್ಕೆ ಯುವಕರ ಸೇರ್ಪಡೆಯೇ ಮುಖ್ಯ. ಅವರು ಹಳೆಯ ಕಾಂಗ್ರೆಸಿಗರ 'ಬ್ಯಾಗೇಜ್' (ಹಳೆಯ ಮನಸ್ಥಿತಿ?) ಹೊಂದಿರಬಾರದು. ಸಣ್ಣ ನಗರಗಳು, ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷಕ್ಕೆ ಯುವಕರನ್ನು ಆಕರ್ಷಿಸಬೇಕು. ಯಾಕೆಂದರೆ ಅಲ್ಲೆಲ್ಲಾ ಬಿಜೆಪಿ ದುರ್ಬಲವಾಗಿದೆ. ದೊಡ್ಡ ನಗರಗಳಲ್ಲಿ ಮತದಾರರನ್ನು ಓಲೈಸುವ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲವಂತೆ.
ಸಂಬಂಧಿತ ಮಾಹಿತಿ ಹುಡುಕಿ