ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋನಿಯಾ ವಿಫಲ ನಾಯಕಿ, ಅರ್ಜುನ್ ಸಿಂಗ್ ಮುದಿತಲೆ! (Sonia gandhi | Prakash Karat | Arjun Singh | UPA govt)
Bookmark and Share Feedback Print
 
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ನಾಯಕತ್ವದ ಗಂಧ-ಗಾಳಿಯಿಲ್ಲ, ಅರ್ಜುನ್ ಸಿಂಗ್ ಮುದಿತಲೆ, ಪ್ರಕಾಶ್ ಕಾರಟ್ ವಸೂಲಿಗಾರ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಉತ್ತಮ ಸ್ನೇಹಿತ -- ಇದು ರಾಜತಾಂತ್ರಿಕ ಸಂಬಂಧದ ಹೆಸರಿನಲ್ಲಿ ಭಾರತದಲ್ಲಿರುವ ಅಮೆರಿಕಾ ರಾಯಭಾರಿಗಳು ತಮ್ಮ ದೇಶಕ್ಕೆ ಕಳುಹಿಸಿರುವ ವರದಿ!

ಅಮೆರಿಕಾ-ಭಾರತ ನಡುವಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಯುಪಿಎ ಸರಕಾರದ ಅಂಗಪಕ್ಷವಾಗಿದ್ದ ಎಡಪಕ್ಷಗಳು ವಿರೋಧಿಸಿದಾಗ ಅದನ್ನು ನಿಭಾಯಿಸಲು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿಫಲರಾಗಿದ್ದನ್ನು ಬೆಟ್ಟು ಮಾಡಿಕೊಂಡು ಅಮೆರಿಕಾದ ಭಾರತದಲ್ಲಿನ ರಾಯಭಾರಿಗಳು ಸೋನಿಯಾರನ್ನು ಟೀಕಿಸಿ ತಮ್ಮ ದೇಶಕ್ಕೆ ವರದಿ ರವಾನಿಸಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಗಳಲ್ಲಿ ಲಾಭವಾಗುವ ಸಾಧ್ಯತೆಗಳಿರುವ ಹೊರತಾಗಿಯೂ ಸೋನಿಯಾ ಗಾಂಧಿ ಸಮರ್ಥ ನಾಯಕತ್ವ ಪ್ರದರ್ಶಿಸಲು ವಿಫಲರಾಗಿದ್ದಾರೆ. ಇದರಿಂದಾಗಿ ಭಾರತದ ಭವಿಷ್ಯದ ವಿದೇಶಾಂಗ ಸಂಬಂಧಗಳ ವಿಶ್ವಾಸಾರ್ಹತೆಯು ಓಲಾಡುತ್ತಿದೆ. ಅವಕಾಶಗಳನ್ನು ಕಳೆದುಕೊಳ್ಳುವ ಅವಕಾಶಗಳನ್ನು ಸೋನಿಯಾ ಗಾಂಧಿ ಯಾವತ್ತೂ ಕಳೆದುಕೊಂಡಿಲ್ಲ ಎಂದು 2007ರ ನವೆಂಬರ್ ತಿಂಗಳಲ್ಲಿ ಕಳುಹಿಸಿರುವ ದಾಖಲೆಗಳಲ್ಲಿ ಹೇಳಲಾಗಿದೆ.

ಅದೇ ರೀತಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಅರ್ಜುನ್ ಸಿಂಗ್ ಅವರನ್ನು ಅಮೆರಿಕಾ ರಾಯಭಾರಿಗಳು, 'ಕಾಂಗ್ರೆಸ್‌ನ ಮುದಿ ತಲೆ' ಮತ್ತು 'ಮಹಾನ್ ಅವಿವೇಕಿ' ಎಂದೂ ಬಣ್ಣಿಸಿ ತಮ್ಮ ವರದಿಗಳನ್ನು ವಾಷಿಂಗ್ಟನ್‌ಗೆ ಕಳುಹಿಸಿದ್ದರು.

ಅಮೆರಿಕಾವನ್ನು ಹಂತ ಹಂತದಲ್ಲೂ ವಿರೋಧಿಸುತ್ತಾ ಬಂದಿರುವ ಭಾರತೀಯ ಕಮ್ಯೂನಿಸ್ಟ್ ಪಕ್ಷದ (ಮಾರ್ಕಿಸ್ಟ್) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರನ್ನು 'ಸುಲಿಗೆಕೋರ' ಎಂದು ಜರೆಯಲಾಗಿದೆ.

ಆದರೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಪ್ರಶಂಸಿಸಲಾಗಿದೆ. ಆರ್ಥಿಕ ತಜ್ಞರಾಗಿರುವ 77ರ ಹರೆಯದ ಸಿಂಗ್ ಒಬ್ಬ ಯೋಗ್ಯ ಗೆಳೆಯ ಎಂದು ಅಮೆರಿಕಾ ರಾಜತಾಂತ್ರಿಕರು ಬಣ್ಣಿಸಿದ್ದಾರೆ.

ಯುಪಿಎ ಸರಕಾರದ ಭ್ರಷ್ಟಾಚಾರ, ಅಂಗರಕ್ಷಕರು ಮತ್ತು ಭದ್ರತಾ ವಾಹನಗಳ ಸೈರನ್ ದುರ್ಬಳಕೆ, ಆರೋಗ್ಯ ಮತ್ತು ಶೈಕ್ಷಣಿಕ ಸೇವೆಗಳಲ್ಲಿನ ಜಡತ್ವ, ಮೂಲಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಮುಂತಾದುವುಗಳಿಂದ ಬಸವಳಿದಿದ್ದ ಸಾರ್ವಜನಿಕರಿಗೆ 2008 ನವೆಂಬರ್ ತಿಂಗಳ ಮುಂಬೈ ದಾಳಿ ಪ್ರಮುಖವಾಗಿ ಇತರ ವಿಚಾರಗಳನ್ನು ಮರೆಯುಂತೆ ಮಾಡಿದವು ಎಂದೂ ದಾಖಲೆಗಳಲ್ಲಿ ಹೇಳಲಾಗಿದೆ.

ಅಮೆರಿಕಾದ ಈ ದಾಖಲೆಗಳನ್ನು ಬಹಿರಂಗಪಡಿಸಿರುವುದು ವಿಕಿಲೀಕ್ಸ್.
ಸಂಬಂಧಿತ ಮಾಹಿತಿ ಹುಡುಕಿ