ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್‌ನನ್ನು ನನ್ನಲ್ಲಿಗೆ ಕಳ್ಸಿ, ಪಾಠ ಕಲಿಸ್ತೇನೆ: ಉಮಾ (Rahul Gandhi | Uma Bharti | BJP | Congress)
Bookmark and Share Feedback Print
 
ಕಾಂಗ್ರೆಸ್ ನಾಯಕ ರಾಹುಲ್‌ಗೆ ಭಾರತದ ಇತಿಹಾಸವೇ ಗೊತ್ತಿಲ್ಲ. ದಿಗ್ವಿಜಯ್ ಸಿಂಗ್ ಹೇಳಿದ್ದೇ ಸರಿ ಎಂದು ನಂಬಿಕೊಂಡು ಏನೇನೋ ಮಾತನಾಡುತ್ತಿದ್ದಾರೆ. ಅವರು ನನ್ನ ಬಳಿ ಬರಲಿ, ನಾನು ಅವರಿಗೆ ಇತಿಹಾಸದ ಪಾಠ ಮಾಡುತ್ತೇನೆ ಎಂದು ಬಿಜೆಪಿಯ ಮಾಜಿ ನಾಯಕಿ ಉಮಾ ಭಾರತಿ ಹೇಳಿದ್ದಾರೆ.

ಮುಸ್ಲಿಂ ಭಯೋತ್ಪಾದನೆಗಿಂತ ಹಿಂದೂ ತೀವ್ರವಾದ ದೇಶಕ್ಕೆ ಅಪಾಯಕಾರಿ ಎಂದು ರಾಹುಲ್ ಅಮೆರಿಕಾ ರಾಯಭಾರಿಯಲ್ಲಿ ಹೇಳಿರುವುದು ಬಹಿರಂಗವಾದ ನಂತರ ಉರಿ ನಾಲಿಗೆ ಖ್ಯಾತಿಯ ನಾಯಕಿ ವಾಗ್ದಾಳಿ ನಡೆಸಿದರು.
PTI

ಮಾನಸಿಕವಾಗಿ ದಿವಾಳಿಯಾಗಿರುವ ರಾಹುಲ್ ಗಾಂಧಿ ರಾಜಕೀಯವಾಗಿ ಅಪ್ರಬುದ್ಧ. ಅವರು ದಿಗ್ವಿಜಯ್ ಸಿಂಗ್‌ರಿಂದ ಭಾರತದ ಇತಿಹಾಸವನ್ನು ಕಲಿಯುವ ಬದಲು ನನ್ನಲ್ಲಿಗೆ ಬರಲಿ, ನಾನು ಅವರಿಗೆ ಹೇಳಿ ಕೊಡುತ್ತೇನೆ ಎಂದು ಕುಟುಕಿದರು.

ಈಗ ರಾಹುಲ್ ಓದುತ್ತಿರುವುದು ದಿಗ್ವಿಜಯ್ ಸಿಂಗ್ ಬರೆದಿರುವುದನ್ನು ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ವಿವಾದಿತ ನಾಯಕನ ವಿರುದ್ಧವೂ ಉಮಾ ಭಾರತಿ ಟೀಕಾಪ್ರಹಾರ ನಡೆಸಿದರು.

ದಿಗ್ವಿಜಯ್ ಸಿಂಗ್ ಈ ಹಿಂದಿನಿಂದಲೂ ಹಿಂದೂ ಭಯೋತ್ಪಾದನೆ ಎಂದು ಹೇಳುತ್ತಾ ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದೂ ಸಂಘಟನೆಗಳ ಮೇಲೆ ಆರೋಪಿಸುತ್ತಾ ಬಂದವರು. ಇತ್ತೀಚೆಗಷ್ಟೇ ಅವರು, ಕರ್ಕರೆ ಸಾವಿನ ಹಿಂದೆ ಹಿಂದೂ ತೀವ್ರವಾದಿಗಳಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿ ನಂತರ ಸ್ಪಷ್ಟನೆ ನೀಡಿದ್ದನ್ನು ಸ್ಮರಿಸಬಹುದಾಗಿದೆ.

ಭಯೋತ್ಪಾದನೆಯಲ್ಲಿ ವರ್ಗೀಕರಣ ನಡೆಸುವ ಮೂಲಕ ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದೂ ಉಮಾ ಭಾರತಿ ಟೀಕಿಸಿದರು.

ಕಾಂಗ್ರೆಸ್ ಎನ್ನುವುದು ಒಂದು ಬೇಜವಾಬ್ದಾರಿಯುತ ಪಕ್ಷ. ಇದು ಭಯೋತ್ಪಾದನೆಯನ್ನು ಸೃಷ್ಟಿಸಿ, ಅದರ ಹೆಸರಿನಲ್ಲಿ ಓಟು ಪಡೆಯಲು ಯತ್ನಿಸುತ್ತದೆ. ಎಲ್‌ಟಿಟಿಇಯನ್ನು ಪೋಷಿಸಿದ್ದೇ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ. ಕೊನೆಗೆ ಆ ಸಂಘಟನೆ ಅವರನ್ನೇ (ರಾಜೀವ್) ಬಲಿ ತೆಗೆದುಕೊಂಡಿತು ಎಂದರು.
ಸಂಬಂಧಿತ ಮಾಹಿತಿ ಹುಡುಕಿ