ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಗಾಂಧಿ ರಾಜೀವ್ ಗಾಂಧಿಯಂತೆ ಕಾಣುತ್ತಿದ್ದಾರಂತೆ! (Rahul Gandhi | Rajiv Gandhi | Congress | P Chidambaram)
Bookmark and Share Feedback Print
 
ಹೋದಲ್ಲೆಲ್ಲ ವಿವಾದಕ್ಕೆ ಸಿಲುಕುತ್ತಿರುವ, ಹಿಂದೂಗಳ ವಿರುದ್ಧ ದಿನಕ್ಕೊಂದರಂತೆ ಹೇಳಿಕೆ ನೀಡುತ್ತಿರುವ ಆರೋಪವನ್ನು ಎದುರಿಸುತ್ತಿರುವ ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ಟೊಂಕ ಕಟ್ಟಿ ನಿಂತಿರುವುದು ಕಾಂಗ್ರೆಸ್ ಅಧಿವೇಶನದಲ್ಲಿ ರುಜುವಾತಾಗಿದೆ. ಕಾಂಗ್ರೆಸ್‌ನ ಮರಿ-ಹಿರಿ ನಾಯಕರೆಲ್ಲ ನೆಹರೂ ಕುಟುಂಬದ ಕುಡಿಯನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.
PR

ಗೃಹಸಚಿವ ಪಿ. ಚಿದಂಬರಂ ಅವರಂತೂ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಗೇ ಹೋಲಿಸಿ ಬಿಟ್ಟಿದ್ದಾರೆ. ರಾಹುಲ್ ಗಾಂಧಿಯ ಭಾಷಣವನ್ನು ಪ್ರಶಂಸಿಸಿರುವ ಚಿದು, ಅವರ ಮಾತಿನಲ್ಲಿ ಪ್ರಬುದ್ಧತೆ ಮತ್ತು ಚಿಂತನಾರ್ಹ ವಿಚಾರಗಳಿವೆ; ನೀವು ಕಣ್ಮುಚ್ಚಿ ರಾಹುಲ್ ಗಾಂಧಿ ಭಾಷಣವನ್ನು ಆಲಿಸಿದರೆ, 25 ವರ್ಷಗಳ ಹಿಂದೆ ರಾಜೀವ್ ಗಾಂಧಿ ಮಾತನಾಡುತ್ತಿದ್ದ ಹಾಗಿದೆ ಎಂಬ ಭಾವನೆ ಬರದೇ ಇರದು ಎಂದಿದ್ದಾರೆ.

ಜನತೆ ಮತ್ತು ಸರಕಾರದ ನಡುವೆ ಕೊಂಡಿ ಕಳಚಿದೆ. ಈ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಬೇಕು ಎಂಬ ತನ್ನ ತಂದೆ ರಾಜೀವ್ ಗಾಂಧಿಯ ದೃಷ್ಟಿಕೋನವನ್ನು ರಾಹುಲ್ ಗಾಂಧಿ ಕೂಡ ಹೊಂದಿದ್ದಾರೆ ಎಂದು ಚಿದು ಅಪಾದಮಸ್ತಕ ಬಣ್ಣಿಸಿದರು.

ರಾಹುಲ್ ಗಾಂಧಿಯನ್ನು ಕೇವಲ ಚಿದು ಮಾತ್ರ ಶ್ಲಾಘಿಸಿರುವುದಲ್ಲ. ಕೇಂದ್ರ ಸಚಿವರು ಹಾಗೂ ಯುವ ನಾಯಕರು ಎಂದು ಕರೆಸಿಕೊಳ್ಳುತ್ತಿರುವ ಸಚಿನ್ ಪೈಲಟ್ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ, ಸಂಸದ ದೀಪೇಂದ್ರ ಸಿಂಗ್ ಹೂಡಾ ಮುಂತಾದವರು, ತಾವು ರಾಹುಲ್ ನಾಯಕತ್ವದ ಅಡಿಯಲ್ಲಿ ಕೆಲಸ ಮಾಡಲು ಬಯಸುತ್ತಿದ್ದೇವೆ ಎಂದರು.

ರಾಹುಲ್ ಗಾಂಧಿ ನಾಯಕತ್ವದ ಅಡಿಯಲ್ಲಿ ದೇಶದ ಯುವಕ-ಯುವತಿಯರು ಕಾರ್ಯ ನಿರ್ವಹಿಸಲು ಸಿದ್ಧರಿದ್ದಾರೆ ಎಂದು ರಾಜೀವ್ ಗಾಂಧಿ ಜತೆ ಕೆಲಸ ಮಾಡಿದ್ದ ರಾಜೇಶ್ ಪೈಲಟ್ ಪುತ್ರ ಸಚಿನ್ ಪೈಲಟ್ ಹೇಳಿದರು.

ಇದಕ್ಕೂ ಮೊದಲು 40ರ ಹರೆಯದ 'ಯುವ' ನಾಯಕ ರಾಹುಲ್, ವೇದಿಕೆಯಿಂದ ಕೆಳಗಿಳಿದು ಎದುರುಗಡೆ ಆಸೀನರಾಗಿದ್ದ ಸಿಂಧಿಯಾ ಮತ್ತು ಪೈಲಟ್ ಜತೆ ಸಂಭಾಷಣೆ ನಡೆಸಿದರು.

ಮತ್ತೊಬ್ಬ ವಿವಾದಿತ ನಾಯಕ ದಿಗ್ವಿಜಯ್ ಸಿಂಗ್ ಕೂಡ ರಾಹುಲ್ ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದಾರೆ.

ನಮ್ಮ ಸಮಾಜದಲ್ಲಿ ಒಬ್ಬ ವ್ಯಕ್ತಿ 60ರ ಹೊತ್ತಿಗೆ ಮುದುಕನಾಗಿ ಹೋಗಿರುತ್ತಾನೆ. ಹಾಗಾಗಿ ಯುವ ನಾಯಕರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ಅಗತ್ಯವಿದೆ. ಅವರೇ ರಾಜ್ಯಗಳ ನಾಯಕತ್ವವನ್ನು ವಹಿಸಿಕೊಳ್ಳಬೇಕು. ರಾಜ್ಯಗಳಲ್ಲಿ ತಮ್ಮದೇ ತಂಡಗಳನ್ನು ಅವರು ಮಾಡಬೇಕು. ರಾಷ್ಟ್ರಮಟ್ಟದಲ್ಲಿ ರಾಹುಲ್ ತಂಡವನ್ನು ಹೊಂದಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ