ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಲ್ಲುತೂರಾಟಗಾರನ ಪ್ರತಿ ವಾರದ ಸಂಬಳ 400 ರೂ.! (J&K | Hurriyat | Sopore | Lashkar-e-Taiba | India)
Bookmark and Share Feedback Print
 
ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟವೇ ಒಂದು ಉದ್ಯೋಗ ಎನ್ನುವುದು ಹಳೆಯ ಮಾತು. ಅಲ್ಲಿ ಪ್ರತಿದಿನ ಕಲ್ಲು ತೂರಾಟಗಳು ನಡೆಯುತ್ತಲೇ ಇರುತ್ತದೆ. ಇದು ಹೋರಾಟದ ಹೆಸರಿನಲ್ಲಿ ನಡೆಯುತ್ತಿರುವ ಪರೋಕ್ಷ ಭಯೋತ್ಪಾದನೆ. ಹೀಗೆ ಕಲ್ಲೆಸೆಯುವವರು ಅದನ್ನು ಉಚಿತವಾಗಿ ಮಾಡುತ್ತಿಲ್ಲ, ವಾರಕ್ಕೆ 400 ರೂಪಾಯಿ ಪಗಾರ ಪಡೆದುಕೊಳ್ಳುತ್ತಾರೆ!

ಈ ಹೋರಾಟಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಂದು ಅಂದುಕೊಂಡಿದ್ದರೆ, ಊಹೆ ತಪ್ಪು. ಇಲ್ಲಿ ಎಲ್ಲವೂ ಕೊಡು-ಕೊಳ್ಳುವಿಕೆಯ ವ್ಯವಹಾರ. ಸ್ಥಳೀಯರು ಕಲ್ಲು ತೂರಾಟ ಮಾಡುತ್ತಾರೆ, ಹಿಂಸಾಚಾರ ಸೃಷ್ಟಿಸುತ್ತಾರೆ. ಪ್ರತಿಫಲವಾಗಿ ಪ್ರತಿ ಶುಕ್ರವಾರ ಒಬ್ಬೊಬ್ಬ ನಾನೂರು ರೂಪಾಯಿ 'ಸಂಬಳ' ಪಡೆಯುತ್ತಾನೆ.

ಇದು ಹುಸಿ ಹೋರಾಟದಲ್ಲಿ ಕಲ್ಲು ತೂರಾಟ ಮಾಡಿ ಬಂಧಿಯಾದ ಆರೋಪಿಗಳಿಂದ ಹೊರಬಂದ ಸತ್ಯ. ಹಾಗೆಂದು ನಿರುದ್ಯೋಗ ಸಮಸ್ಯೆ ಅವರನ್ನು ಈ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿದೆ ಅಂತ ನೀವು ಭಾವಿಸಿದರೆ ಅದಕ್ಕಿಂತ ದೊಡ್ಡ ದಡ್ಡತನ ಮತ್ತೊಂದಿಲ್ಲ.

ಬಂಧಿತರು ಭ್ರಷ್ಟರು ಯಾವ-ಯಾವ ಸಂಘಟನೆಗಳೊಂದಿಗೆ ಶಾಮೀಲಾಗಿದ್ದಾರೆ ಎಂಬ ಮಾಹಿತಿಯನ್ನು ಸೊಪೋರೆ ಪ್ರಾಂತ್ಯದ ಪೊಲೀಸರು ಪತ್ತೆಹಚ್ಚಿದ್ದಾರೆ. ಇನ್ನಷ್ಟು ಮಾಹಿತಿ ಇನ್ನಿತರ ತೀವ್ರವಾದಿಗಳಿಂದ ಹೊರಬರಬೇಕಿದೆ ಎಂದು ಉತ್ತರ ಕಾಶ್ಮೀರದ ಡಿಐಜಿ ಮುನೀರ್ ಅಹಮದ್ ಖಾನ್ ತಿಳಿಸಿದ್ದಾರೆ.


ಹುರಿಯತ್ ಕಾನ್ಫರೆನ್ಸ್ ಸದಸ್ಯರು ಮತ್ತು ತೀವ್ರವಾದಿ ಸಂಘಟನೆಗಳ ಕಾರ್ಯಕರ್ತರು ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಈ ಹಿಂದೆಯೇ ಹೇಳಲಾಗಿತ್ತು. ಆದರೆ ಸರಕಾರಿ ಸವಲತ್ತುಗಳನ್ನು ಪಡೆಯುತ್ತಿರುವ ಸರಕಾರಿ ನೌಕರರು ಕೂಡ ಇವರಿಗೆ ಬೆನ್ನೆಲುಬಾಗಿದ್ದಾರೆ ಎಂಬ ಅಂಶವೂ ಈಗ ಬಹಿರಂಗವಾಗಿದೆ.

ಕಾಶ್ಮೀರದಲ್ಲಿ ಹಿಂಸೆ ಸದಾ ಹಸಿ-ಹಸಿಯಾಗಿಯೇ ಇರಬೇಕು ಎಂಬುದು ಕೆಲವು ಪ್ರತ್ಯೇಕತಾವಾದಿಗಳ ಆಶಯ. ಅದಕ್ಕಾಗಿಯೇ ಹುರಿಯತ್ ತೀವ್ರವಾದಿ ಬಣದ ನಾಯಕ ಸೈಯದ್ ಅಲಿ ಶಾ ಗಿಲಾನಿ, ತನ್ನ ಹಿಂಬಾಲಕರನ್ನು ಬಿಟ್ಟು ಹಣ ಸಂಗ್ರಹಿಸುತ್ತಾರೆ. ಇವರಿಗೆ ಹೆಚ್ಚಿನ ಮೊತ್ತ ಸಂಗ್ರಹವಾಗುವುದು ಹಣ್ಣಿನ ಅಂಗಡಿ, ಮರದ ಮಿಲ್ಲುಗಳಿಂದ ಎಂದು ಡಿಐಜಿ ತಿಳಿಸಿದ್ದಾರೆ.

ಹುರಿಯತ್‌ನ ನುರಿತ ಗೂಂಡಾ ಪಡೆಗಳಲ್ಲಿ ಕೆಲವರನ್ನು ಗುರುತಿಸಲಾಗಿದೆ. ಅವರಲ್ಲಿ ಬೆಹರಂಪುರದ ಗುಲಾಂ ಮಹಮ್ಮದ್ ಟಾಂಟ್ರೆ, ದುರೂ ಪ್ರದೇಶದ ಗುಲಂ ಹಸನ್ ಮೀರ್ ಅಲಿಯಾಸ್ ಛೋಟಾ ಗಿಲಾನಿ, ಅಮರ್‌ಗಢದ ಮೊಹಮ್ಮದ್ ರುಸ್ತುಂ, ಚಂಕನ್ ಪ್ರದೇಶದ ಸೊಪೊರ್ ಮತ್ತು ಗಣಿ ಗುರೂ, ಬಟಪುರದ ಸರ್ಕಾರಿ ಶಿಕ್ಷಣ ಇಲಾಖೆಯ ನೌಕರ ಅಶ್ರಫ್ ಮಲಿಕ್, ಚಂಕಣದ ನಿವಾಸಿ ಬಶೀರ್ ಅಹಮದ್ ತಲಿ ಹಾಗೂ ಸೊಪೊರ್ ಆಹಾರ ಮತ್ತು ಸರಬರಾಜು ಇಲಾಖೆಯ ನೌಕರ ಇದರಲ್ಲಿ ಶಾಮೀಲಾಗಿದ್ದಾರೆ.

ಇವರುಗಳಲ್ಲಿ ಟಾಂಟ್ರೆ ಮತ್ತು ರುಸ್ತುಂ ಪೊಲೀಸ್ ವಿಚಾರಣೆಯಲ್ಲಿದ್ದು, ಮಲಿಕ್ ಬಂಧನದಲ್ಲಿದ್ದಾನೆ. ಇವರಿಂದ ಹೊರಬಂದ ಮಾಹಿತಿಯಂತೆ, ಬಾಡಿಗೆ ಹೋರಾಟಗಾರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಸಂಚು ಹೂಡಿದ್ದರು.

ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಕೆ47, ಗ್ರೆನೇಡ್, ಮೊಬೈಲ್ ಪೋನ್‌ಗಳು ಹಾಗೂ ಯೋಧರ ಸಮವಸ್ತ್ರಗಳು ಸೇರಿದಂತೆ ಆಧುನಿಕ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ