ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಜಯ್ ಗಾಂಧಿಯದ್ದು ಸರ್ವಾಧಿಕಾರಿ ವರ್ತನೆ: ಕಾಂಗ್ರೆಸ್ (Sanjay Gandhi | Congress | Indira Gandhi | Rajiv Gandhi)
Bookmark and Share Feedback Print
 
ದೇಶದ ಮೇಲೆ ಕೇಂದ್ರದ ಕಾಂಗ್ರೆಸ್ ಸರಕಾರವು ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಅಪರಿಮಿತ ಅಧಿಕಾರ ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರಲ್ಲಿ ಕೇಂದ್ರೀಕೃತಗೊಂಡಿತ್ತು ಮತ್ತು ಅವರ ಪ್ರೀತಿಯ ಪುತ್ರ ಸಂಜಯ್ ಗಾಂಧಿ ಸ್ವೇಚ್ಛಾಚಾರದ ಮತ್ತು ಸರ್ವಾಧಿಕಾರ ಪ್ರವೃತ್ತಿಯಿಂದ ಹಲವು ಕೃತ್ಯಗಳನ್ನು ಎಸಗಿದ್ದರು ಎಂಬುದನ್ನು ಸ್ವತಃ ಕಾಂಗ್ರೆಸ್ ಒಪ್ಪಿಕೊಂಡಿದೆ.

ಇದು ಸಂಜಯ್ ಗಾಂಧಿ ಸಾವನ್ನಪ್ಪಿದ (23-06-1980) ಬರೋಬ್ಬರಿ 30 ವರ್ಷಗಳ ನಂತರ ಒಪ್ಪಿಕೊಂಡಿರುವ ಕಟುಸತ್ಯ. ವಿತ್ತ ಸಚಿವ, ರಾಜಕೀಯ ಮುತ್ಸದ್ದಿ ಪ್ರಣಬ್ ಮುಖರ್ಜಿ ಸಂಪಾದಕತ್ವದ 'The Congress And The Making Of The Indian Nation' ಎಂಬ ಕಾಂಗ್ರೆಸ್ ಪ್ರಕಟಿಸಿರುವ ಪುಸ್ತಕದಲ್ಲಿ ಇಂತಹ ತಪ್ಪೊಪ್ಪಿಗೆಯಿದೆ.
PR

ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸಾಮಾನ್ಯ ರಾಜಕೀಯ ನೀತಿಗಳು, ಮೂಲಭೂತ ಹಕ್ಕುಗಳು, ಮಾಧ್ಯಮ ಸ್ವಾತಂತ್ರ್ಯಗಳನ್ನು ಕಿತ್ತುಕೊಳ್ಳಲಾಯಿತು. ನ್ಯಾಯಾಂಗದ ಅಧಿಕಾರವನ್ನು ಕಡಿಮೆ ಮಾಡಲಾಯಿತು. ಅಗತ್ಯಕ್ಕಿಂತ ಹೆಚ್ಚು ಅಧಿಕಾರ ಮತ್ತು ವ್ಯಾಪ್ತಿ ಪ್ರಧಾನ ಮಂತ್ರಿಯವರಲ್ಲಿ ಕೇಂದ್ರೀಕೃತವಾಯಿತು ಎಂದು ಬರೆಯಲಾಗಿದೆ.

ಸರಕಾರವು ಭಾರೀ ಹುರುಪಿನಿಂದ ಜಾರಿಗೆ ತರಲು ಉದ್ದೇಶಿಸಿದ ಕುಟುಂಬ ಕಲ್ಯಾಣ ಯೋಜನೆಯನ್ನು ಸಂಜಯ್ ಬೆಂಬಲಿಸಿದ ಕಾರಣದಿಂದಾಗಿ ಸಂಜಯ್ ಗಾಂಧಿ ಪ್ರಭಾವಿ ನಾಯಕನಾಗಿ ಹೊರ ಹೊಮ್ಮಿದ್ದರು. ಅವರು ಸ್ಲಮ್‌ಗಳನ್ನು ತೊಲಗಿಸುವುದು, ವರದಕ್ಷಿಣೆ ವಿರೋಧಿ ನೀತಿಗಳು, ಶಿಕ್ಷಣದ ಮಹತ್ವಕ್ಕೆ ಹೆಚ್ಚು ಒತ್ತು ನೀಡಿದ್ದರು. ಆದರೆ ಅವರ ನಿರಂಕುಶ ಮತ್ತು ಸರ್ವಾಧಿಕಾರಿ ಧೋರಣೆಯೇ ಹೆಚ್ಚು ಜನಪ್ರಿಯವಾಯಿತು ಎಂದು ಮುಖರ್ಜಿಯವರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸರಕಾರ ಮತ್ತು ಪಕ್ಷದಲ್ಲಿನ ತನ್ನ ಗುಂಪನ್ನು ಪದೇ ಪದೇ ಬದಲಾಯಿಸುತ್ತಿದ್ದರು. ಆದರೆ ಪಕ್ಷದೊಳಗಿನ ಅಧಿಕಾರ ದಲ್ಲಾಳಿಗಳ ಮೇಲಿನ ದಾಳಿಯ ಕಾರಣದಿಂದ ಪಕ್ಷವನ್ನು ಪರಿಷ್ಕರಿಸುವ ಅವರ ಭರವಸೆ ಈಡೇರಿಸಲು ಸಾಧ್ಯವಾಗಲಿಲ್ಲ ಎಂಬ ಸತ್ಯವನ್ನೂ ಕಾಂಗ್ರೆಸ್ ಒಪ್ಪಿಕೊಂಡಿದೆ.

ಕಾಂಗ್ರೆಸ್ ಪಕ್ಷವು 125 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಈ ಪುಸ್ತಕವನ್ನು ಹೊರ ತರಲಾಗಿದೆ. ಇಂದಿರಾ ಗಾಂಧಿಯವರು 1975ರ ಜೂನ್ ತಿಂಗಳಿಂದ 1977ರ ಜನವರಿಯವರೆಗೆ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಆತ್ಮಾವಲೋಕನ ಮಾಡಿಕೊಳ್ಳುವ ಹಲವು ವಿಚಾರಗಳನ್ನು ಮುಖರ್ಜಿಯವರು ಇಲ್ಲಿ ಪ್ರಸ್ತಾಪಿಸಿದ್ದಾರೆ.

ಪ್ರಮುಖ ಆಡಳಿತದಲ್ಲಿ ಸುಧಾರಣೆ ಕಂಡಿದ್ದರಿಂದ ತುರ್ತು ಪರಿಸ್ಥಿತಿಯನ್ನು ಆರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಬೆಂಬಲಿಸಿದ್ದರು ಎಂದು ಪುಸ್ತಕದಲ್ಲಿ ನೆನಪು ಮಾಡಿಕೊಳ್ಳಲಾಗಿದೆ. ಸಂತಾನ ಹರಣ ಚಿಕಿತ್ಸೆ ಮತ್ತು ಕೊಳಗೇರಿಗಳನ್ನು ನಿರ್ಮೂಲನೆಗಳಂತಹ ಕಡ್ಡಾಯವಾಗಿದ್ದ ನಿರ್ದಿಷ್ಟ ಯೋಜನೆಗಳಿಂದಾಗಿ ಕೆಟ್ಟ ಹೆಸರು ಬಂತು ಎಂದು ವಿವರಣೆ ನೀಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ