ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ; ಕೇಂದ್ರದ ಸಭೆಗೆ ಟಿಆರ್ಎಸ್, ಬಿಜೆಪಿ ಬಹಿಷ್ಕಾರ (TRS | P Chidambaram | K Chandrasekhar Rao | Justice Srikrishna committee | BJP)
Bookmark and Share Feedback Print
 
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿವಾದದ ಕುರಿತು ಶ್ರೀಕೃಷ್ಣ ಸಮಿತಿ ಸಲ್ಲಿಸಿರುವ ವರದಿಯ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಕರೆದಿರುವ ಜನವರಿ ಆರರ ಸರ್ವಪಕ್ಷಗಳ ಸಭೆಗೆ ಹಾಜರಾಗದೇ ಇರಲು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮತ್ತು
ರಾಜ್ಯ ಬಿಜೆಪಿ ಘಟಕ ನಿರ್ಧರಿಸಿದೆ.

ತೆಲಂಗಾಣ ರಚನೆ ಬಗ್ಗೆ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಸಮಾನ ಅಧಿಕೃತ ನಿಲುವುಗಳನ್ನು ಹೊಂದಿರುವ ಹೊತ್ತಿನಲ್ಲಿ ಪ್ರತಿ ರಾಜಕೀಯ ಪಕ್ಷದಿಂದ ಇಬ್ಬಿಬ್ಬರು ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಿರುವ ಉದ್ದೇಶದ ಕುರಿತು ನನಗೆ ನನ್ನದೇ ಆದ ಗಂಭೀರ ಅಭಿಪ್ರಾಯಗಳಿವೆ. ತೆಲಂಗಾಣ ಮಸೂದೆ ಮಂಡನೆಯಾದರೆ ಬೆಂಬಲಕ್ಕೆ ಎಲ್ಲಾ ಪಕ್ಷಗಳು ಸಿದ್ಧ ಎಂದು ಹೇಳಿರುವಾಗ ಈ ಸಭೆ ಅನವಶ್ಯಕ. ಇಂತಹ ವೈರುಧ್ಯಗಳು ವಿವಾದವನ್ನು ಇನ್ನಷ್ಟು ಜಟಿಲ ಮತ್ತು ಗೊಂದಲಕ್ಕೆ ತಳ್ಳುತ್ತದೆ ಎಂದು ಟಿಆರ್ಎಸ್ ವರಿಷ್ಠ ಚಂದ್ರಶೇಖರ್ ಗೃಹಸಚಿವ ಪಿ. ಚಿದಂಬರಂ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ನಡೆಯಲಿರುವ ಸರ್ವಪಕ್ಷಗಳ ಸಭೆಗೆ ಟಿಆರ್ಎಸ್ ಹಾಜರಾಗದೇ ಇರಲು ನಿರ್ಧರಿಸಿದೆ. ಪ್ರತಿ ಪಕ್ಷದಿಂದ ತಲಾ ಒಬ್ಬೊಬ್ಬ ಪ್ರತಿನಿಧಿಯನ್ನು ಮಾತ್ರ ಆಹ್ವಾನಿಸಲು ಕೇಂದ್ರ ಒಪ್ಪಿಕೊಂಡರೆ, ನಮ್ಮ ನಿಲುವಿನ ಬಗ್ಗೆ ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ರಾವ್ ಹೇಳಿದ್ದಾರೆ.

ದೆಹಲಿ ಸಭೆಯನ್ನು ಬಹಿಷ್ಕರಿಸುವಂತೆ ಸಿಪಿಐಯನ್ನು ಕೂಡ ರಾವ್ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಸಿಪಿಐ ರಾಜ್ಯ ಕಾರ್ಯದರ್ಶಿ ಕೆ. ನಾರಾಯಣ, ಪ್ರತ್ಯೇಕ ರಾಜ್ಯಕ್ಕೆ ವಿರುದ್ಧವಾಗಿ ವರದಿ ಬಂದರೆ ಅದನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.

ಟಿಡಿಪಿ ಮತ್ತು ಕಾಂಗ್ರೆಸ್ ಉಭಯ ಪ್ರಾಂತ್ಯಗಳಿಂದ ತಲಾ ಒಬ್ಬೊಬ್ಬ ಸದಸ್ಯರನ್ನು ಸಭೆಗೆ ಕಳುಹಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ