ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೂತನ ಪಕ್ಷ ರಚನೆಗೆ ಮುಂದಾದ ಜಗನ್; ಆಯೋಗಕ್ಕೆ ಮೊರೆ (Congress | Y S Jaganmohan Reddy | Election Commission | Y S Rajasekhara Reddy)
Bookmark and Share Feedback Print
 
PTI
PTI
ಕಾಂಗ್ರೆಸ್‌ನಿಂದ ಇತ್ತೀಚೆಗಷ್ಟೇ ಹೊರ ಬಿದ್ದಿದ್ದ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಪುತ್ರ ವೈಎಸ್ ಜಗನ್ ಮೋಹನ್ ರೆಡ್ಡಿ ಹೊಸ ಪಕ್ಷ ಕಟ್ಟುವತ್ತ ಗಟ್ಟಿ ಹೆಜ್ಜೆಯನ್ನಿಟ್ಟಿದ್ದಾರೆ. ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅವರು ನೂತನ ಪಕ್ಷಕ್ಕಾಗಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನೂತನ ಪಕ್ಷದ ನೋಂದಣಿಗೆ ಚುನಾವಣಾ ಆಯೋಗಕ್ಕೆ ಇಂದು ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಮೂರು ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ. ಈ ಅರ್ಜಿಯನ್ನು ಸಲ್ಲಿಸಿರುವುದು ಜಗನ್ ಆಪ್ತ ವೈ.ವಿ. ಸುಬ್ಬಾ ರೆಡ್ಡಿ.

ಪಕ್ಷದ ಹೆಸರೇನು ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ವಿವರ ನೀಡಲು ನಿರಾಕರಿಸಿದ ಸುಬ್ಬಾ ರೆಡ್ಡಿ, ಜಗನ್ ತಂದೆ ವೈಎಸ್ಆರ್ ಹೆಸರು ಅದರಲ್ಲಿರುತ್ತದೆ ಎಂದಷ್ಟೇ ತಿಳಿಸಿದರು. ಈ ಕುರಿತ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಾರ್ವಜನಿಕವಾಗಿ ನೂತನ ಪಕ್ಷದ ಹೆಸರನ್ನು ಪ್ರಕಟಿಸಲಾಗುವುದು ಎಂದರು.

ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಬಂಡಾಯ ಎದ್ದು ಪಕ್ಷ ತ್ಯಜಿಸಿದ್ದ ಜಗನ್, ಕಡಪ ಲೋಕಸಭಾ ಕ್ಷೇತ್ರದಿಂದ ಪುನಃ ಚುನಾವಣೆ ಎದುರಿಸುವ ಸಿದ್ಧತೆಯಲ್ಲಿದ್ದು, ಆಂಧ್ರದ ಕಾಂಗ್ರೆಸ್ ಸರಕಾರಕ್ಕೆ ಕುತ್ತು ತರುವ ಯಾವುದೇ ಉದ್ದೇಶ ನನ್ನಲ್ಲಿಲ್ಲ ಎಂದಿದ್ದರು.

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ಜಗನ್, ತನ್ನ ಕಡಪ ಲೋಕಸಭಾ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಅದೇ ಹೊತ್ತಿಗೆ ಅವರ ತಾಯಿ ವಿಜಯಲಕ್ಷ್ಮಿ ಪುಲಿವೆಂದುಲಾ ವಿಧಾನಸಭಾ ಸದಸ್ಯೆ ಸ್ಥಾನ ತ್ಯಜಿಸಿದ್ದರು. ಈ ಎರಡೂ ಕ್ಷೇತ್ರಗಳಿಗೆ ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿವೆ.

ಅದಕ್ಕೂ ಮೊದಲು ಪಕ್ಷದ ನೋಂದಣಿ ಕಾರ್ಯಕ್ರಮವನ್ನು ಪೂರ್ಣಗೊಳಿಸುವ ಉತ್ಸುಕತೆಯಲ್ಲಿರುವ ಜಗನ್, ಶೀಘ್ರದಲ್ಲೇ ಪಕ್ಷ ಸಂಘಟನೆಯನ್ನು ಆರಂಭಿಸುವ ನಿರೀಕ್ಷೆಗಳಿವೆ. ಚುನಾವಣೆ ಹೊತ್ತಿಗೆ ವೇದಿಕೆ ಸಿದ್ಧಪಡಿಸುವ ಗುರಿ ಅವರಲ್ಲಿದೆ. ಅದರಲ್ಲೂ ಅವರ ಪ್ರಮುಖ ಗುರಿಯಿರುವುದು 2014ರ ವಿಧಾನಸಭಾ ಚುನಾವಣೆ. ಹೀಗೆಂದು ಅವರೇ ಇತ್ತೀಚೆಗೆ ಹೇಳಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ