ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮ ನೆಲದಲ್ಲಿ ತ್ರಿವರ್ಣ ಧ್ವಜಾರೋಹಣ ಅಪರಾಧವೇ? (BJP | flag hoisting | Jammu and Kashmir | Lal Chowk)
Bookmark and Share Feedback Print
 
PTI

ಭಾರತದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ನಿಷೇಧ ಇರುವ ಸ್ಥಳ ಯಾವುದಾದರೂ ಇದೆಯೇ? ಯಾಕಿಲ್ಲ, ಜಮ್ಮು-ಕಾಶ್ಮೀರದ ಎಲ್ಲೆಡೆ ತಿರಂಗವನ್ನು ಹಾರಿಸುವಂತಿಲ್ಲ. ಅದು ಭಾರತದ ಅವಿಭಾಜ್ಯ ಅಂಗವೇ ಆಗಿದ್ದರೂ ಅಲ್ಲಿ ಏಕತೆಯನ್ನು ಸಾರುವ ಯತ್ನವನ್ನು ವಿರೋಧಿಸಲಾಗುತ್ತಿದೆ. ಇದೇ ವಿಚಾರದಲ್ಲಿ ಪ್ರಸಕ್ತ ಬಿಜೆಪಿ ಮತ್ತು ಜಮ್ಮು ಸರಕಾರದ ನಡುವೆ ವಾಗ್ಯುದ್ಧ ಆರಂಭವಾಗಿದೆ.

ಗಣರಾಜ್ಯೋತ್ಸವ ದಿನದಂದು ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ ಎಂದು ಬಿಜೆಪಿ ಘೋಷಿಸಿದೆ. ಆದರೆ ಇದಕ್ಕೆ ಸ್ವತಃ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿರೋಧ ವ್ಯಕ್ತಪಡಿಸಿದ್ದಾರೆ. ಅತ್ತ ಕೇಂದ್ರ ಸರಕಾರವೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸಾಧ್ಯತೆಗಳಿವೆ.

ಇದು ಶ್ರೀನಗರದ ಲಾಲ್‌ಚೌಕ್ ಕಥೆ. ಇಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಂತಿಲ್ಲ. ನಿರಂತರ 19 ವರ್ಷಗಳ ಕಾಲ ಇಲ್ಲಿ ಭಾರತದ ಧ್ವಜ ಹಾರಿತ್ತು. ಆದರೆ ಇದನ್ನು ಕಳೆದ ವರ್ಷ ಅಂದರೆ 2010ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಅಂತಹ ಕ್ರಮಕ್ಕೆ ಮುಂದಾಗಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮತ್ತು ಅಲ್ಲಿನ ರಾಜ್ಯ ಸರಕಾರ.

ಪಾಕಿಸ್ತಾನದ ಧ್ವಜಗಳು ಇಲ್ಲೇ ಸುತ್ತ ಮುತ್ತ ಎಗ್ಗಿಲ್ಲದೆ ಹಾರುತ್ತಿರುವುದನ್ನು ವಿರೋಧಿಸಲು, ಅದನ್ನು ತಡೆಯಲು ಮುಂದಾಗದ ಸರಕಾರಗಳು, ನಮ್ಮ ನೆಲದ ಹಕ್ಕನ್ನು ಪ್ರತಿಪಾದಿಸುತ್ತಿಲ್ಲ. ನಿರಂತರ ನಡೆದುಕೊಂಡು ಬಂದಿದ್ದ ಸಂಪ್ರದಾಯವನ್ನು ಮುರಿದು ಹಾಕಿವೆ. ಇದನ್ನು ಪುನರ್ ಪ್ರತಿಷ್ಠಾಪಿಸಲು ಈಗ ಬಿಜೆಪಿ ಮುಂದಾಗಿದೆ.

ಹಿಂದೆಲ್ಲ ಭಾರತೀಯ ಸೇನೆಯು ಮಾರ್ಚಿಂಗ್ ಮಾಡಿ ಧ್ವಜ ಹಾರಿಸುತ್ತಿದ್ದ ಜಾಗವದು. ಲಾಲ್‌ಚೌಕ್‌ನಲ್ಲಿ ಭಾರತದ ಧ್ವಜ ಹಾರಲು ಆರಂಭವಾದದ್ದು 1991ರಲ್ಲಿ. ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ 'ಏಕತಾ ಯಾತ್ರೆ' ಹೆಸರಿನಲ್ಲಿ ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ಯಾತ್ರೆ ಮಾಡಿ ಸಾಂಕೇತಿಕವಾಗಿ ಧ್ವಜ ಹಾರಿಸಿದ್ದರು. ಅಂದಿನಿಂದ ನಿರಂತರ 19 ವರ್ಷಗಳ ಕಾಲ ಅಲ್ಲಿ ಧ್ವಜ ಹಾರಿತ್ತು.

ಎರಡನೇ ಪುಟದಲ್ಲಿ ಮುಂದುವರಿದಿದೆ - ಇಲ್ಲಿ ಕ್ಲಿಕ್ ಮಾಡಿ.

 
ಸಂಬಂಧಿತ ಮಾಹಿತಿ ಹುಡುಕಿ