ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೈಕೋರ್ಟಿನಲ್ಲಿ ಬಟ್ಟೆ ಬಿಚ್ಚಿ ಪ್ರತಿಭಟನೆಗೆ ಯತ್ನಿಸಿದ ಮಹಿಳೆ (RAW | Research and Analysis Wing | Delhi HC | Nisha Bhatia)
Bookmark and Share Feedback Print
 
ಭಾರತದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಆಗೀಗ ಅಸಮಾಧಾನಗಳು ಹೊರ ಬರುತ್ತಿರುತ್ತವೆ. ಅದು ಭೋಪಾಲ್ ದುರಂತವಿರಬಹುದು ಅಥವಾ ಇನ್ನಿತರ ಸಾಮಾನ್ಯ ಪ್ರಕರಣಗಳಿರಬಹುದು. ಕೇಸೊಂದು ತಹಬದಿಗೆ ಬರಲು ಅರ್ಧ ಆಯುಷ್ಯವನ್ನೇ ಕಳೆಯಬೇಕಾಗಿ ಬಂದಾಗ ಇಂತಹ ಆಕ್ರೋಶಗಳು ಸಾಮಾನ್ಯ.

ಆದರೆ ಇಲ್ಲೊಬ್ಬರು ಮಹಿಳೆ, ಅದರಲ್ಲೂ ಗುಪ್ತಚರ ಇಲಾಖೆ 'ರಾ' (ರೀಸರ್ಚ್ ಎಂಡ್ ಅನಾಲಿಸಿಸ್ ವಿಂಗ್) ಮಾಜಿ ಅಧಿಕಾರಿ ಬಟ್ಟೆ ಬಿಚ್ಚಲು ಯತ್ನಿಸುವ ಮೂಲಕ ವಿಲಕ್ಷಣ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದುದರಿಂದ ನ್ಯಾಯಮೂರ್ತಿಗಳು ಮುಜುಗರದಿಂದ ಪಾರಾಗಿದ್ದಾರೆ.

'ರಾ' ಮಾಜಿ ಅಧಿಕಾರಿ ನಿಶಾ ಭಾಟಿಯಾ ಎಂಬಾಕೆಯೇ ಈ ರೀತಿಯಾಗಿ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿರುವುದು. ಗುರುವಾರ ಮಧ್ಯಾಹ್ನದ ಹೊತ್ತಿಗೆ ದೆಹಲಿ ಹೈಕೋರ್ಟಿನಲ್ಲಿ ಈ ಘಟನೆ ನಡೆದಿದೆ.

ಅಕ್ರಮ ಮಾನವ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂದಿದ್ದ ಆರೋಪದ ಕುರಿತಾದ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ನಿಶಾ, ತನ್ನ ಪ್ರಕರಣ ಆಗಾಗ ಮುಂದೂಡಲ್ಪಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಈ ರೀತಿ ನಡೆದುಕೊಂಡಿದ್ದಾರೆ. ಅಲ್ಲದೆ ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ಈ ರೀತಿಯಾಗಿ ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದರಿಂದ ತೀವ್ರ ಅಸಮಾಧಾನಗೊಂಡ ನ್ಯಾಯಮೂರ್ತಿಗಳು, ನಿಶಾ ಭಾಟಿಯಾ ಮಾನಸಿಕ ಅಸ್ವಸ್ಥರಂತೆ ಕಾಣುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮುಚ್ಚಿದ ಕೋಣೆಯೊಳಗೆ ನಡೆಸಲಾಗುತ್ತದೆ ಎಂದು ಪ್ರಕಟಿಸಿದರು.

ಪ್ರಕರಣದ ವಿವರ...
ತನ್ನ ವಿರುದ್ಧ ಹಿರಿಯ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮೂರು ವರ್ಷಗಳ ಹಿಂದೆ ನಿಶಾ ಭಾಟಿಯಾ ದೂರು ನೀಡಿದ್ದರು. ನಿಶಾ ದೂರಿನಂತೆ ಆರೋಪಿಗಳಲ್ಲಿ ಓಬ್ಬನಾದ ಅಶೋಕ್ ಚತುರ್ವೇದಿ ಎಂಬಾತ ದೋಷಿ ಎಂದು ಕೆಳಗಿನ ನ್ಯಾಯಾಲಯವೊಂದು ತೀರ್ಪು ನೀಡಿತ್ತು. ಆದರೆ ದೆಹಲಿ ಹೈಕೋರ್ಟ್ ಆತನನ್ನು ಖುಲಾಸೆಗೊಳಿಸಿತ್ತು. ಇದರ ವಿರುದ್ಧ ಭಾಟಿಯಾ ಮೇಲ್ಮನವಿ ಸಲ್ಲಿಸಿದ್ದರು.

ಪ್ರೀತಮ್ ಸಿಂಗ್ ಮತ್ತು ಅಜಯ್ ಪಾಂಡೆ ಎಂಬ ಇತರ ಇಬ್ಬರು ರಾ ಅಧಿಕಾರಿಗಳ ವಿರುದ್ಧವೂ ಭಾಟಿಯಾ ಆರೋಪ ಮಾಡಿದ್ದರು. ಆದರೆ, ಇದನ್ನು ತನಿಖೆ ನಡೆಸಿದ್ದ ಸಮಿತಿಯೊಂದು, ಸಾಕಷ್ಟು ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು.

ಇದರಿಂದ ಅಸಮಾಧಾನಗೊಂಡಿದ್ದ ನಿಶಾ, 2008ರ ಆಗಸ್ಟ್ 19ರಂದು ಪ್ರಧಾನ ಮಂತ್ರಿಯವರ ಕಚೇರಿಯ ಹೊರಗಡೆ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಅವರನ್ನು ಮಾನಸಿಕ ಸ್ಥಿತಿ ಉತ್ತಮವಾಗಿಲ್ಲ ಎಂಬ ಕಾರಣ ನೀಡಿ ಕೆಲಸದಿಂದ ವಜಾಗೊಳಿಸಲಾಗಿತ್ತು.

ಇದಕ್ಕೂ ಮೊದಲು ನಿಶಾ ವಿರುದ್ಧ ಮಾನವ ಕಳ್ಳ ಸಾಗಾಣಿಕೆ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಆಗಾಗ ಮುಂದೂಡುತ್ತಿರುವುದನ್ನು ವಿರೋಧಿಸಿ ನಿಶಾ ಜಾಕೆಟ್ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ