ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗವರ್ನರ್‌ಗೆ ಕಾಂಗ್ರೆಸ್ ಬೆಂಬಲ: ವರದಿ ಕೇಳಿದ ಕೇಂದ್ರ (HR Bharadwaj | Prosecution Of CM | Karnataka Politics | Yaddyurappa)
Bookmark and Share Feedback Print
 
ರಾಜ್ಯ ಸರಕಾರ ಉರುಳಿಸುವ ಪ್ರತಿಪಕ್ಷಗಳ ಎಲ್ಲ ತಂತ್ರಗಳೂ ವಿಫಲವಾದ ಬಳಿಕ ಇದೀಗ ನಡೆದಿರುವ ಹೊಸ ವಿದ್ಯಮಾನವು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ತಂತ್ರದ ಒಂದು ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ. ರಾಜ್ಯಪಾಲರ ಕ್ರಮವನ್ನು ಕೇಂದ್ರವು ಬೆಂಬಲಿಸಿದ್ದು, ಬಂದ್ ಹಿನ್ನೆಲೆಯಲ್ಲಿ ರಾಜ್ಯ ವಿದ್ಯಮಾನಗಳ ಕುರಿತು ವರದಿ ಕೊಡಿ ಎಂದು ಹಂಸರಾಜ್ ಭಾರದ್ವಾಜರನ್ನು ಕೇಳಿಕೊಂಡಿದೆ.

ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಕೇಸು ದಾಖಲಿಸಲು ಅನುಮತಿ ನೀಡಿದ ತಕ್ಷಣವೇ ರಾಜ್ಯದಲ್ಲಿ ಕೋಲಾಹಲವೇಳುತ್ತದೆ ಎಂಬುದು ನಿರೀಕ್ಷಿತವಾಗಿರುವುದರಿಂದ, ಈಗಾಗಲೇ ಕೆಲವೆಡೆ ಬಸ್ಸುಗಳಿಗೆ ಕಲ್ಲು ತೂರಾಟ, ಬೆಂಕಿ ಹಚ್ಚುವುದು ಮುಂತಾದ ಪ್ರತಿಭಟನಾ ಕ್ರಮಗಳು ಆರಂಭವಾಗಿವೆ. ರಾಜ್ಯ ಬಂದ್‌ನಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ರಾಜ್ಯದ ಪರಿಸ್ಥಿತಿ ಬಗ್ಗೆ ನಲುವತ್ತೆಂಟು ಗಂಟೆಗಳೊಳಗೆ ವರದಿ ಕೊಡಿ ಎಂದು ಕೇಂದ್ರ ಗೃಹ ಸಚಿವಾಲಯ ಕೇಳಿದೆ.

ಮುಖ್ಯಮಂತ್ರಿ ವಿರುದ್ಧ ಇಬ್ಬರು ಖಾಸಗಿ ವ್ಯಕ್ತಿಗಳು ಮಾಡಿದ ಆರೋಪಗಳ ಕುರಿತು ಯಾವುದೇ ವಿಚಾರಣೆ ನಡೆಸದೆ, ಅವರ ಮೇಲೆ ಕ್ರಮ ಕೈಗೊಳ್ಳಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮದಿಂದಾಗಿ ರಾಜ್ಯದಲ್ಲಿ ಎದ್ದಿರುವ ಪರಿಸ್ಥಿತಿಯ ಕುರಿತು ಮತ್ತು ರಾಜಕೀಯ ಉದ್ವಿಗ್ನತೆ ಕುರಿತು ವರದಿ ಕೊಡಿ ಎಂದು ಗೃಹ ಸಚಿವಾಲಯ ಕೇಳಿದೆ.

ರಾಜ್ಯಪಾಲರ ವರದಿಯನ್ನು ಕೇಂದ್ರ ಸಂಪುಟವು ಚರ್ಚಿಸಿ, ರಾಷ್ಟ್ರಪತಿ ಬಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಂಡರೆ ರಾಜ್ಯದಲ್ಲಿ ಅಶಾಂತಿ ಉಂಟಾಗುತ್ತದೆ ಎಂಬುದು ನಿರೀಕ್ಷಿತ. ಹೀಗಾಗಿ ರಾಷ್ಟ್ರಪತಿ ಆಳ್ವಿಕೆಯೂ ಒಂದು ಸಾಧ್ಯತೆ ಎಂಬ ಲೆಕ್ಕಾಚಾರವಿದೆ. ಇದಕ್ಕೆ ಪೂರಕವಾಗಿ ಕೆಲವು ಕಡೆ ಬಿಜೆಪಿ ಕಾರ್ಯಕರ್ತರು, ಬಸ್ಸಿಗೆ ಕಲ್ಲು, ಬೆಂಕಿ ಹಚ್ಚುವ ಕಾರ್ಯದಲ್ಲಿ ನಿರತರಾಗಿ, ಕೇಂದ್ರದ ಉದ್ದೇಶಕ್ಕೆ ಪೂರಕ ವಾತಾವರಣ ಸೃಷ್ಟಿಸುತ್ತಿದ್ದಾರೆ.

ಗವರ್ನರ್ ಕ್ರಮಕ್ಕೆ ಕೇಂದ್ರ ಬೆಂಬಲ
ಈ ಮಧ್ಯೆ, ದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ಕೇಂದ್ರವು ರಾಜ್ಯದ ಬಂದ್ ಹಿನ್ನೆಲೆಯಲ್ಲಿ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಲೇ ಇದೆ ಎಂದಿದ್ದಾರಲ್ಲದೆ, ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಸರಿಯಾದ ಕ್ರಮವನ್ನೇ ಕೈಗೊಂಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ