ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶ ವಿಭಜನೆಗೆ ವೀರ ಸಾವರ್ಕರ್ ಮೂಲ ಕಾರಣ: ಕಾಂಗ್ರೆಸ್ (Digvijay Singh | Congress | Veer Savarkar | Mohammad Ali Jinnah)
Bookmark and Share Feedback Print
 
ದೇಶ ವಿಭಜನೆಗೆ ಮೂಲ ಕಾರಣ ವೀರ ಸಾವರ್ಕರ್. ಮೊದಲು ದ್ವಿರಾಷ್ಟ್ರ ಸಿದ್ಧಾಂತವನ್ನು ಬಿತ್ತಿದ್ದೇ ಅವರು. ನಂತರ ಅದನ್ನು ಮೊಹಮ್ಮದ್ ಆಲಿ ಜಿನ್ನಾ ಸ್ವೀಕರಿಸಿದರು. ಅದೇ ಕಾರಣದಿಂದ ದೇಶ ವಿಭಜನೆಗೊಂಡಿತು ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ತೀವ್ರವಾದ ಮತ್ತು ಮುಖ್ಯವಾಹಿನಿಯಿಂದ ದೂರವಿಡುವ ಸಿದ್ಧಾಂತಗಳು ದೇಶವೊಂದನ್ನು ಅಖಂಡವಾಗಿ ಉಳಿಸಿಕೊಳ್ಳಲಾರವು ಎಂದರು.

ನಂತರ ಸಾವರ್ಕರ್ ಕುರಿತ ತನ್ನ ಆರೋಪವನ್ನು ದಿಗ್ವಿಜಯ್ ಸಮರ್ಥಿಸಿಕೊಂಡರು. 'ಎರಡು ರಾಷ್ಟ್ರ ಎಂಬ ಸಿದ್ಧಾಂತ ಮೂಲತಃ ಸಾವರ್ಕರ್ ಅವರದ್ದು. ನಂತರ ಇದನ್ನು ಪಾಕಿಸ್ತಾನದ ಸಂಸ್ಥಾಪಕ ಜಿನ್ನಾ ಸ್ವೀಕರಿಸಿದರು. ತೀವ್ರವಾದ ಸಿದ್ಧಾಂತಗಳು ವಿಭಜನೆಗೆ ಕಾರಣವಾಗುತ್ತವೆ. ಇದು ಸಮಾಜಕ್ಕೆ ಆರೋಗ್ಯಕರವಾದುದಲ್ಲ' ಎಂದು ತನ್ನ ಮಾತನ್ನು ಪುನರುಚ್ಛರಿಸಿದರು.

ಧರ್ಮ ಮತ್ತು ಧಾರ್ಮಿಕ ನಂಬಿಕೆಯಲ್ಲಿನ ವ್ಯತ್ಯಾಸಗಳನ್ನು ಕೂಡ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದ ದಿಗ್ವಿಜಯ್, ಯಾವುದೇ ಹಿಂದೂ ಅಥವಾ ಮುಸ್ಲಿಂ -- ತಮ್ಮ ಧರ್ಮವನ್ನು ನೈಜವಾಗಿ ನಂಬುತ್ತಿದ್ದರೆ, ಅವರು ತೀವ್ರವಾದಿ ದೃಷ್ಟಿಕೋನವನ್ನು ಒಪ್ಪಿಕೊಳ್ಳಲಾರರು ಎಂದರು.

ಗಣರಾಜ್ಯೋತ್ಸವದಂದು ಶ್ರೀನಗರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲು ಹೊರಟಿದ್ದ ಬಿಜೆಪಿ ವಿರುದ್ಧವೂ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ವಾಗ್ದಾಳಿ ನಡೆಸಿದರು. ವಿವಾದ ಸೃಷ್ಟಿಯಿಂದ ತನಗೆ ಲಾಭವಾಗುತ್ತದೆ ಎಂಬ ಹೊತ್ತಿನಲ್ಲಿ ಆ ಪಕ್ಷಕ್ಕೆ ಧ್ವಜವೂ ಆಗುತ್ತದೆ, ದೇವಸ್ಥಾನವೂ ಆಗುತ್ತದೆ ಎಂದು ಕುಟುಕಿದರು.
ಸಂಬಂಧಿತ ಮಾಹಿತಿ ಹುಡುಕಿ