ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೌಡರ ಕುಟುಂಬದ ಬಣ್ಣ ಬಯಲು ಮಾಡುತ್ತೇನೆ: ಯಡಿಯೂರಪ್ಪ (Karnataka | B S Yeddyurappa | JDS | HD Deve Gowda)
NRB
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಕುಟುಂಬದ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಗುಡುಗಿದ್ದು, ಮಾಜಿ ಪ್ರಧಾನಿಯ ಕುಟುಂಬವು 'ಅಲ್ಲಲ್ಲಿ ನುಂಗಿದ' ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದರು.

ದೆಹಲಿಯಲ್ಲಿ ಶುಕ್ರವಾರ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಅವರು, ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮೊದಲು ದೇವೇಗೌಡ ಮತ್ತು ಅವರ ಕುಟುಂಬದ ವಿರುದ್ಧ ನಾನು 'ಆರೋಪ ಪಟ್ಟಿ' ಪ್ರಕಟಿಸಲಿದ್ದೇನೆ. ಅಪ್ಪ-ಮಕ್ಕಳು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಾಕಷ್ಟು ಹಗರಣಗಳು, ಅದರಲ್ಲೂ ಭೂ ಹಗರಣಗಳು ನಡೆದಿವೆ. ಅದೆಲ್ಲ ಸಂಸತ್ತಿನಲ್ಲಿ ಚರ್ಚೆಯಾಗಲಿ ಎಂದರು.

ನನಗಿಂತ ಮೊದಲು ಮುಖ್ಯಮಂತ್ರಿಯಾಗಿದ್ದವರು ಅಕ್ರಮವಾಗಿ ಹಂಚಿದ ಜಿ ಕ್ಯಾಟಗರಿ ನಿವೇಶನಗಳನ್ನು ನನ್ನ ಸರಕಾರದ ಮೇಲೆ ಹೊರಿಸಲಾಗುತ್ತಿದೆ ಎಂದು ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಮತ್ತು ಅರುಣ್ ಜೇಟ್ಲಿಯವರನ್ನು ಭೇಟಿದ ಬಳಿಕ ಆರೋಪಿಸಿದ ಅವರು, ತನಗಿಂತ ಇತರ ಮುಖ್ಯಮಂತ್ರಿಗಳ ಪಾಲೇ ಜಾಸ್ತಿ ಎಂಬುದನ್ನು ಪ್ರತಿಪಾದಿಸಲು ಯತ್ನಿಸಿದರು.

ಜಿ ಕ್ಯಾಟಗರಿ ಅಡಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು 334 ಸೈಟುಗಳನ್ನು, ಧರಂ ಸಿಂಗ್ ಅವರು 76 ಸೈಟುಗಳನ್ನು ಹಾಗೂ ಎಚ್.ಡಿ. ಕುಮಾರಸ್ವಾಮಿ 286 ಸೈಟುಗಳನ್ನು ಹಂಚಿದ್ದರು. ನನ್ನ ಸರಕಾರ ಹಂಚಿಕೆ ಮಾಡಿರುವುದು 172 ಸೈಟುಗಳನ್ನು ಎಂದು ಅಂಕಿ-ಅಂಶಗಳನ್ನು ಮುಂದಿಟ್ಟ ಯಡಿಯೂರಪ್ಪ, ದೇವೇಗೌಡರು ತನ್ನ ಕುಟುಂಬಕ್ಕೆ 46 ನಿವೇಶನಗಳನ್ನು ಮೈಸೂರಿನಲ್ಲಿ ಹಂಚಿದ್ದರು. ಈ ಆರೋಪಕ್ಕೆ ಯಾಕೆ ಅವರು ಉತ್ತರಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಗೌಡ ಮತ್ತು ಅವರ ಕುಟುಂಬ 'ಹಿಟ್ ಎಂಡ್ ರನ್' ನೀತಿಯನ್ನು ಸರಕಾರದ ವಿರುದ್ಧ ಅನುಸರಿಸುತ್ತಿದೆ. ಹಾಗಾಗಿ ಅವರನ್ನು ಎದುರಿಸಲು, ಸಂಸತ್ತಿನಲ್ಲಿ ಚರ್ಚೆ ನಡೆಯುವಂತಾಗಲು ನಾನು 'ಆರೋಪ ಪಟ್ಟಿ'ಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.

ಅದೇ ಹೊತ್ತಿಗೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, 'ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಿ' ಎಂಬ ಹಂಸರಾಜ್ ಭಾರದ್ವಾಜ್ ವಿರುದ್ಧದ ತನ್ನ ಹೋರಾಟ ಈಗ ಮುಗಿದ ಅಧ್ಯಾಯ ಎಂದರು.
ಇವನ್ನೂ ಓದಿ