ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುವ ಪೀಳಿಗೆ ಮಾತು ಆಲಿಸಿ, ಕೆಲಸ ಮಾಡುತ್ತೇನೆ: ರಾಹುಲ್ (Politics | Rahul Gandhi | Mizoram | Congress)
ಯುವ ಜನತೆಯ ಮಾತುಗಳನ್ನು ಸಹನೆಯಿಂದ ಕೇಳುತ್ತೇನೆ. ನಂತರ ಅದನ್ನು ಕಾರ್ಯರೂಪಕ್ಕೆ ತರುತ್ತೇನೆ ಎಂದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಯುವ ಪೀಳಿಗೆಯು ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗುವಂತೆ ಮತ್ತೊಮ್ಮೆ ಕರೆ ನೀಡಿದ್ದಾರೆ.

ಸೋಮವಾರ ಮಿಜೋರಾಂನ ತಂಹ್ರಿಲ್ ಎಂಬಲ್ಲಿನ ಮಿಜೋರಾಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುತ್ತಿದ್ದ ಅವರು, 'ಒಂದು ರಾಜಕೀಯ ಕುಟುಂಬದಲ್ಲಿ ಹುಟ್ಟಿ-ಬೆಳೆದಿರುವ ನನ್ನ ಪ್ರಕಾರ ರಾಜಕಾರಣಿಗಳು ರಾಜಕಾರಣದಲ್ಲಿರುವುದು ಜನತೆಯ ಆಶೋತ್ತರಗಳನ್ನು ಈಡೇರಿಸಲು, ಜನರನ್ನು ಮೇಲೆತ್ತಲು' ಎಂದರು.

ನಾನು ಆಲಿಸುವುದರಲ್ಲಿ, ಯುವ ಪೀಳಿಗೆಯ ಮಾತುಗಳನ್ನು ಆಲಿಸುವಲ್ಲಿ ಮತ್ತು ನಂತರ ಅದನ್ನು ಕಾರ್ಯಗತಗೊಳಿಸುವಲ್ಲಿ ಆಸಕ್ತಿ ಹೊಂದಿದ್ದೇನೆ ಎಂದು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಯುವಕ-ಯುವತಿಯರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು.

ದೇಶದ ಒಟ್ಟು ಜನಸಂಖ್ಯೆಯಲ್ಲಿನ ಶೇ.40ಕ್ಕೂ ಹೆಚ್ಚು ಪಾಲು ಯುವ ಜನತೆಯದ್ದು. ಅವರು ರಾಜಕೀಯಕ್ಕೆ ಬರಬೇಕು. ಆಗ ಸುಧಾರಣೆ ಸಾಧ್ಯವಿದೆ. ಇದು ನಾನು ನಂಬಿಕೊಂಡಿರುವ ಸಿದ್ಧಾಂತ ಎಂದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಕಾಂಗ್ರೆಸ್ ಯುವ ನಾಯಕ ಇದೇ ಸಂದರ್ಭದಲ್ಲಿ ವಿಶ್ವ ವಿದ್ಯಾಲಯ ಆವರಣದಲ್ಲಿನ ಬಾಲಕಿಯರ ಹಾಸ್ಟೆಲ್ ಒಂದನ್ನೂ ಉದ್ಘಾಟಿಸಿದರು.

ಈ ನಡುವೆ ಶಿಲ್ಲಾಂಗ್‌ನಲ್ಲಿ ರಾಹುಲ್ ಗಾಂಧಿಯ ಕಾರ್ಯಕ್ರಮವನ್ನು ಮಾಧ್ಯಮಗಳು ಬಹಿಷ್ಕರಿಸಿದ ಘಟನೆ ನಡೆದಿರುವುದು ವರದಿಯಾಗಿದೆ.

ಸುರಕ್ಷತೆಯ ಹೆಸರಿನಲ್ಲಿ ಗಂಟೆಗಳಷ್ಟು ಕಾಲ ಒಂದು ರೂಮಿನಲ್ಲಿ ಭಾಗಶಃ ಕೂಡಿ ಹಾಕಿದ ಘಟನೆಯನ್ನು ಖಂಡಿಸಿದ ಪತ್ರಕರ್ತರು, ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿದರು.
ಇವನ್ನೂ ಓದಿ