ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಸಿಂಗ್ ಹೇಳಿದ್ದು ಜೋಕು: ನರೇಂದ್ರ ಮೋದಿ ಲೇವಡಿ (Manmohan Singh | Gujarat | Amit Shah | Narendra Modi)
ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ವಿರುದ್ಧ ಕೇಂದ್ರ ಸರಕಾರ ಕ್ರಮ ಕೈಗೊಂಡಿದ್ದಕ್ಕೆ ಪ್ರತಿಯಾಗಿ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಹಗೆತನ ಸಾಧಿಸುತ್ತಿದೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿರುವುದು 2011ರ ವರ್ಷದ ಬಹುದೊಡ್ಡ ಜೋಕು ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

'ಮನಮೋಹನ್ ಸಿಂಗ್ ನೀಡಿರುವ ಹೇಳಿಕೆ 2011ರ ಬಹುದೊಡ್ಡ ನಗು ಬರಿಸುವ ಮಾತು' ಎಂದು ಪ್ರಧಾನಿಯನ್ನು ಗೇಲಿ ಮಾಡಿರುವ ಮೋದಿ, ಅವರು ಗುಜರಾತ್ ಸರಕಾರದ ಮೇಲೆ ಆರೋಪಗಳನ್ನು ಮಾಡುವ ಮೂಲಕ ತನ್ನ ಸರಕಾರದ ಅವ್ಯವಹಾರಗಳನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಹು ಸಮಯದ ನಂತರ ನೇರವಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ವಿರುದ್ಧವೇ ಮೋದಿ ವಾಗ್ದಾಳಿ ನಡೆಸಿದರು.

ಪ್ರಧಾನಿಯವರೇ, ನೀವು ಸರಕಾರ ಜಿಎಸ್‌ಟಿ ಕುರಿತು ಏನು ಮಾಡಿದೆ ಎನ್ನುವುದರ ವಿವರಗಳನ್ನು ಜನತೆಯ ಮುಂದಿಡಿ. ಆಗ ನಿಮ್ಮ ಅಜೆಂಡಾದಲ್ಲಿ ಯಾವ ಮತ್ತು ಎಷ್ಟು ಅಕ್ರಮಗಳು ಮತ್ತು ಪ್ರಮಾದಗಳು ನಡೆದಿವೆ ಎನ್ನುವುದು ಜನರಿಗೆ ತಿಳಿಯುತ್ತದೆ. ನಿಮಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನಿಮ್ಮ ಅಸಹಾಯಕತೆಯನ್ನು ನೀವು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದೀರಿ. ಅದಕ್ಕಾಗಿ ನೀವು ಗುಜರಾತ್‌ನ ಯಾವುದೇ ಸಚಿವರು ಅಥವಾ ಸರಕಾರವನ್ನು ದೂಷಿಸುವ ಅಗತ್ಯವಿಲ್ಲ ಎಂದರು.

ಗುಜರಾತ್ ವಿರೋಧಿ ನೀತಿಯನ್ನು ಕೇಂದ್ರವು ಅನುಸರಿಸುತ್ತಿದೆ ಎಂದು ಆರೋಪಿಸಿದ ಮೋದಿ, ಕಳೆದ ಎರಡು ವರ್ಷಗಳಿಂದ ನಾವು ಅಭಿವೃದ್ಧಿಯ ಕುರಿತು ಏನೆಲ್ಲ ಪ್ರಸ್ತಾವನೆಗಳನ್ನು ಕಳುಹಿಸುತ್ತಿದ್ದೇವೋ, ಅದನ್ನು ಕೇಂದ್ರವು ಸ್ವೀಕರಿಸುತ್ತಿಲ್ಲ. ಸುಧಾರಣಾ ನೀತಿಗಳನ್ನು ಜಾರಿಗೆ ತರಲು ವಿಫಲವಾಗಿರುವುದಕ್ಕೆ ಯುಪಿಎ ಮೈತ್ರಿ ಪಕ್ಷಗಳೇ ಟೀಕಿಸುತ್ತಿವೆ. ಕಾಂಗ್ರೆಸ್ ನೀತಿಗಳು ಯುಪಿಎ ಮಿತ್ರಪಕ್ಷಗಳಿಗೆ ಹಿಡಿಸುತ್ತಿಲ್ಲ ಎಂದು ನುಡಿದರು.

ವಿದ್ಯುನ್ಮಾನ ಮಾಧ್ಯಮಗಳ ಸಂಪಾದಕರುಗಳ ಜತೆಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಿಯವರು ಬಿಜೆಪಿಯನ್ನು ಟೀಕಿಸಿದ್ದರು. ಕೇಂದ್ರವು ಗುಜರಾತ್ ಮಾಜಿ ಸಚಿವರೊಬ್ಬರ ವಿರುದ್ಧ ತೆಗೆದುಕೊಂಡಿರುವುದಕ್ಕೆ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ. ಮಾತುಗಳನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಡ ಹೇರಲಾಗುತ್ತಿದೆ. ಕೇಂದ್ರ ಸರಕಾರದ ವಿರುದ್ಧ ಬಿಜೆಪಿ ಹಗೆತನದ ನಿಲುವನ್ನು ಹೊಂದಿದೆ ಎಂದು ಆರೋಪಿಸಿದ್ದರು.

ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಗುಜರಾತ್ ಮಾಜಿ ಸಚಿವ ಅಮಿತ್ ಶಾ ಅವರನ್ನು ಸಿಬಿಐ ಬಂಧಿಸಿತ್ತು. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. ಇದೇ ವಿಚಾರವನ್ನು ಪ್ರಧಾನಿ ಪರೋಕ್ಷವಾಗಿ ತನ್ನ ಮಾತಿನಲ್ಲಿ ಪ್ರಸ್ತಾಪಿಸಿದ್ದರು.
ಇವನ್ನೂ ಓದಿ