ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬ್ರಿ ಧ್ವಂಸ ಜೀವನದ ಯಾತನಾಮಯ ದಿನ: ಆಡ್ವಾಣಿ (BJP | LK Advani | Babri mosque demolition | India)
1992ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಬಿಜೆಪಿಯ ವಿಶ್ವಾಸಾರ್ಹತೆಗೆ ಬಹುದೊಡ್ಡ ಹೊಡೆತ ನೀಡಿದೆ ಎಂದಿರುವ ಕೇಸರಿ ಪಕ್ಷದ ವರಿಷ್ಠ ಎಲ್.ಕೆ. ಆಡ್ವಾಣಿ, ಅದು ನನ್ನ ಜೀವನದ ಅತಿ ಯಾತನಾಮಯ ದಿನ ಎಂದು ಹೇಳಿದ್ದಾರೆ.

ಮಸೀದಿ ಧ್ವಂಸಗೊಂಡ ಆ ದಿನ ನನ್ನ ಜೀವನದಲ್ಲಿನ ಅತಿ ದುಖಃದಾಯಕ ದಿನ ಎಂದು ಅಯೋಧ್ಯೆ ಚಳವಳಿಯ ಆರಂಭಿಕ ಬೆಳವಣಿಗೆಯನ್ನು ವಿವರಿಸುತ್ತಾ ಆಡ್ವಾಣಿಯವರು ಆ ಘಟನೆಯ ಬಳಿಕ ನಿಯತಕಾಲಿಕಕ್ಕೆ ಬರೆದಿದ್ದ ಲೇಖನವೊಂದನ್ನು ನೆನಪಿಸಿಕೊಂಡಿದ್ದಾರೆ.

ಈ ಹೇಳಿಕೆಗೆ ತನ್ನ ಸಹಪಾಠಿಗಳಿಂದ ಬಂದ ಟೀಕೆಗಳನ್ನೂ ಆಡ್ವಾಣಿ ಉಲ್ಲೇಖಿಸಿದ್ದಾರೆ. 'ಆ ಬೆಳವಣಿಗೆ ಬಗ್ಗೆ ನೀವು ಈ ರೀತಿಯ ವಿಷಾದಕರವಾಗಿ ವರ್ತಿಸುತ್ತಿರುವುದು ಯಾಕೆ?' ಎಂದು ಕೆಲವರು ಪ್ರಶ್ನಿಸಿದ್ದಾರೆ ಎಂದು ತನ್ನ ಬ್ಲಾಗಿನಲ್ಲಿ ಬಿಜೆಪಿ ವರಿಷ್ಠ ಹೇಳಿಕೊಂಡಿದ್ದಾರೆ.

ಮಸೀದಿ ಧ್ವಂಸಗೊಂಡ ದಿನ ನಾನು ಅತೀವ ನೋವುಂಡ ದಿನ ಎಂಬ ಹೇಳಿಕೆ ಕುರಿತ ಟೀಕೆಗಳಿಗೆ ನೀಡಿರುವ ಉತ್ತರವನ್ನೂ ಆಡ್ವಾಣಿ ಬ್ಲಾಗಿನಲ್ಲಿ ಬರೆದಿದ್ದಾರೆ. 'ನಾನು ತಪ್ಪಿತಸ್ಥ ಭಾವನೆ ಹೊಂದಿಲ್ಲ. ವಾಸ್ತವದಲ್ಲಿ, ಅಯೋಧ್ಯಾ ಚಳವಳಿಯಲ್ಲಿ ನನ್ನ ಪಾಲುದಾರಿಕೆಯ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ಡಿಸೆಂಬರ್ 6ರಂದು ನಡೆದ ಘಟನೆಯಿಂದ ನಮ್ಮ ಪಕ್ಷದ ವಿಶ್ವಾಸಾರ್ಹತೆಗೆ ಭಾರೀ ಧಕ್ಕೆಯಾಗಿರುವುದು ನನಗೆ ತೀವ್ರ ನೋವು ತಂದಿದೆ, ಬೇಸರವಾಗಿದೆ' ಎಂದು ಹೇಳಿದ್ದೆ ಎಂದು ಉಲ್ಲೇಖಿಸಿದ್ದಾರೆ.

ಅಯೋಧ್ಯಾ ಚಳವಳಿಯಲ್ಲಿ ಒಳಗೊಂಡಿದ್ದ ಸಂಘಟನೆಗಳು, ತಮ್ಮ ಹಿಂಬಾಲಕರ ಅಸಹನೆಯನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿದ್ದವು ಎಂದೂ ಆಡ್ವಾಣಿ ತನ್ನ ದಶಕಗಳ ಹಿಂದಿನ ಲೇಖನದಲ್ಲಿ ಬರೆದಿದ್ದರು.

ಕಾನೂನುಗಳನ್ನು ಉಲ್ಲಂಘಿಸದೆ ಅಥವಾ ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸದೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕು ಎಂಬ ಜನತೆಯ ಆಶಯವನ್ನು ಈಡೇರಿಸಲು ಉತ್ತರ ಪ್ರದೇಶ ಸರಕಾರವು ನಿಖರ ಯೋಜನೆಗಳನ್ನು ರೂಪಿಸಿ ಮುನ್ನಡೆಯುತ್ತಿದ್ದ ಹೊತ್ತಿನಲ್ಲಿ ಮಸೀದಿ ಧ್ವಂಸಗೊಂಡದ್ದು ನಮ್ಮೆಲ್ಲ ಪ್ರಯತ್ನಗಳನ್ನು ವಿಫಲಗೊಳಿಸಿತು. ಇದು ನನಗೆ ತೀವ್ರ ನೋವನ್ನು ತಂದಿತು.

ಅಂದು ನಡೆದ ಅನಿರೀಕ್ಷಿತ ಘಟನೆಯನ್ನು ಅವಲೋಕನ ನಡೆಸಿದಾಗ, ಚಳವಳಿಯಲ್ಲಿ ಪಾಲ್ಗೊಂಡ ಜನತೆಯ ಅಸಹನೆಯನ್ನು ಊಹಿಸಲು ಸಂಘಟನೆಗಳು ವಿಫಲವಾಗಿದ್ದವು ಎಂದು ಹೇಳಬಹುದು. ಆದರೆ ಆ ದಿನ ನಡೆದ ಘಟನೆಗಳಿಗೆ ಖಂಡಿತಾ ಅವರು ಕಾರಣರಲ್ಲ ಎಂದು ಹಳೆಯ ಲೇಖನದ ಅಂಶಗಳನ್ನು ಆಡ್ವಾಣಿ ಮೆಲುಕು ಹಾಕಿದ್ದಾರೆ.
ಇವನ್ನೂ ಓದಿ