ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿಗೆ ಸೇನಾ ಕಮಾಂಡರ್ ಅರ್ಹತೆಯಿದೆ: ಮೇಜರ್ ಜನರಲ್ (Gujarat | Narendra Modi | Pakistan | Major General I S Singha)
ಒಬ್ಬ ಯಶಸ್ವಿ ಸೇನಾ ಕಮಾಂಡರ್‌ಗೆ ಇರಬೇಕಾದ ಎಲ್ಲಾ ಯೋಗ್ಯತೆಗಳು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಲ್ಲಿದೆ ಎಂದು ಗೋಲ್ಡನ್ ಕತಾರ್ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ಐ.ಎಸ್. ಸಿಂಘ ಸೋಮವಾರ ಶ್ಲಾಘಿಸಿದರು.

ಅಹಮದಾಬಾದ್‌ನಲ್ಲಿ ಸೇನೆಯ ಗೋಲ್ಡನ್ ಕತಾರ್ ವಿಭಾಗವು ಆಯೋಜಿಸಿರುವ 'Know your Army' ಎಂಬ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಸಿಂಘ, ಮಾತಿನುದ್ದಕ್ಕೂ ಗುಜರಾತ್ ಪ್ರಗತಿ ಮತ್ತು ಮೋದಿಯವರನ್ನು ಹೊಗಳಿದರು.

ಒಬ್ಬ ಯಶಸ್ವಿ ಮಿಲಿಟರಿ ಕಮಾಂಡರ್‌ಗೆ ಇರಬೇಕಾದ ಎಲ್ಲಾ ಅರ್ಹತೆಗಳು ಮುಖ್ಯಮಂತ್ರಿ ನರೇಂದ್ರ ಮೋದಿ ಅವರಲ್ಲಿವೆ. ಅವರ ಯೋಜನೆಗಳು ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಯ ಗುರಿಯನ್ನು ಹೊಂದಿವೆ. ಸೇನೆಯಲ್ಲಿ ಇದ್ದಂತೆ ಅವರು (ಮೋದಿ) ಕೂಡ ಕಾಮಗಾರಿಗಳ ಮುಕ್ತಾಯಕ್ಕಾಗಿ ಗಡುವು ಅನುಸರಿಸುತ್ತಾರೆ. ನಿರ್ದಿಷ್ಟ ಸಮಯದಲ್ಲಿ ಕಾರ್ಯವೊಂದನ್ನು ಸಾಧಿಸುವ ಗುರಿಯನ್ನು ಖಚಿತಪಡಿಸುತ್ತಾರೆ ಎಂದರು.

ಗುಜರಾತ್ ರಾಜ್ಯದ ಪ್ರಗತಿ ಮತ್ತು ಸರಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೇಜರ್ ಜನರಲ್ ಸಿಂಘ, ಮಾಜಿ ಸೈನಿಕರ ವಸತಿ ಯೋಜನೆಗಾಗಿ ಜಮೀನು ಕೊಡುವಂತೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಕೇಳಿಕೊಂಡರು.

ಪಾಕ್ 'ವೈರಿ'- ನಾವು ಎಚ್ಚರವಾಗಿರಬೇಕು: ಮೋದಿ
ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಪಾಕಿಸ್ತಾನದಂತಹ ಹಗೆತನ ಸಾಧಿಸುವ ರಾಷ್ಟ್ರದ ಜತೆ ಕರಾವಳಿ ರಾಜ್ಯಗಳನ್ನು ಹೊಂದಿರುವ ನಾವು ಆದಷ್ಟು ಎಚ್ಚರದಿಂದ ಇರಬೇಕು ಮತ್ತು ನಮ್ಮ ಪಡೆಗಳನ್ನು ಸದಾ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಗುಜರಾತ್ ಒಂದು ಗಡಿ ರಾಜ್ಯ. ನಮ್ಮ ರಾಜ್ಯವು ಪಾಕಿಸ್ತಾನದ ಜತೆ ಭೂ ಮತ್ತು ಜಲ ಗಡಿಯನ್ನು ಹೊಂದಿದೆ. ನೆರೆ ರಾಷ್ಟ್ರವು ವೈರತ್ವದ ನೀತಿಯನ್ನು ನಮ್ಮ ಜತೆ ತೋರಿಸುವ ಈ ಸಂದರ್ಭದಲ್ಲಿ ನಮ್ಮ ಭದ್ರತಾ ಪಡೆಗಳು ಇನ್ನಷ್ಟು ಜಾಗೃತವಾಗಿರಬೇಕಾದ ಅಗತ್ಯವಿದೆ ಎಂದರು.
ಇವನ್ನೂ ಓದಿ