ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 23 ವರ್ಷ ಪಾಕ್ ಜೈಲಿನಲ್ಲಿ ಕೊಳೆತು ಭಾರತಕ್ಕೆ ವಾಪಸಾದ! (Pakistani jail | Gopal Das | Asif Ali Zardari | Supreme Court)
ಇಪ್ಪತ್ತಮೂರು ವರ್ಷಗಳ ನಂತರ ಪಾಕಿಸ್ತಾನದ ಜೈಲಿನಿಂದ ಬಿಡುಗಡೆಗೊಂಡು ಮಾತೃಭೂಮಿಗೆ ಕಾಲಿಟ್ಟಿದ್ದೇ ತಡ, ಆ ಅಮೃತ ಗಳಿಗೆಯಲ್ಲಿ ಏನು ಮಾಡಬೇಕೆಂದು ತೋಚದೆ ಒಮ್ಮೆಲೆ ನೆಲಕ್ಕೆ ಬಾಗಿ ಮರಳಿನ ನೆಲಕ್ಕೆ ಮುತ್ತು ಕೊಟ್ಟು ಭಾರತ ಮಾತೆಗೆ ವಂದಿಸುತ್ತಾ ಆನಂದಬಾಷ್ಪ ಸುರಿಸಿದ್ದಾರೆ ಪಂಜಾಬ್ ಮೂಲದ ಗೋಪಾಲ್ ದಾಸ್. ಇದೇ ವೇಳೆ ಸಣ್ಣ ವಯಸ್ಸಿನಲ್ಲಿ ನೋಡಿದ್ದ ಅವರ ಹಿರಿಯ ಸಹೋದರ ಮತ್ತು ಸಹೋದರಿ ಮನಮಿಡಿದು ಸ್ವಾಗತಿಸಿದರು.

ಪಾಕಿಸ್ತಾನ ಜೈಲಿನಲ್ಲಿ ಇಪ್ಪತ್ತ ಮೂರು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದ 52 ವರ್ಷದ ಗೋಪಾಲ್ ದಾಸ್ ಅವರನ್ನು ಭಾರತೀಯ ಸುಪ್ರೀಂ ಕೋರ್ಟ್‌ನ ಮನವಿಯ ಮೇರೆಗೆ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಮಾನವೀಯ ಮೌಲ್ಯದ ಆಧಾರದಲ್ಲಿ ಬಿಡುಗಡೆಗೆ ಅಸ್ತು ನೀಡಿದ್ದರು.

ಅಟ್ಟಾರಿಯಲ್ಲಿರುವ ಭಾರತ-ಪಾಕ್ ಜಂಟಿ ತಪಾಸಣಾ ಕೇಂದ್ರದಿಂದ ಪಾಕಿಸ್ತಾನದ ಅಧಿಕಾರಿಗಳಿಂದ ಬಂಧಮುಕ್ತಿಗೊಂಡು ಭಾರತದ ಗಡಿ ವಲಯ ಪ್ರವೇಶಿಸುತ್ತಿದ್ದಂತೆ ಮಾತೃಭೂಮಿಗೆ ಭಾವಪರವಶರಾಗಿ ದಾಸ್ ನಮಿಸಿದರು.

ಇವರನ್ನು ಬರಮಾಡಿಕೊಳ್ಳಲು ಸಹೋದರ ಆನಂದ್ ವಿರ್, ಸಹೋದರಿಯರು ಮತ್ತು ಸಹೋದರಿಯ ಮಗಳು ನವಜೋತ್ ಸೇರಿದಂತೆ ಗುರುದಾಸ್‌ ಪುರ ಜಿಲ್ಲೆಯ ಬಾಯಿನಿ ಮೈನ್ ಖಾನ್ ಗ್ರಾಮದಿಂದ ಬೆರಳೆಣಿಕೆಯಷ್ಟು ಮಂದಿ ಆಗಮಿಸಿದ್ದರು.

1987ರ ಜೂನ್ ತಿಂಗಳಲ್ಲಿ ಗೋಪಾಲ್ ದಾಸ್ ಪಾಕ್ ಸೇನೆಯಿಂದ ಬಂಧನಕ್ಕೊಳಗಾಗಿದ್ದರು. ಬಂಧನಕ್ಕೆ ಪ್ರಮುಖ ಕಾರಣವೇನೆಂಬುದನ್ನು ತಿಳಿಸಲು ಪಾಕ್ ನಿರಾಕರಿಸಿದೆ. ಆದರೆ ಬಂಧಮುಕ್ತರಾದ ದಾಸ್ ಹೇಳುತ್ತಿರುವುದೇನೆಂದರೆ, ತಾನು ಭಾರತದ ಪರವಾಗಿ ಗೂಢಚರ್ಯೆ ನಿರ್ವಹಿಸುತ್ತಿರುವ ವೇಳೆ ಸೆರೆಯಾಗಿರುವುದಾಗಿಯೂ, ಈ ವೇಳೆ ಭಾರತೀಯ ಗೂಢಚರ್ಯ ಇಲಾಖೆ ತನ್ನ ಬಂಧನವನ್ನು ನಿರ್ಲಕ್ಷಿಸಿ ಈ ವಿಷಯವನ್ನು ಕೈಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಜೀವನದ ಅಮೂಲ್ಯ ಸಮಯವನ್ನು ಪಾಕ್ ಜೈಲಿನಲ್ಲೇ ಕಳೆಯುವಂತಹಾ ಸ್ಥಿತಿ ತನ್ನ ಜೀವನದಲ್ಲಿ ಎದುರಾಗಿದ್ದಕ್ಕೆ ಅತೀವ ದುಃಖ ವ್ಯಕ್ತ ಪಡಿಸಿದ್ದಾರೆ.

ಇದೇ ವೇಳೆ ಗೋಪಾಲ್ ದಾಸ್ ಅವರು ಪಾಕಿಸ್ತಾನದ ಅಧ್ಯಕ್ಷ ಮತ್ತು ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯ ರಾಜಕೀಯ ವ್ಯವಸ್ಥೆ ಹದಗೆಟ್ಟು ಹೋಗಿದ್ದು, ಪಾಕ್ ಜೈಲಿನಲ್ಲಿ ಈಗಲೂ ಕೊಳೆಯುತ್ತಿರುವ ಭಾರತೀಯ ಕೈದಿಗಳ ಬಗ್ಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಮೊಹಾಲಿಯಲ್ಲಿ ನಡೆದ ವಿಶ್ವಕಪ್ ಸೆಮಿ ಫೈನಲ್ ಕ್ರಿಕೆಟ್ ವೇಳೆ ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರು ಮತ್ತು ಭಾರತೀಯ ಪ್ರಧಾನಿ ಮನಮೋಹನ ಸಿಂಗ್ ಇಬ್ಬರೂ ಒಟ್ಟಿಗೆ ಕುಳಿತು ಭಾರತ-ಪಾಕ್ ಕ್ರಿಕೆಟ್ ವೀಕ್ಷಿಸಿದ್ದೂ, ಹಾಗೂ ಈ ಬೆಳವಣಿಗೆಯನ್ನು ಇದು ಎರಡು ರಾಷ್ಟ್ರಗಳ ಭವಿಷ್ಯದ ಸಾಮರಸ್ಯದ ಸಂಕೇತ ಎಂದು ಬ್ರಿಟನ್ ಅಧ್ಯಕ್ಷ ಡೇವಿಡ್ ಕ್ಯಾಮರೂನ್ ವರ್ಣಿಸಿದ್ದು, ಹಾಗೂ ಸುಪ್ರೀಂ ಕೋರ್ಟ್‌ನ ಮನವಿ ಮುಂತಾದ ಅಂಶಗಳು ಈ ಬೆಳವಣಿಗೆಯ ಹಿಂದೆ ಕೆಲಸಮಾಡಿದೆ.
ಇವನ್ನೂ ಓದಿ