ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶ್ರೀರಾಮನವಮಿ ದಿನ ಭಕ್ತರಿಗೆ ಸಾಯಿಬಾಬಾ ದರ್ಶನ? (Sathya Sai Baba | Puttaparthi | treatment | kidneys | Sri Sathya Sai Institute)
ಕಳೆದ 14 ದಿನಗಳಿಂದ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ವಯಂಘೋಷಿತ ದೇವಮಾನವ, ಸತ್ಯಸಾಯಿ ಬಾಬಾ ಶ್ರೀರಾಮ ನವಮಿ (ಏಪ್ರಿಲ್ 12) ದಿನದಂದು ಭಕ್ತರಿಗೆ ದರ್ಶನ ನೀಡಲಿದ್ದಾರೆ ಎಂದು ವದಂತಿಗಳು ದಟ್ಟವಾಗಿ ಹಬ್ಬಿದೆ.

ಹೃದಯ, ಮೂತ್ರಪಿಂಡ, ಶ್ವಾಸಕೋಶ ಮತ್ತಿತರ ಅಂಗಾಂಗಳ ಕಾಯಿಲೆಯಿಂದ ಬಳಲುತ್ತಿದ್ದ ಸಾಯಿಬಾಬಾ ಅವರ ಆರೋಗ್ಯ ಕಳೆದ ಎರಡು ದಿನಗಳಿಂದ ಸುಧಾರಿಸುತ್ತಿದೆ. ಅವರನ್ನು ಪರೀಕ್ಷಿಸುತ್ತಿರುವ ವೈದ್ಯರ ಚಿಕಿತ್ಸೆಗೆ ಬಾಬಾ ಸ್ಪಂದಿಸುತ್ತಿದ್ದಾರೆ. ಶ್ವಾಸಕೋಶದಲ್ಲಿನ ಸೋಂಕು ಕಡಿಮೆಯಾಗುತ್ತಿದೆ. ಮೂತ್ರಪಿಂಡಗಳು ಚೇತರಿಸಿಕೊಳ್ಳುತ್ತಿವೆ ಎಂದು ಶ್ರೀ ಸತ್ಯಸಾಯಿ ಬಾಬಾ ಆಸ್ಪತ್ರೆಯ ಮೂಲಗಳು ಭಾನುವಾರ ಬೆಳಿಗ್ಗೆ ಬಿಡುಗಡೆ ಮಾಡಿರುವ ಆರೋಗ್ಯ ವರದಿಯಲ್ಲಿ ವಿವರಿಸಿದೆ.

ಅಲ್ಲದೇ ಸಾಯಿಬಾಬಾ ಅವರು ದರ್ಶನ ನೀಡಲೇಬೇಕೆಂದು ಭಕ್ತರ ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಬಾಬಾ ಅವರು ಶ್ರೀರಾಮನವಮಿ ದಿನದಂದು ಭಕ್ತಕೋಟಿಗೆ ದರ್ಶನ ನೀಡುವ ಅವಕಾಶ ದಟ್ಟವಾಗಿದೆ ಎಂದು ಊಹಾಪೋಹಗಳಿಂದಾಗಿ ಪುಟ್ಟಪರ್ತಿಯತ್ತ ಭಕ್ತರ ದಂಡು ಹರಿದು ಬರತೊಡಗಿದೆ.

ಮತ್ತೊಂದೆಡೆ ಸಾಯಿಬಾಬಾ ಅವರು ಗುಣಮುಖರಾಗಲೆಂದು ಪುಟ್ಟಪರ್ತಿ ಮತ್ತು ಪರಿಸರದ ಗ್ರಾಮಗಳ ಜನತೆ ನಿರಂತರ ಪೂಜಾ ಕಾರ್ಯಗಳಲ್ಲಿ ತೊಡಗಿದ್ದಾರೆ. ಮನೆ, ಮನೆಯಲ್ಲೂ ಸಾಯಿ ಭಜನೆ, ಪೂಜೆಗಳು ನಡೆಯುತ್ತಿವೆ.
ಇವನ್ನೂ ಓದಿ