ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ಆರೋಗ್ಯಸ್ಥಿತಿ; ಕಳವಳಗೊಂಡ ಭಕ್ತರು ಕೋರ್ಟ್‌ ಮೊರೆ (Puttaparthi | Sri Sathya Sai Central Trust | Sri Satya Saibaba | Devotees)
ಶ್ರೀ ಪುಟ್ಟಪರ್ತಿ ಸತ್ಯಸಾಯಿ ಬಾಬಾ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಮುಂದುವರಿದಿದ್ದು, ಇದರಿಂದ ತಲ್ಲಣಗೊಂಡ ಭಕ್ತರು ಬಾಬಾ ಆರೋಗ್ಯ ಬಗ್ಗೆ ನಿಖರ ಮಾಹಿತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಬಾಬಾ ಆರೋಗ್ಯದ ಬಗೆಗಿನ ಕಳವಳವು ಇನ್ನೂ ಮುಂದುವರಿದಿದೆ. ಬಾಬಾ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಇನ್ನು ಕೆಲವೇ ದಿನದೊಳಗೆ ದರ್ಶನ ನೀಡಲಿದ್ದಾರೆಂಬ ವರದಿ ಲಭಿಸಿದ್ದರೂ ಸಾಧ್ಯವಾಗಲಿಲ್ಲ. ಬಾಬಾ ಆರೋಗ್ಯದ ಬಗ್ಗೆಯೂ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಇದರಿಂದ ಭಕ್ತರು ತಲ್ಲಣಗೊಂಡಿದ್ದಾರೆ.

85 ವರ್ಷ ವಯಸ್ಸಿನ ಬಾಬಾ ಅವರನ್ನು ಮೂರು ವಾರಗಳ ಹಿಂದೆಯೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪುಟ್ಟಪರ್ತಿಯ ಶ್ರೀ ಸತ್ಯ ಸಾಯಿ ಉನ್ನತ ವೈದಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಕೃತಕ ಉಸಿರಾಟವನ್ನು ಆಳವಡಿಸಲಾಗದೆ.

ಬಾಬಾ ಅವರ ಆರೋಗ್ಯವು ಸ್ಥಿರವಾಗಿಯೇ ಇದೆ ಎಂದು ವೈದ್ಯರು ಹೇಳುತ್ತಾರೆ. ಪ್ರಾಯವಾದ ವ್ಯಕ್ತಿಯಾಗಿದ್ದರಿಂದ ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ ಎಂದಿದ್ದಾರೆ. ಈ ನಡುವೆ ಬಾಬಾ ಅವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಹೃದಯತಜ್ಞ ಸೇರಿದಂತೆ ಇಬ್ಬರು ವೈದ್ಯರನ್ನು ಅಮೆರಿಕಾದಿಂದ ಕರೆಯಿಸಿಕೊಳ್ಳಲಾಗಿದೆ.
ಇವನ್ನೂ ಓದಿ