ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಟ್ಟಪರ್ತಿ: ಕಪ್ಪು ಹಣ ಹಿಂಪಡೆಯುತ್ತಿರುವ ರಾಜಕಾರಣಿಗಳು (Puttaparti | Saibaba | Block Money | Scandal)
ಭಕ್ತರ ಆರಾಧ್ಯ ದೈವ ಸತ್ಯಸಾಯಿ ಬಾಬಾ ಅನಾರೋಗ್ಯದಿಂದ ಬಳಲುತ್ತಿರುವುದರ ಹಿನ್ನೆಲೆಯಲ್ಲಿ ರಾಜಕಾರಣಿಗಳು ಪ್ರಶಾಂತಿನಿಲಯಂನಲ್ಲಿಟ್ಟಿದ್ದ ಸಾವಿರಾರು ರೂ. ಬೇನಾಮಿ ಹಣವನ್ನು ವಾಪಸ್‌ ಪಡೆಯುತ್ತಿದ್ದಾರೆ.

ಈ ಕುರಿತ ಸ್ಫೋಟಕ ಮಾಹಿತಿಯನ್ನು ತೆಲುಗಿನ ಆಂಧ್ರಜ್ಯೋತಿ ಪತ್ರಿಕೆ ವರದಿ ಮಾಡಿದೆ.

ಬಾಬಾ ಅವರಿಗೆ ಭಕ್ತರು ಚಿನ್ನಾಭರಣ, ಹಾಗೂ ಹಣಕಾಸಿನ ರೂಪದಲ್ಲಿ ನೀಡಿದ ಸುಮಾರು 1.30 ಲಕ್ಷ ಕೋಟಿ ರೂ. ಮೌಲ್ಯದ ಕಾಣಿಕೆಗಳನ್ನು ಟ್ರಸ್ಟಿಗಳು ರಹಸ್ಯವಾಗಿ ಹಂಚಿಕೊಳ್ಳುತ್ತಿರುವ ಆಘಾತಕಾರಿ ಸಂಗತಿಯನ್ನೂ ಪತ್ರಿಕೆ ಬಯಲು ಮಾಡಿದೆ.

165 ದೇಶಗಳಲ್ಲಿರುವ ಬಾಬಾ ಭಕ್ತರು ಪ್ರತಿನಿತ್ಯ ಆನ್‌ಲೈನ್‌ ಮೂಲಕ ಕಳುಹಿಸುತ್ತಿರುವ ಹಣ ಹಾಗೂ ಚಿನ್ನಾಭರಣಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಮಾಧ್ಯಮಗಳು ಟ್ರಸ್ಟ್‌ನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ವರದಿ ಮಾಡಿದ್ದರಿಂದ ಆತಂಕಗೊಂಡಿರುವ ಟ್ರಸ್ಟ್‌ ಸದಸ್ಯರು ರಹಸ್ಯ ಸಭೆ ನಡೆಸಿದ್ದಾರೆ. ಅಕ್ರಮಗಳಲ್ಲಿ ಪಾಲ್ಗೊಳ್ಳದ ಟ್ರಸ್ಟ್‌ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ ಎನ್ನಲಾಗಿದೆ.

ಅಕ್ರಮದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಸರಕಾರ ಸಂಪುಟ ಸಭೆ ನಡೆಸಿದ್ದು, ಸರಕಾರದ ಪ್ರತಿನಿಧಿಯಾಗಿ ವಿತ್ತೀಯ ಇಲಾಖೆ ಮುಖ್ಯ ಕಾರ್ಯದರ್ಶಿ ಎಲ್‌.ವಿ.ಸುಬ್ರಹ್ಮಣ್ಯ ಅವರನ್ನು ಪುಟ್ಟಪರ್ತಿಗೆ ಕಳುಹಿಸಲು ನಿರ್ಧರಿಸಿದೆ.
ಇವನ್ನೂ ಓದಿ