ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ನಿಧನ: ಆಂಧ್ರಪ್ರದೇಶದಲ್ಲಿ ನಾಲ್ಕು ದಿನಗಳ ಶೋಕಾಚರಣೆ (Sai Baba | State mourning | Andhra Pradesh)
EVENT
ದೇವಮಾನವ ಸತ್ಯ ಸಾಯಿಬಾಬಾ ಅವರ ನಿಧನದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಶೋಕಾಚರಣೆ ನಡೆಸಲು ಸರಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಸತ್ಯ ಸಾಯಿಬಾಬಾ ಅವರ ಅಂತ್ಯಸಂಸ್ಕಾರವನ್ನು ಸಾಯಿ ಕುಲವಂತ್ ಹಾಲ್‌ನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಎನ್.ಕಿರಣ್ ರೆಡ್ಡಿ ತಿಳಿಸಿದ್ದಾರೆ.

ಸಮಾಜ ಸುಧಾರಕ, ಪವಾಡ ಪುರುಷ ದೇವಮಾನವರಾದ ಸತ್ಯಸಾಯಿ ಬಾಬಾ ಅವರ ಗೌರವಾರ್ಥವಾಗಿ ಬುಧವಾರದವರೆಗೆ ಶೋಕಾಚಾರಣೆ ಜಾರಿಯಲ್ಲಿರಲಿದೆ ಎಂದು ಹೇಳಿದ್ದಾರೆ.

ಸರಕಾರಗಳು ಮಾಡದಂತಹ ಅಭಿವೃದ್ಧಿ ಕಾರ್ಯಗಳನ್ನು ಸತ್ಯ ಸಾಯಿಬಾಬಾ ಅವರ ಸಂಸ್ಥೆಗಳು ಕಾರ್ಯನಿರ್ವಹಿಸಿದ್ದು,ನೂರಾರು ಗ್ರಾಮಗಳಿಗೆ ಶುದ್ಧವಾದ ಕುಡಿಯುವ ನೀರಿನ ಯೋಜನೆ, ಶಿಕ್ಷಣ, ಧಾರ್ಮಿಕ, ವೈದ್ಯಕೀಯ ಸೇವೆಗಳು ಮರೆಯಲಾರದಂತಹವುಗಳಾಗಿವೆ ಎಂದು ಬಣ್ಣಿಸಿದ್ದಾರೆ.

ಶ್ರೀ ಸಾಯಿಬಾಬಾ, ಪ್ರೀತಿ, ವಿಶ್ವಾಸ ಮತ್ತು ಭಾನೋದ್ವೇಗದ ಸಂಕೇತವಾಗಿದ್ದಾರೆ. ಬಾಬಾ ಅವರ ಸೇವೆಗಳು ಕೇವಲ ರಾಜ್ಯಕ್ಕೆ, ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂಪೂರ್ಣ ವಿಶ್ವದಾದ್ಯಂತ ಪಸರಿಸಿವೆ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಇವನ್ನೂ ಓದಿ