ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಎಂಡೋಸಲ್ಫಾನ್‌ಗೆ ಭಾರತದಲ್ಲಿ ಮಾತ್ರ ನಿಷೇಧ ಇಲ್ಲ ಏಕೆ?' (Endosulfan | Krishna Iyer | Prime Minister | Manmohan Singh)
ಹಾನಿಕಾರಕ ಎಂಡೋ ಸಲ್ಫಾನ್‌ ಕೀಟನಾಶಕವನ್ನು ರಾಷ್ಟ್ರಾದ್ಯಂತ ನಿಷೇಧಿಸುವಂತೆ ಕೇರಳ ಸರಕಾರ ಮನವಿ ಮಾಡಿದರೂ ಈ ಬಗ್ಗೆ ನಿರ್ಲಕ್ಷಿಸಿರುವ ಪ್ರಧಾನಿ ಮನಮೋಹನ ಸಿಂಗ್‌ ಅವರನ್ನು ಸುಪ್ರೀಂ ಕೋರ್ಟ್‌ ಮಾಜಿ ಮುಖ್ಯನ್ಯಾಯಮೂರ್ತಿ ಪಿ.ಕೃಷ್ಣ ಅಯ್ಯರ್‌ ತೀವ್ರವಾಗಿ ಟೀಕಿಸಿದ್ದಾರೆ.

ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಅಯ್ಯರ್‌, ತೀವ್ರ ದುಷ್ಲರಿಣಾಮ ಉಂಟು ಮಾಡುತ್ತಿರುವ ಎಂಡೋಸಲ್ಫಾನ್‌ ಕೀಟನಾಶಕ ನಿಷೇಧಕ್ಕೆ ಕೇರಳದ ಸಚಿವರು ಮನವಿ ಮಾಡಿದರೂ ಪ್ರಧಾನಮಂತ್ರಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಯ್ಯರ್‌ ಆಪಾದಿಸಿದ್ದಾರೆ.

ಎಂಡೋಸಲ್ಫಾನ್‌ ನಿಷೇಧದ ಕುರಿತು ಪ್ರಧಾನಿ ತಮ್ಮ ನಿಲುವು ಬದಲಿಸದೇ ಇರುವುದು ದುರಾದೃಷ್ಟಕರ ಸಂಗತಿ ಎಂದು ಅಯ್ಯರ್‌ ಹೇಳಿದ್ದಾರೆ.

ಎಂಡೋಸಲ್ಫಾನ್‌ ನಿಷೇಧಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ಅಚ್ಯುತಾನಂದನ್‌ ಸೋಮವಾರ ನಡೆಸಿದ್ದ ಒಂದು ದಿನದ ಉಪವಾಸ ಸತ್ಯ್ರಾಗ್ರಹಕ್ಕೆ ಅಯ್ಯರ್‌ ಬೆಂಬಲ ವ್ಯಕ್ತಪಡಿಸಿದ್ದರು.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಹಾಗೂ ಯೂರೋಪ್‌ ಒಕ್ಕೂಟ ಸೇರಿದಂತೆ 63ಕ್ಕೂ ಹೆಚ್ಚು ದೇಶಗಳಲ್ಲಿ ಮಾರಕ ಕೀಟನಾಶಕ ಎಂಡೋಸಲ್ಫಾನ್‌ ನಿಷೇಧಿಸಿದ್ದರೂ ಭಾರತ ಮಾತ್ರ ಎಂಡೋಸಲ್ಫಾನ್‌ನ ಅತಿದೊಡ್ಡ ಗ್ರಾಹಕನಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಂಡೋಸಲ್ಫಾನ್‌ ನಿಷೇಧಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರಧಾನ ಮಂತ್ರಿಯನ್ನು ಒತ್ತಾಯಿಸಿದ್ದಾರೆ.

ಈ ನಡುವೆ ಎಡಪಕ್ಷ ಸಂಸದರು ಎಂಡೋಸಲ್ಫಾನ್‌ ನಿಷೇಧಕ್ಕೆ ಆಗ್ರಹಿಸಿ ಮಂಗಳವಾರ ಸಂಸತ್‌ನಲ್ಲಿ ಪ್ರತಿಭಟನೆ ನಡೆಸಿದರು. ಸರಕಾರ ಹಾನಿಕಾರಕ ಕೀಟ ನಾಶಕವನ್ನು ನಿಷೇಧಿಸದೇ ಇರುವುದನ್ನು ನೋಡಿದರೆ ಇದೊಂದು ಹಗರಣ ಎಂದು ಸಾಬೀತಾಗುತ್ತದೆ ಎಂದು ಆಪಾದಿಸಿದರು.
ಇವನ್ನೂ ಓದಿ